ಮಾದಿಗರು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು- ತಿಮ್ಮಾಪೂರು

madiga-samavesha

madiga-samavesha-hubli
ಕರ್ನಾಟಕ ರಾಜ್ಯದ ಪರಿಶಿಷ್ಠ ಜಾತಿಯಲ್ಲಿ ಅತ್ಯಧಿಕ ಜನಸಂಖ್ಯೆ ಇರುವ ಮಾದಿಗರು ಶೈಕ್ಷಣಿಕ ರಂಗ ಸೇರಿದಂತೆ ರಾಜಕೀಯವಾಗಿ ಆರ್ಥಿಕವಾಗಿ ಸಬಲರಾಗಬೇಕು. ಅಲದೇ ಯುವ ಪಿಳಗೆಯವರಲ್ಲಿ ಜನಾಂಗದ ಐತಿಹಾಸಿಕ ಹಿನ್ನೆಲೆ ಬಗ್ಗೆ ಹೇಳುವದರ ಮೂಲಕ ಜನಾಂಗದ ಸಂಘಟಣೆಯನ್ನು ಬಲಪಡಿಸಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಆರ್.ಬಿ.ತಿಮ್ಮಾಪೂರು ಹೇಳಿದರು.
ಅವರು ದಿನಾಂಕಃ- ೦೬-೧೧-೨೦೧೬ ರಂದು ಕೊಪ್ಪಳದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಹುಬ್ಬಳ್ಳಿಯಲ್ಲಿ ನಡೆಯಲಿರುವ ಮಾದಿಗ ಮಹಾಸಮಾವೆಶ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಡಾ|| ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣ ಸಂಘಟಣೆ ಹೋರಾಟವನ್ನು ರೂಡಿಸಿಕೊಂಡು ಸಮಾಜವು ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಪ್ರತಿ ಮನೆ ಮನೆಗೂ ಬೇಟಿ ನೀಡಿ ಸಮಾವೇಶದ ಉದ್ದೇಶವನ್ನು ತಿಳಿಸಿ ಎಲ್ಲರನ್ನೂ ಕರೆತರಬೇಕು. ಒಬ್ಬ ವ್ಯಕ್ತಿ ಅಕ್ಷರ ಕಲಿತರ ಇಡೀ ಸಮಾಜವನ್ನು ಬದಲಾಯಿಸಬಹುದು. ಅದಕ್ಕೆ ಅದ್ಬುತ ಉದಾಹರಣೆ ನಮ್ಮರೇಯಾದ ಬಾಬಾ ಸಾಹೇಬ ಅಂಬೇಡ್ಕರ ಮತ್ತು ಬಾಬು ಜಗಜೀವನರಾಂ. ಸಮಾಜದಲ್ಲಿನ ಅಸಮಾಜತೆ ವಿರುದ್ದ ಹೋರಾಡಲು ಶಿಕ್ಷಣ ಬಹಳ ಅವಶ್ಯಕ ಎಂದರು.
ಮಾಜಿ ಮಂತ್ರಿಗಳಾದ ಹನುಮಂತಪ್ಪ ಹಾಲ್ಕೋಡ ಮಾತನಾಡಿ ಮಾದಿಗ ಜನಾಂಗದ ರಾಷ್ಟ್ರ ಮಟ್ಟದ ನಾಯಕರಾದ ಮಂದಕೃಷ್ಣರರು ಹೋರಾಟದ ಫಲವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ವಿಧಾನ ಪರಿಷತ್‌ನಲ್ಲಿ ಒಳಮೀಸಲಾತಿ ವರ್ಗಿಕರಣ ಚರ್ಚಿಸಿ ಅನುಮೋದಿಸಿ ಮಾದಿಗರಿಗೆ ಪರಿಶೀಷ್ಠ ಜಾತಿಯಲ್ಲಿ ಮೀಸಲಾತಿ ನೀಡುವಂತೆ ಶಿಫಾರಸ್ಸು ನೀಡಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಸದಾಶಿವ ವರಧಿಯನ್ನು ಜಾರಿಗೆ ತರಬೇಕೆಂದು ಮಾಡುವ ಸ್ವಾಭಿಮಾನದ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಸಬೇಕು. ಅಲ್ಲದೇ ಇದೇ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ತಜ್ಞ ಪ್ರೋ.ಕೆ.ಸದಾಶಿವರವರು ಡಾ|| ಬಾಬು ಜಗಜೀವನ ರಾಂ ರವರ ಜೀವನಾಧಾರಿತ ೧೨ ಸಂಪುಟಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು. ಸಮಾವೇಶದ ಕಾರ್ಯದರ್ಶಿ ಮೋಹನ ಹಿರೇಮನಿ ಮಾತನಾಡಿ ಇದೊಂದು ಮಾದಿಗರ ಪಕ್ಷಾತೀತ ಸಮಾವೇಶವಾಗಿದೆ. ಇದರಲ್ಲಿ ಕೇಂದ್ರ ಮಂತ್ರಿಗಳಾದ ರಮೇಶ ಜಿಗಜಿಣಗಿ, ಮಾಜಿ ಕೇಂದ್ರ ಸಚಿವರು ಕೆ.ಹೆಚ್.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವರಾದ ಹೆಚ್.ಆಂಜನೇಯ, ಮಾಜಿ ಮಂತ್ರಿಗಳಾದ ಗೋವಿಂದ ಕಾರಜೋಳ, ಎ. ನಾರಾಯಣಸ್ವಾಮಿ, ಸಂಸದರಾದ ಚಂದ್ರಪ್ಪ ಹಾಗೂ ಹಿರಿಯ ಅಧಿಕಾರಿ ವರ್ಗದವರು ಭಾಗವಹಿಸುತ್ತಾರೆಂದು ಮಾತನಾಡಿದರು. ಮುಖಂಡರಾದ ಬಸವರಾಜ ದಡೆಸಗೂರು, ಜಿಲ್ಲಾ ಪಂಚಾಯತ ಸದಸ್ಯರಾದ ಗುಳಪ್ಪ ಹಲಗೇರಿ, ಸಮಾಜದ ಹಿರಿಯರಾದ ಗವಿಸಿದ್ದಪ್ಪ ಕಂದಾರಿ, ಮಾರುತ್ತೇಪ್ಪ ಹಲಗೇರಿ ಶುಕ್ರರಾಜ ತಾಲಕೇರಿ, ದೇವಪ್ಪ ಕಾಮದೊಡ್ಡಿ, ಮಾಜಿ ಜಿ.ಪಂ.ಸದಸ್ಯರಾದ ಈರಪ್ಪ ಕುಡಗುಂಟಿ, ವಿನಯಕುಮಾರ ಮೇಲಿನಮನಿ, ಪರಶುರಾಮಪ್ಪ, ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಡಾ|| ಜ್ಞಾನಸುಂದರ ಸಿದ್ದೇಶ ಪೂಜಾರ, ಗಾಳೆಪ್ಪ ಪೂಜಾರ, ಚನ್ನಬಸಪ್ಪ ಹೊಳೆಪ್ಪನವರ,ಶಿವಪುತ್ರಪ್ಪ , ದುರುಗಪ್ಪ ಅಲ್ಲಾನಗರ, ದನಂಜಯ ಮಾಲಗಿತ್ತಿ, ಆನಂದ ಬಂಡಾರಿ ಮುಂತಾದವರು ಭಾಗವಹಿಸಿದ್ದರು. ಹಾಲೇಶ ಕಂದಾರಿ ನಿರೂಪಿಸಿ ವಂದಿಸಿದರು.

Please follow and like us: