ಕೊಪ್ಪಳ ಜಿಲ್ಲಾ ಉತ್ಸವದ ಭಿತ್ತಿಚಿತ್ರ ಬಿಡುಗಡೆ

ಕೊಪ್ಪಳ-೦೬: ಕಳೆದ ೯ ವರ್ಷಗಳಿಂದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಕೊಪ್ಪಳ ಜಿಲ್ಲಾ ರಚನೆಯ ಸವಿನೆನಪಿಗಾಗಿ ಪತಿವರ್ಷ ಜಿಲ್ಲಾ ಉತ್ಸವ ಆಚರಣೆ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಹಿರಿಮೆ ಸಾರುವ ಕಾರ್ಯಕ್ರiವಾಗಿ ಪರಿವರ್ತನೆಗೊಳ್ಳಲಿ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಆಶಯ ವ್ಯಕ್ತಪಡಿಸಿದರು.ಅವರು  ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕೆ ವೇದಿಕೆವತಿಯಿಂದ ಇದೇ ಆಗಸ್ಟ 24 ರಿಂದ 28ರ ವರೆಗೆ ಜರುಗುವ ಜಿಲ್ಲಾ ಉತ್ಸವದ ಭಿತ್ತಿಚಿತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಈ ಉತ್ಸವದಲ್ಲಿ ಸ್ಥಳಿಯ ಪ್ರತಿಭೆಗಳ ಪೋಷಣೆ ಯುವ ಕವಿಗಳಿಗೆ ಅವಕಾಶ ಸಾಹಿತಿ ಮತ್ತು ಕಲಾವಿದರುಗಳಿಗೆ ಪುರಸ್ಕಾರ ಪ್ರತಿಭಾವಂತ ವಿದ್ಯಾರ್ಥಿ ಮತ್ತು ಕ್ರೀಡಾಪಟುಗಳಿಗೆ ಪುರಸ್ಕಾರ ಇತ್ಯಾದಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಅರ್ಥಪೂರ್ಣ ಜಿಲ್ಲಾ ಉತ್ಸವ ಆಚರಣೆ ಮೂಲಕ ನಾಗರಿಕ ವೇದಿಕೆ ಪದಾಧಿಕಾರಿಗಳು ಕಳೆದ ಒಂದು ದಶಕದಿಂದ ಶ್ರಮಿಸುತ್ತಾ ಬಂದಿದ್ದಾರೆ ಇವರ ಕಾರ್ಯವೈಖರಿ ಅತ್ಯಂತ ಶ್ಲಾಘನೀಯವಾಗಿದೆ ಎಂದರು.ಮುಂದುವರೆದು ಮಾತನಾಡಿದ ಅವರು ಈ ಬಾರಿ ಜರುಗುವ ವೇದಿಕೆ ದಶಮಾನೋತ್ಸವ ಹಾಗೂ ಜಿಲ್ಲಾ ಉತ್ಸವ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಶಿಸಿದ ಅವರು ಕೊಪ್ಪಳ ಜಿಲ್ಲಾಉತ್ಸವ ಆಚರಣೆಯಲ್ಲಿ ಕೊಪ್ಪಳ ಜಿಲ್ಲೆಯ ಜನಸಾಮಾನ್ಯರ ಬೇಕು ಬೇಡಿಕೆಗಳ ಬಗ್ಗೆ ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಚಿಂತನ ಮಂಥನ ನಡೆಯಲಿ ಸರ್ಕಾರದ ಗಮನಸೆಳಯುವಂತಹ ಚರ್ಚೆ ವಿಚಾರ ವಿನಿಮಯ, ಸಂವಾದ, ವಿಚಾರ ಸಂಕೀರಣಗಳು ಜರುಗಲಿ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಭಿಪ್ರಾಯ ಪಟ್ಟರು.ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಎಸ್.ಬಿ.ನಾಗರಳ್ಳಿ ತಾಪಂ ಅಧ್ಯಕ್ಷ ಬಾಲಚಂದ್ರ ಸೇರಿದಂತೆ ನಾಗರೀಕರ ವೇದಿಕೆಯ ರಾಜ್ಯಾಧ್ಯಕ್ಷ ಮತ್ತು ಕಾರ್ಯಕ್ರಮ ಸಂಘಟಕ ಮಹೇಶಬಾಬು ಸುರ್ವೆ, ಜಿ.ಎಸ್.ಗೋನಾಳ , ಎಂ.ಸಾದಿಕ್ ಅಲಿ,  ಶಿವಾನಂದ ಹೊದ್ಲೂರ,  ಹರೀಶ ಹೆಚ್.,ಸಿದ್ದಪ್ಪ ಹಂಚಿನಾಳ,   ಬದರಿ ಪುರೋಹಿತ್, ಮಂಜುನಾಥ ಕೋಳೂರು, ಉಮೇಶ ಪೂಜಾರ್ ಉಪಸ್ಥಿತರಿದ್ದರು.

????????????????????????????????????

Please follow and like us: