ನೀರಿನಲ್ಲಿ ವಿಷ ಬೆರೆಸಿಕೊಟ್ಟಿದ್ದಾರೆ ಅಂತ ನೆಪ ಹೇಳಿ, ಮಕ್ಕಳಿಗೆ ಬೂಟುಗಾಲಿನಿಂದ ಥಳಿಸಿದ ಶಿಕ್ಷಕ.

ರಾಯಚೂರು: ಶಾಲೆಯ ಗುರುವೇ ತಪ್ಪು ಗ್ರಹಿಕೆಯಿಂದ ಮಕ್ಕಳಿಗೆ ಶಿಕ್ಷೆ ಕೊಟ್ಟರೆ, ಮಕ್ಕಳು ತಿರುಗಿ ಬೀಳುವುದರಲ್ಲಿ ಅನುಮಾನವಿಲ್ಲ ಸದ್ಯ ಇದೇ ಪರಿಸ್ಥಿತಿ ಏರ್ಪಟ್ಟಿರುವುದು ರಾಯಚೂರು ತಾಲ್ಲೂಕಿನ ಬಾಪೂರು ಗ್ರಾಮದಲ್ಲಿ ಇಲ್ಲಿನ ವಿದ್ಯಾರ್ಥಿಗಳು ತಮಗೆ ಪಾಠ ಹೇಳಿ ಕೊಡುವ ಶಿಕ್ಷಕರ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದಾರೆ. ಮಕ್ಕಳು ಪ್ರತಿಭಟನೆ ಮಾಡಬೇಕಾದರೆ ಆ  ಶಿಕ್ಷಕರಷ್ಟು ಕಾಟ ಕೊಟ್ಟಿರಬೇಡ,  ಶಾಲೆಯ ಮುಖ್ಯ ಗುರುಗಳಾದ ಕೃಷ್ಣ ಕುರ್ಡಿಕರ್, ಕೆಲ ವಿದ್ಯಾರ್ಥಿಗಳು ತನಗೆ ಕುಡಿಯುವ ನೀರಿನಲ್ಲಿ ವಿಷ ಬೆರೆಸಿಕೊಟ್ಟಿದ್ದಾರೆ ಅಂತ ನೆಪ ಹೇಳಿ, ಮಕ್ಕಳಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಜೊತೆಗೆ ಬೂಟುಗಾಲಿನಿಂದ ಥಳಿಸಿದ್ದು, ಮಕ್ಕಳ ಮೈ ಮೇಲೆಲ್ಲಾ ಬಾಸುಂಡೆ ಬರೆಗಳು ಮೂಡಿವೆ. ಶಿಕ್ಷಕರ ಈ ದೌರ್ಜನ್ಯದ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ತಿಳಿದ ಪೋಷಕರು,  ಎಸ್.ಡಿಎಮ್‌ಸಿ ಸದಸ್ಯರ ಜೊತೆಗೂಡಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಮಕ್ಕಳಿಗೆ ತಯಾರಾಗುವ ಬಿಸಿಯೂಟಕ್ಕೆ ದನ ಕರುಗಳು ಕುಡಿಯುವ ನೀರಿನ ತೊಟ್ಟಿಯಲ್ಲಿನ ನೀರನ್ನು ಬಳಸಲಾಗುತ್ತಿದೆ ಎನ್ನುವುದು ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಆರೋಪ. ಹೀಗಾಗಿ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣ ಕುರ್ಡಿಕರ್ ಹಾಗೂ ಇನ್ನಿಬ್ಬರು ಶಿಕ್ಷಕರನ್ನು ಅಮಾನತುಗೊಳಿಸಬೇಕು ಅಂತ ಆಗ್ರಹಿಸಿದ್ದಾರೆ. ಇನ್ನು ಶಾಲೆಗೆ ಬೀಗ ಜಡಿದು ಪ್ರತಿಭಟಿಸುತ್ತಿದ್ದವರನ್ನು  ಪೊಲೀಸರು ಮದ್ಯ ಪ್ರವೇಶಿಸಿ ಸಮಾಧಾನಪಡಿಸಿದ್ದಾರೆ. ಆದರೆ ಅಶಿಸ್ತು ತೋರಿದ ಶಿಕ್ಷsschoolಕರನ್ನು ಅಮಾನತು ಮಾಡದೇ ಹೋದರೆ ಹೋರಾಟ ಮಾಡುವುದಾಗಿ ವಿದ್ಯಾರ್ಥಿಗಳು, ಹಾಗೂ ಪೋಷಕರು ಎಚ್ಚರಿಸಿದ್ದಾರೆ.