ರೈತರ ಬಿಡುಗಡೆ – ಕನ್ನಡಪರ ಸಂಘಟನೆಗಳಿಂದ ವಿಜಯೋತ್ಸವ

ಗದಗ – ಕಳಸಾ-ಬಂಡೂರಿ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದ ರೈತ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿ ಅದೇಶ ಹೊರಡಿಸಿದ ರಾಜ್ಯ ಸರಕಾರದ ನಡೆಯನ್ನು ಪ್ರಶಂಸಿಸಿದ ಕನ್ನಡಪರ ಹಾಗೂ ದಲಿತಪರ ಸಂಘಟನೆಗಳು ಶನಿವಾರ ನಗರದ ಮಹಾತ್ಮಗಾಂಧಿ ವರ್ತುಲದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವ ಮೂಲಕ ವಿಜಯೋತ್ಸವನ್ನು ಆಚರಿಸಿದರು. ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಸಂಸ್ಥಾಪಕ ರಾಜ್ಯಾದ್ಯಕ್ಷ ಸಯ್ಯದ ಖಾಲೀದ ಕೊಪ್ಪಳ ಮಾತನಾಡಿ, ಜೀವ ಜಲಕ್ಕಾಗಿ ನಡೆಸಿದ ಹೋರಾಟ ನ್ಯಾಯ ಪರವಾಗಿದೆ. ಇಂದು ಆಹಾರ ಇಲ್ಲದೇ ಬದುಕುಬಹುದು, ಆದರೆ ಜೀವ ಜಲವಿಲ್ಲದೇ ಯಾವುದೇ ಜೀವಿ ಬದುಕಲು ಸಾದ್ಯವಿಲ್ಲ. ಆ ಹಿನ್ನಲೆಯಲ್ಲಿ ಕಳಸಾಬಂಡೂರಿ ಅನುಷ್ಠಾನ ಮಾಡುವಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರದ ಮೇಲೆ ಒತ್ತಡ ತರಲಿ, ರೈತ ಸಮುದಾಯವನ್ನು ಬಂಧನ ಮುಕ್ತಗೊಳಿಸಿದ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆಯ ಕ್ರಮವನ್ನು ಸ್ವಾಗತಿಸಲಾಗುವದು ಎಂದರು. ಜಯ ಕರ್ನಾಟಕ ಸಂಘಟನೆ ರಾಜ್ಯ ಸಂಘಟಕ ಚಂದ್ರಕಾಂತ ಚವ್ಹಾಣ ಮಾತನಾಡಿ, ರೈತ ಸಮುದಾಯದ ತಾಳ್ಮೆಯನ್ನು ಪರೀಕ್ಷಿಸಿದೇ ಈ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನ ಮಾಡಲು ಒತ್ತಾಯಿಸಿದರು. ದಲಿತ ಮುಖಂಡ ಗಣೇಶ ಹುಬ್ಬಳ್ಳಿ ಮಾತನಾಡಿ, ರೈತ ಸಮುದಾಯವನ್ನು ಬಂಧನ ಮುಕ್ತಗೊಳಿಸಿರುವುದು ಬಹಳ ಸಂತಸದ ವಿಷಯವಾಗಿದೆ ಎಂದರು, ಕನ್ನಡ ಸಂಘಟನೆ ಮುಖಂಡ ಹುಲ್ಲೇಶ ಭಜಂತ್ರಿ ಮಾತನಾಡಿ ರೈತ ಸಮುದಾಯ ದೇಶದ ಆಸ್ತ್ತಿಯಾಗಿದ್ದಾನೆ ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ವಿಜಯ ಮುಳಗುಂದ, ರಾಘು ಪರಾಪೂರ, ಸಲೀಂ ಸಿದ್ದಿ, ಬೂದೇಶ ಬ್ಯಾಹಟ್ಟಿ, ರಾಷ್ಥ್ರಿನ್ ಜೋಸೆಫ್,gadag ಹೇಮತ್ ಹುಬ್ಬಳ್ಳಿ, ಬಸವರಾಜ ಬದಾಮಿ, ಮಂಜುನಾಥ ಫೌಜಲ್ ,ಬಸವರಾಜ ಗಡ್ಡಪ್ಪನವರ ಮುಂತಾದವರು ಉಪಸ್ಥಿತರಿದ್ದರು