ಕೊಪ್ಪಳ ಜಿಲ್ಲಾ ಡೈರೆಕ್ಟರಿ ೩ನೇ ಆವೃತ್ತಿ ಲೋಕಾರ್ಪಣೆ

koppal_district_directory-2017-kannadanet-12

ಸಂಸ್ಥೆ,ವಿದ್ಯಾಲಯಗಳು ಮಾಡಬೇಕಾದ ಕೆಲಸವನ್ನು ಕನ್ನಡನೆಟ್ ಡಾಟ್ ಕಾಂ ಬಳಗ ಮಾಡುತ್ತಿರುವುದು ಶ್ಲಾಘನೀಯ – ವಿಠ್ಠಪ್ಪ ಗೋರಂಟ್ಲಿ

ಕೊಪ್ಪಳ : ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಂಡಿರುವ ಕನ್ನಡನೆಟ್ ಡಾಟ್ ಕಾಂ ಬಳಗ ಕಳೆದ ಹಲವಾರು ವರ್ಷಗಳಿಂದ ಆನಲೈನ್ ಪತ್ರಿಕೆಯ ಮೂಲಕ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿರುವುದು ಹೆಮ್ಮೆಯ ವಿಷಯ ಎಂದು ಹಿರಿಯ ಪತ್ರಕರ್ತ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕನ್ನಡನೆಟ್ ಡಾಟ್ ಕಾಂ ಬಳಗದ ಕೊಪ್ಪಳ ಜಿಲ್ಲಾ ಡೈರೆಕ್ಟರಿಯ ೩ನೇ ಆವೃತ್ತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

kdd-koppal-kannadanet-com1
ಪ್ರಾಯೋಗಿಕವಾಗಿ ಹೊಸ ಪ್ರಯತ್ನಗಳಿಗೆ ಕೈ ಹಾಕುವ ಮೂಲಕ ಜಿಲ್ಲೆಯಾದ್ಯಂತ ಕನ್ನಡನೆಟ್ .ಕಾಂ ಪತ್ರಿಕೆಯ ಹೆಸರು ಮಾಡಿದ್ದು ಹೆಮ್ಮೆಯ ವಿಷಯ . ಈ ಜಿಲ್ಲಾ ಡೈರೆಕ್ಟರಿಯು ಸರಕಾರಿ, ಖಾಸಗಿ, ಸಂಘ ,ಸಂಸ್ಥೆಗಳು , ರಾಜಕಾರಣಿಗಳು, ಶಾಲಾ, ಕಾಲೇಜುಗಳು ಹಾಗೂ ಹೋರಾಟಗಾರರ ಮಾಹಿತಿಯನ್ನು ನೀಡಿರುವುದು ಹಾಗೂ ಜಿಲ್ಲೆಯ ಚುನಾವಣಾ ರಾಜಕೀಯ ಇತಿಹಾಸವನ್ನು ನೀಡಿರುವುದು ಈ ಡೈರೆಕ್ಟರಿಗಳನ್ನು ಸಂಗ್ರಹಯೋಗ್ಯ ಮಾಡಿವೆ. ಕನ್ನಡನೆಟ್.ಕಾಂ ಬಳಗ ೩ನೇ ಆವೃತ್ತಿ ಹೊರತಂದಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ . ಹೊಸ ಪರಿಷ್ಕೃತ ಆವೃತ್ತಿಯು ಚಿತ್ತಾಕರ್ಷಕವಾಗಿ ಮೂಡಿ ಬಂದಿದೆ. ಜಿಲ್ಲೆಯಲ್ಲಿ ಈ ರೀತಿಯ ಪ್ರಯೋಗಗಳು ನಡೆದಿರುವುದು ಶ್ಲಾಘನೀಯ ಇಂತಹ ಪ್ರತಿಭೆಗಳನ್ನು ನಾವು ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು. ಒಂದು ಸಂಸ್ಥೇ, ವಿದ್ಯಾಲಯ ಮಾಡಬೇಕಾಗಿರುವ ಕೆಲಸವನ್ನು ಈ ಮೊದಲು ಸಿರಾಜ್ ಬಿಸರಳ್ಳಿ ಈಗ ಹೆಚ್.ವಿ.ರಾಜಾಬಕ್ಷಿ ಸಂಪಾದಕತ್ವದ ಕನ್ನಡನೆಟ್ ಡಾಟ್ ಕಾಂ ಬಳಗ ಮಾಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡನೆಟ್.ಡಾಟ್ ಕಾಂ ಸಂಪಾದಕ ಹೆಚ್.ವಿ.ರಾಜಾಬಕ್ಷಿ , ಪತ್ರಕರ್ತ ಸಿರಾಜ್ ಬಿಸರಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: