ಡಾ|| ಹುಟ್ಟುಹಬ್ಬ ನಿಮಿತ್ಯ ಕಲಾವಿದರಿಗೆ ಸನ್ಮಾನ-ಮಾಹಿತಿ ಆಹ್ವಾನ

dr_rajkumar_birthday


ಕೊಪ್ಪಳ, ಏ. ೨೦. ಕನ್ನಡದ ಮೇರು ನಟ, ಸಾರ್ವಭೌಮ ಡಾ|| ರಾಜಕುಮಾರ ಅವರ ಹುಟ್ಟುಹಬ್ಬ ನಿಮಿತ್ಯ
ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸನ್ಮಾನಕ್ಕೆ ಕಲಔಇದರಿಂದ ಮಾಹಿತಿ ಆಹ್ವಾನಿಸಲಾಗಿದೆ ಎಂದು ಕಾರ್ಯಕ್ರಮ ಸಂಘಟಕ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಜಾನಪದ ಪರಿಷತ್ತು ಮತ್ತು ಸ್ವರಭಾಋತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಜಂಟಿಯಾಗಿ ಡಾ|| ರಾಜ್ ಹುಟ್ಟುಹಬ್ಬ ಹಮ್ಮಿಕೊಳ್ಳಲಾಗಿದ್ದು, ಕೊಪ್ಪಳದ ಸೈಯ್ಯದ್ ಫೌಂಡೇಶನ್‌ನ ಕೆ.ಎಂ.ಸೈಯ್ಯದ್ ಸನ್ಮಾನದ ಪ್ರಾಯೋಜಕತ್ವವಹಿಸಿಕೊಂಡಿದ್ದಾರೆ.
ರಾಜ್ ಹುಟ್ಟು ಹಬ್ಬವನ್ನು ಸ್ಮರಣೀಯ ರೀತಿಯಲ್ಲಿ ಆಚರಿಸಲು ಸಿದ್ದತೆ ನಡೆಸಿದ್ದೇವೆ. ಹುಟ್ಟುಹಬ್ಬದಲ್ಲಿ ೧೦ ಜನ ಆರ್ಕೆಸ್ಟ್ರಾ ಗಾಯಕರು ಮತ್ತು ೫ ಜನ ಸುಗಮ ಸಂಗೀತ ಕಲಾವಿದರಿಗೆ ಗೌರವ ಸನ್ಮಾನ ಮಾಡಲಾಗುವದು ಅದಕ್ಕಾಗಿ ಕಲಾವಿದರು ಪುರುಷರು ಕನಿಷ್ಠ ೧೦ ವರ್ಷದಿಂದ ಮತ್ತು ಮಹಿಳೆಯರು ಕನಿಷ್ಠ ೫ ವರ್ಷದಿಂದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ದಾಖಲೆಯೊಂದಿಗೆ ಮಾಹಿತಿ ನೀಡಲು ಕೋರಲಾಗಿದ್ದು. ಹೆಚ್ಚಿನ ಮಾಹಿತಿ ಮತ್ತು ಮಾಹಿತಿಯನ್ನು ಮಂಜುನಾಥ ಜಿ. ಗೊಂಡಬಾಳ ನೀಡಬಹುದು ಮೊ:೯೪೪೮೩೦೦೦೭೦.

Please follow and like us: