ಸಾಕ್ಷರತೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ- ಬಾಲಚಂದ್ರ

ಕೊಪ್ಪಳ : ಸಾಕ್ಷರತ ಭಾರತ ಸ್ವಯಂ ಸೇವಕರರ ಪಠ್ಯಾ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಸ್ಥಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.ಗ್ರಾ. ಪಂ ಲೋಕ ಶಿಕ್ಷಣ ಸಮಿತಿ ಮುನಿರಬಾದ್ ಇವರ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.

ತಾ.ಪಂ ಅಧ್ಯಕ್ಷರಾದ ಬಾಲಚಂದ್ರ ಮಾತನಾಡುತ್ತಾ ಮಾನವ ಅಭಿವೃದ್ಧಿಯ ಅಭಿವೃದ್ಧಿ ಎಂದರೆ ಮೂಲ ಸೌಕರ್ಯವಾದ ಕಟ್ಟಡ, ರಸ್ತೆ, ಚರಂಡಿ, ಬೀದಿ ದೀಪ ಅಷ್ಟೆ ಬದಲಾಗಿ ಸಾಕ್ಷರತ, ಆರೋಗ್ಯ ನೈರ್ಮಲ್ಯ ಹೆಚ್ಚು ಆದ್ಯತ್ಯೆ ಅನಕ್ಷರಸ್ಥರಿಗೆ ಸಾಕ್ಷರರನ್ನಾಗಿ ಮಾಡಲು ಸ್ವಯಂ ಸೇವಕರಿಗೆ ಕಿವಿ ಮಾತು ಹೇಳಿದರು.
ಸಾಕ್ಷರ ಸಂಯೋಜಕ ಹೆಚ್.ಎಸ್. ಹೊನ್ನೂಂಚಿ ಮಾತನಾಡುತ್ತಾ ಸ್ವಯಂ ಸೇವಕರು ಸ್ವಯಂ ಪೇರಣೆಯಿಂದ ಅಕ್ಷರ ಕಲಿಸಿದಾಗ ಮಾತ್ರ ದೇಶ ಅಭಿವದ್ಧಿ ಹೊಂದಲು ಸಾಧ್ಯ ಹಾಗೂ ಕಲಿಕಾ ಕೇಂದ್ರ ಪಠ್ಯಾ ಆಧಾರಿತ ತರಬೇತಿಯಲ್ಲಿ ಬಾಲಿಗೆ ಬೆಳಕು ಪ್ರಾಥಮಿಕ ಕಲಿಸುವ ಸರಳ ವಿಧಾನ ಹಾಗೂ ಕ್ರೀಯಾತ್ಮಕ ಚಟುವಟಿಕೆಗಳು ಗಾಂಧೀಜಿ, ನೇತಾಜಿ, ಹಲವಾರು ಸಾಕ್ಷರತಾ ನಡೆದ ಬಂದ ದಾರಿಯ ಬಗ್ಗೆ ತಿಳಿಸಿದರು.
ಸಾವಿತ್ರಿ ಹೆಚ್ ಎಂ ಮಾತನಾಡಿ ಕಲಿಕಾ ಕೇಂದ್ರ ನಡೆಸುವ ಸ್ವಯಂ ಸೇವಕರು ಅರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಗ್ರಾ.ಪಂ ಅಧ್ಯಕ್ಷ ಸುಶೀಲಮ್ಮ, ಉಪಾಧ್ಯಕ್ಷ ಖರ್ಷಿದಾಬೇಗಂ, ಗ್ರಾ.ಪಂ ಸದಸ್ಯ ಎಸ್.ರವಿ, ಭಾರತ ಹಾಗೂ ತಾ.ಪಂ ಮಾಜಿ ಅಧ್ಯಕ್ಷ ಬಾನುಭಿ, ಸಂಪನ್ಮೂಲ ವ್ಯಕ್ತಿ ಶಾಂತ ಕುಮಾರ, ಪದ್ಮಶ್ರೀ ಸ್ವಯಂ ಸೇವಕರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಹೆಚ್.ಎಸ್.ಹೊನ್ನೂಂಚಿ ಸ್ವಾಗತಿಸಿದರು, ಬಸವರಾಜ ವಂದಿಸಿದರು.