ಅಸಹಿಷ್ಣುತೆಯ ಈ ದಿನಗಳಲ್ಲಿ ಉದಾತ್ತ ವಿಚಾರಗಳನ್ನು ತಲುಪಿಸಬೇಕಾದ ಅನಿವಾರ್ಯತೆಯಿದೆ- ವಿಠ್ಠಪ್ಪ ಗೋರಂಟ್ಲಿ

ಓದಿರಿ ನಾಟಕ ಪ್ರದರ್ಶನ

11680009 copy

odiri-drama (3)
ಕೊಪ್ಪಳ : ತತ್ವ,ವಿಚಾರ ಮತ್ತು ಸಿದ್ದಾಂತಗಳನ್ನು ಜನರಿಗೆ ಮುಟ್ಟಿಸುವಲ್ಲಿ ನಾಟಕ ಒಂದು ಅದ್ಬುತ ಪರಿಣಾಮಕಾರಿ ಮಾಧ್ಯಮ. ಈ ಹಿನ್ನೆಲಯಲ್ಲಿ ಓದಿರಿ ನಾಟಕದ ವಿಶಿಷ್ಠ ರಂಗ ಪ್ರಯೋಗ ಹಿಂದೆ ಮಹಾಚೈತ್ರ್ಯವನ್ನು ರಂಗಪ್ರಯೋಗಕ್ಕೆ ಅಳವಡಿಸಿದಂತಿದೆ. ಮಹ್ಮದ್ ಪೈಗಂಬರ್ ರ ಜೀವನ ಚರಿತ್ರೆಯನ್ನು ನಾಟಕ್ಕೆ ಅಳವಡಿಸಿರುವುದು ಅದರಲ್ಲೂ ಇಸ್ಲಾಂ ಧರ್ಮಿಯರ ಪ್ರಕಾರ ನಿರಾಕಾರ ರೀತಿಯಲ್ಲಿ ತೋರಿಸಬೇಕಾಗಿರುವುದು ಬಹಳ ಕ್ಲಿಷ್ಟಕರವಾದ ಸಂಗತಿ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಮುಸ್ಲಿಂ ಚಿಂತಕರ ಚಾವಡಿ,ಕನ್ನಡನೆಟ್ ಡಾಟ್ ಕಾಂ ಹಾಗೂಕವಿಸಮೂಹ ಕೊಪ್ಪಳ ಇವರ ಆಶ್ರಯದಲ್ಲಿ ಕೊಪ್ಪಳದ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರವಾದಿ ಮಹಮ್ಮದ ಜೀವನಚರಿತ್ರೆ ಆಧಾರಿತ ಐತಿಹಾಸಿಕ ಓದಿರಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

odiri-drama-boluvaru-mohd-kunhi-dr-ganesh-janamanadata-play-koppal (9)
ಬೋಳುವಾರು ಮಹ್ಮದ್ ಕುಂಇಯವರ ಕಾದಂಬರಿಯನ್ನು ನಾಟಕಕ್ಕೆ ರೂಪಕ್ಕೆ ಅಳವಡಿಸಿರುವ ಡಾ.ಎಂ.ಗಣೇಶರವರು ಹೀಗಾಗಲೇ ಹಲವಾರು ಕಡೆ ಪ್ರದರ್ಶನಗಳನ್ನು ಮಾಡಿದ್ದಾರೆ. ಮುಸ್ಲಿಂ ಸಮುದಾಯ ಭಾರತೀಯ ಸಮಾಜದಲ್ಲಿ ಬೆರೆತು ಹೋಗಿರುವಂತಹದ್ದು. ಇಲ್ಲಿ ಅನೇಕ ಜನರ ಒಟ್ಟುಗೂಡುವಿಕೆ ಭಾರತೀಯ ಸಂಸ್ಕೃತಿಯಾಗಿದೆ . ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ಹೆಚ್ಚಾಗಿರುವ ಸಂದರ್ಭದೊಳಗೆ ಸಹಿಷ್ಣುತೆಯ ಪರಿಕಲ್ಪನೆಯೊಳಗೆ ಉದಾತ್ತ ವಿಚಾರಗಳನ್ನು ಜನಮನದಲ್ಲಿ ಬಿಂಬಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಲ್ಲಮಪ್ರಭು ಬೆಟ್ಟದೂರ ಮಾತನಾಡಿದರು. ವೇದಿಕೆಯ ಮೇಲೆ ಹಾಫಿಜ್ ಅಸದುಲ್ಲಾ ಖಾದ್ರಿ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಯುಸಿಎಲ್ ಜಿಲ್ಲಾಧ್ಯಕ್ಷ ಪ್ರಮೋದ ತುರ್ವಿಹಾಳ ವಹಿಸಿ ಮಾತನಾಡಿದರು. ಸತ್ಯಶೋಧನ ರಂಗಸಮುದಾಯ ಹೆಗ್ಗೋಡು (ರಿ)ಇವರ ಜನಮನದಾಟ ತಂಡದಿಂದ ನಡೆದ ನಾಟಕ ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅದ್ಬುತವಾದ ಅಭಿನಯ ಮತ್ತು ಹಿನ್ನೆಲೆ ಸಂಗೀತ ಹಾಗೂ ಬೆಳಕಿನ ಸಂಯೋಜನೆಯಿಂದ ಜನರು ಮಂತ್ರಮುಗ್ದರಾಗಿ ನಾಟಕವನ್ನು ವೀಕ್ಷಿಸಿದರು. ಕಾರ‍್ಯಕ್ರಮಕ್ಕೆ ಸ್ವಾಗತವನ್ನು ಸಿರಾಜ್ ಬಿಸರಳ್ಳಿ ಕೋರಿದರು. ಪ್ರಾಸ್ತಾವಿಕವಾಗಿ ಮುಸ್ಲಿಂ ಚಿಂತಕರ ಚಾವಡಿಯ ರಾಜ್ಯ ಸಮಿತಿಯ ಸದಸ್ಯ ಎಚ್.ವಿ.ರಾಜಾಬಕ್ಷಿ ಮಾತನಾಡಿದರು. ನಿರೂಪಣೆಯನ್ನು ಎ.ಎಚ್.ಅತ್ತನೂರ ಮಾಡಿದರೆ ಕಾರ‍್ಯಕ್ರಮದ ವಂದನಾರ್ಪಣೆಯನ್ನು ಬಾಷಾ ಹಿರೇಮನಿ ನೆರವೇರಿಸಿದರು.

Please follow and like us: