ಗ್ರಾಮಪಂಚಾಯತಿಯಲ್ಲಿ ಇನ್ನು ಮುಂದೆ ೧೦೦ ವಿವಿಧ ಸೇವೆಗಳು ಲಭ್ಯ

 

gpsec

ಗ್ರಾಮೀಣ ಜನರಿಗೆ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಅಗತ್ಯವಿರುವ ವಿವಿಧ ದಾಖಲಾತಿಗಳು ಇನ್ನು ಮುಂದೆ ಆಯಾ ಗ್ರಾಮ ಪಂಚಾಯತಿಗಳಲ್ಲೇ ಲಭ್ಯವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ತಿಳಿಸಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ೧೦೦ ವಿವಿಧ ಸೇವೆಗಳನ್ನು ಒದಗಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಹೊಂದಿದ್ದು, ಗ್ರಾಮೀಣ ಜನತೆ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಇಲಾಖೆಗಳ ಹಲವಾರು ದಾಖಲಾತಿ ಹಾಗೂ ಮುಖ್ಯವಾಗಿ ಪಹಣಿ ಪತ್ರ ಹಾಗೂ ನಾಡ ಕಛೇರಿಯಲ್ಲಿ ನೀಡುವಂತಹ ಸೇವೆಗಳು ಸೇರಿದಂತೆ ಇತರ ಸೇವೆಗಳನ್ನು ಇನ್ನು ಮುಂದೆ ಗ್ರಾಮ ಪಂಚಾಯತಿಗಳಲ್ಲಿಯೇ ಪಡೆಯಬಹುದಾಗಿದೆ.
ಗ್ರಾ.ಪಂ ಕಛೇರಿಗಳಲ್ಲಿ ದೊರೆಯುವ ಕಂದಾಯ ಇಲಾಖೆಯ ಸೇವೆಗಳ ವಿವರ ಇಂತಿದೆ:
ರೂ.೧೦ ಶುಲ್ಕ ಪಾವತಿಸಿ ಪಹಣಿ ಪತ್ರ ಪಡೆಯಬಹುದು. ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದುಳಿದ ವರ್ಗಗಳ ಪ್ರಮಾಣ ಪತ್ರ (ಪ್ರವರ್ಗ-೧), ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾತಿ/ಪ.ಪಂ), ವಿಧವಾ ದೃಢೀಕರಣ ಪತ್ರ, ಮರು ವಿವಾಹವಾಗದಿರುವ ದೃಢೀಕರಣ ಪತ್ರ, ವಸತಿ ದೃಢೀಕರಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಗೇಣಿ ರಹಿತ ದೃಢೀಕರಣ ಪತ್ರ, ವ್ಯವಸಾಯಗಾರರ ಕುಟುಂಬದ ಸದಸ್ಯ ದೃಢೀಕರಣ ಪತ್ರ, ಜಮೀನು ಇಲ್ಲದಿರುವ ದೃಢೀಕರಣ ಪತ್ರ, ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ, ಕೃಷಿ ಕಾರ್ಮಿಕ ದೃಢೀಕರಣ ಪತ್ರ, ಬೋನಪೈಡ್ ದೃಢೀಕರಣ ಪತ್ರ, ಸಾಲ ತೀರಿಸುವ ಶಕ್ತಿ ದೃಢೀಕರಣ ಪತ್ರ, ವ್ಯವಸಾಯಗಾರರ ದೃಢೀಕರಣ ಪತ್ರ, ಭೂ ಹಿಡುವಳಿಯ ಪ್ರಮಾಣ ಪತ್ರ, ಜನಸಂಖ್ಯೆ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ, ಮೇಲುಸ್ಥರಕ್ಕೆ ಸೇರಿಲ್ಲವೆಂಬ ದೃಢೀಕರಣ ಪತ್ರ, ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಢೀಕರಣ ಪತ್ರ, ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ ಪತ್ರ, ಇತರೆ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ (ಕೇಂದ್ರ), ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ, ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ, ಜೀವಂತ ದೃಢೀಕರಣ ಪತ್ರ, ನಿರುದ್ಯೋಗಿ ದೃಢೀಕರಣ ಪತ್ರ, ವಂಶವೃಕ್ಷದ ದೃಢೀಕರಣ ಪತ್ರ, ಹೈದರಾಬಾದ ಕರ್ನಾಟಕದ ಪ್ರದೇಶದ ವಸತಿ ಮತ್ತು ಅರ್ಹತಾ ದೃಢೀಕರಣ ಪತ್ರ, ಬೆಳೆ ದೃಢೀಕರಣ ಪತ್ರ ಈ ಮೇಲಿನ ಸೇವೆಗಳನ್ನು ರೂ.೧೫ ಶುಲ್ಕ ಪಾವತಿಸಿ ಪಡೆಯಬಹುದು.
ಪಿಂಚಣಿ ಮಂಜೂರು ಸೇವೆಗಳ ವಿವರ ಇಂತಿದೆ:
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವಿಧವಾ ವೇತನ, ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ, ಮೈತ್ರಿ, ಮನಸ್ವಿನಿ, ಆಸಿಡ್ ದಾಳಿಗೊಳಗಾದವರಿಗೆ ಪಿಂಚಣಿ, ರೈತರ ವಿಧವೆಯರ ಪಿಂಚಣಿ, ಅಂತ್ಯ ಸಂಸ್ಕಾರ ಯೋಜನೆ ಈ ಸೇವೆಗಳನ್ನು ಉಚಿತವಾಗಿ ಪಡೆಯಬಹುದು.
ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸೇವೆಗಳ ವಿವರ ಇಂತಿದೆ:
ಕಟ್ಟಡಕ್ಕೆ ಸಂಬಂಧಿತ ಸೇವೆಗಳು: ಕಟ್ಟಡದ ಅನುಮತಿ ವಿತರಣೆ-ವಾಣಿಜ್ಯ (ಹೊಸ/ಹೆಚ್ಚುವರಿ/ಬದಲಾವಣೆ), ಕಟ್ಟಡ ಅನುಮತಿ ವಿತರಣೆ- ವಸತಿ (ಹೊಸ/ಹೆಚ್ಚುವರಿ/ಬದಲಾವಣೆ), ತೆರಿಗೆ ನಿರ್ಧರಣಾ ಪಟ್ಟಿ ವಿತರಣೆ, ಬೇಡಿಕೆ/ಕಂದಾಯ ನಕಲು ಪಟ್ಟಿ, ಆಸ್ತಿ ತೆರಿಗೆ ಮನ್ನಾ ಅರ್ಜಿ, ಕಟ್ಟಡ ಕಾಮಗಾರಿಕೆಯ ಮುಕ್ತಾಯ ಪ್ರಮಾಣ ಪತ್ರ ವಿತರಣೆ, ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ, ಕೊಳವೆ ಬಾವಿ ನಿರ್ಮಾಣದ ವಿವರ ತಿಳಿಸುವುದು, ನೀರಿನ ಸಂಪರ್ಕ ಕಡಿತ, ಕೊಳವೆ ಬಾವಿ ನಿರ್ಮಾಣ ಮುಕ್ತಾಯ, ಎಸ್ಕಾಂಸ್- ಆಕ್ಷೇಪಣೆ ರಹಿತ ಪತ್ರ ವಿತರಣೆ.
ಫಲಾನುಭವಿ ಸಂಬಂಧಿತ ಸೇವೆಗಳು: ಹೊಲಿಗೆ ಯಂತ್ರಗಳು ಇತ್ಯಾದಿ ರೀತಿಯ ಕೌಶಲ್ಯ ಆಧಾರಿತ ಉಪಕರಣಗಳಿಗೆ ಮನವಿ. ಎಸ್‌ಸಿಪಿ ಯೋಜನೆಗಳ ಅರ್ಜಿ (ಜಾನುವಾರು ಆಹಾರ ಸಬ್ಸಿಡಿ, ಜಾನುವಾರು). ವಸತಿ ಯೋಜನೆ ಪಡೆಯಲು ಅರ್ಜಿ, ಉಚಿತ ನಿವೇಶನ ಪಡೆಯಲು ಅರ್ಜಿ, ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮ ಅರ್ಜಿ, ಜೈವಿಕ ಅನಿಲ ಅರ್ಜಿ, ಗ್ರಾಮ ಪಂಚಾಯತಿಗಳಿಂದ ಎನ್‌ಡಿಸಿ, ರಾಜೀವ್ ಗಾಂಧಿ ಉದ್ಯೋಗ ಯೋಜನೆ ಅರ್ಜಿ, ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೌಶಲ್ಯ ರಹಿತ ಕೆಲಸಗಾರರಿಗೆ ಉದ್ಯೋಗ ಒದಗಿಸುವುದು. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೌಶಲ್ಯ ರಹಿತ ಕೆಲಗಾರರಿಗೆ ಜಾಬ್ ಕಾರ್ಡ್ ವಿತರಣೆ.
ವ್ಯಾಪಾರ ಪರವಾನಗಿ ಸಂಬಂಧಿತ ಸೇವೆಗಳು: ವ್ಯಾಪಾರ ಪರವಾನಿಗಿ ವಿತರಣೆ ( ಹೋಟೆಲ್ ಮತ್ತು ಅಂಗಡಿ), ಕಾರ್ಖಾನೆ ಪರವಾನಿಗಿ ವಿತರಣೆ (ಹೊಸ/ಹೆಚ್ಚುವರಿ/ಬದಲಾವಣೆ), ಜಾಹೀರಾತು ಪರವಾನಿಗಿ ವಿತರಣೆ (ಹೊಸ/ಹೆಚ್ಚುವರಿ/ಬದಲಾವಣೆ), ಮನರಂಜನೆ ಪರವಾನಿಗಿ ನೀಡಿಕೆ (ಹೊಸ/ಹೆಚ್ಚುವರಿ/ಬದಲಾವಣೆ), ವ್ಯಾಪಾರ ಪರವಾನಿಗಿ ನವೀಕರಣ ( ಹೋಟೆಲ್ ಮತ್ತು ಅಂಗಡಿ), ಶೇ.೨೫ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ನಿಧಿ ಅಡಿಯಲ್ಲಿ ಸೇವೆಗಳ ಅರ್ಜಿ, ಜಾಹೀರಾತು ಪರವಾನಿಗಿ ನವೀಕರಣ, ಶೇ.೩ ರಷ್ಟು ಅಂಗವಿಕಲರ ಕಲ್ಯಾಣ ನಿಧಿ ಅಡಿ ಸೇವೆಗಳ ಅರ್ಜಿ.
ನಿರ್ವಹಣೆ ಸಂಬಂಧಿತ ಸೇವೆಗಳು: ಕುಡಿಯುವ ನೀರಿನ ನಿರ್ವಹಣೆ (ಸಣ್ಣ ರಿಪೇರಿ), ಬೀದಿ ದೀಪಗಳ ನಿರ್ವಹಣೆ, ಗ್ರಾಮ ನೈರ್ಮಲ್ಯ ನಿರ್ವಹಣೆ.
ತೆರಿಗೆ ಪಾವತಿ ಸಂಬಂಧಿತ ಸೇವೆಗಳು: ವಸತಿ ಆಸ್ತಿ ತೆರಿಗೆ ಪಾವತಿ, ವಾಣಿಜ್ಯ ಆಸ್ತಿ ತೆರಿಗೆ ಪಾವತಿ, ನೀರಿನ ಶುಲ್ಕ ಪಾವತಿ, ಅಸ್ತಿತ್ವದಲ್ಲಿರುವ ಸಾಲುಗಳಲ್ಲಿ ಹೊಸ ಬೀದಿ ದೀಪಗಳ ಅರ್ಜಿ, ಭೂ ಪರಿವರ್ತನೆಗೆ ಆಕ್ಷೇಪಣೆ ರಹಿತ ಪತ್ರ ವಿತರಣೆ, ಗ್ರಾಮ ಪಂಚಾಯತಿ ಆಸ್ತಿಗಳ ಬಾಡಿಗೆ ಪಾವತಿ, ಇತರೆ ಇಲಾಖೆಗಳಿಗೆ ಆಕ್ಷೇಪಣೆ ರಹಿತ ಪತ್ರ ವಿತ್ರಣೆ, ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಕಾರ್ಯಗತಗೊಳಿಸಿದ ಕೆಲಸಕ್ಕೆ ಇ-ಪಾವತಿ.
ಇತರೆ ಸೇವೆಗಳು: ದಾಖಲೆಗಳ ವಿತರಣೆ (ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್ ಪಟ್ಟಿ), ಶೇ.೨ ರಲ್ಲಿ ಕ್ರೀಡೆ ಕಲ್ಯಾಣ ನಿಧಿ ಅಢಿಯಲ್ಲಿ ಸೇವೆಗಳ ಅರ್ಜಿ, ವಿದ್ಯಾರ್ಥಿಗಳಿಗೆ ದೂರ ಪ್ರಮಾಣ ಪತ್ರ ವಿತರಣೆ.
ಈ ಮೇಲಿನ ಎಲ್ಲಾ ಸೇವೆಗಳನ್ನು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಡೆಯಬಹುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us: