ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹೆಸರಿನ ದುರ್ಬಳಕೆ

ಕೊಪ್ಪಳ ಜಿಲ್ಲೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಹಲವಾರು ವರ್ಷಗಳಿಂದ ಅನೇಕ ಮಹತ್ವದ ಕಾರ್ಯ ಮಾಡುತ್ತಾ ಉತ್ತಮ ಹೆಸರನ್ನು ಉಳಿಸಿಕೊಂಡಿದೆ. ಆದರೆ ಆ ಹೆಸರನ್ನು ಇತ್ತೀಚೆಗೆ ಬೇರೆ ಯಾರು ಯಾರೋ ಬಳಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಒಂದು ವೇಳೆ ಆ ಹೆಸರಿನ ದುರ್ಬಳಕೆ ಮಾಡಿಕೊಂಡು ಏನಾದರೂ ಮಾಡಿದರೆ ಅದಕ್ಕೂ ನಮಗೂ ಸಂಭಂಧವಿಲ್ಲ. ಅಂತವರಿಗೆ ಸಾರ್ವಜನಿಕರು ಸಹಕರಿಸಬಾರದೆಂದು ಈ ಮೂಲಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವಿಠ್ಠಪ್ಪ ಗೋರಂಟ್ಲಿ, ಭಾರಧ್ವಜ್, ಡಿ.ಎಚ್.ಪೂಜಾರ್, ಬಸವರಾಜ್ ಶೀಲವಂತರ, ಯೂಸುಪ್ ಖಾನ್, ಹನುಮೇಶ್ ಪೂಜಾರ್, ಎಸ್.ಎ. ಗಫಾರ್, ಮುತಾಂದವರು ಸ್ಪಷ್ಟನೆ ನೀಡಿದ್ದಾರೆ.