ಕರಾಟೆ ಸ್ಪರ್ಧೆಗಳಿಗೆ ಅಭಿನಂದನೆ

ಕೊಪ್ಪಳ – ಶೋರಿಯನ್ ರಿಯು ಶೋರಿನಾ ಕನ್ ಅಸೋಷಿಯೆಷನ್ ವಿಜಯಪೂರ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ಸಾಯಿ ಬುಡೋಕನ್ ಕರಾಟೆ ಕ್ಲಬನ್ ಕರಾಟೆ ಪಟುಗಳು ಭಾಗವಹಿಸಿ ಕುಮಟೆ (ಪೈಟ್) ನಲ್ಲಿ ೪ ಪ್ರಥಮ ಸ್ಥಾನ, ೫ ದ್ವಿತೀಯ ಸ್ಥಾನ, ೪ ತೃತೀಯ ಸ್ಥಾನ ಪಡೆದಿದ್ದಾರೆ ಕಟಾಸ್ (ಕರಾಟೆ ನೃತ್ಯ)ದಲ್ಲಿ ೨ ಪ್ರಥಮ ಸ್ಥಾನ, ೩ ದ್ವಿತೀಯ ಸ್ಥಾನ ೧ ತೃತೀಯ ಸ್ಥಾನವನ್ನು ಪಡೆದುಕೊಂಡು ಸಂಸ್ಥೆಯ ಕೀರ್ತಿ ತಂದಿದ್ದಾರೆ.ಈ ಸ್ಪರ್ಧೇಯಲ್ಲಿ ಭಾಗವಹಿಸಿದ ಕರಾಟೆ ಪಟುಗಳಾದ ಮುತ್ತುರಾಜ ಬಂಡಿ, ರಾಜೇಶ ಕಲಾಲ, ಚಂದ್ರಶೇಖರ, ಮೌಲಾ ಹುಸೇನ್, ಪ್ರದೀಪ್, ಅರ್ಪದ, ಪ್ರಜ್ವಲ್, ಯಮನೂರ, ರುಕ್ಮೀಣಿ ಮತ್ತು ಆಪ್ರೀನ್ ಭಾಗವಹಿಸಿದ್ದರು.????????????????????????????????????

ಈ ಕರಾಟೆ ಪಟುಗಳನ್ನು ಶ್ರೀ ಸಾಯಿ ಅಭಿವೃದ್ಧಿ ಹಾಗೂ ಶಿಕ್ಷಣ ಸಂಘ(ರಿ) ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಶ್ರೀಕಾಂತ ಕಲಾಲ, ಚಿರಂಜೀವಿ ಗಿಣಿಗೇರಾ, ಅಮರೇಶ, ಫಯಾಜ ಪಾಷಾ ಉಪಸ್ಥಿತರಿದ್ದರು.

Please follow and like us: