ಬದುಕಿನ ಸ್ಪೂರ್ತಿ ಹಡಪದ ಅಪ್ಪಣ್ಣ

sharana-hunnime


ಹಡಪದ ಅಪ್ಪಣ್ಣನವರ ನಮ್ರತೆ, ಸಹನಗುಣ, ತತ್ವ ನಿಷ್ಟೆ, ತ್ಯಾಗ, ಬದ್ಧತೆ, ಸಮಯ ನಿಷ್ಟೆ, ಯೋಗ ಸಾಧನೆಯಿಂದ ಕೂಡಿದ ಅವರ ಜೀವನ ನಮ್ಮೆಲ್ಲರ ಬದುಕಿನ ಸ್ಪೂರ್ತಿಯೆಂದು ಕಾರ್ಮಿಕ ಮುಖಂಡರಾದ ಹನುಮೇಶ ಕಲ್ಮಂಗಿ ಮಾತನಾಡಿದರು. ನಗರದ ಹುಡ್ಕೋ ಕಾಲೋನಿಯಲ್ಲಿ ನಡೆದ ವಿಶ್ವಗುರು ಬಸವೇಶ್ವರ ಟ್ರಸ್ಟಿನ ೭೧ನೇ ಶರಣ ಹುಣ್ಣಿಮೆ ಮತ್ತು ಹಡಪದ ಅಪ್ಪಣ್ಣ-ಲಿಂಗಮ್ಮನವರ ಜಯಂತಿಯ ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ ಮುಂದುವರೆದು ಮಾತನಾಡಿದ ಅವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಡಪದ ಅಪ್ಪಣ್ಣನವರ ಮತ್ತು ಹಡಪದ ಲಿಂಗಮ್ಮನವರ ವಚನಗಳು ಯೋಗ ಸಾಧಕರಿಗೆ ಮಾರ್ಗದರ್ಶನಗಳಾಗಿದ್ದರಿಂದ ಇವರ ಜೀವನ ಮತ್ತು ವಚನಗಳ ಮೇಲೆ ಇನ್ನೂ ಸಂಶೋಧನೆ ಆಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರಾದ ಮಂಜುನಾಥ ಹಂದ್ರಾಳ ವಹಿಸಿದ್ದರು. ಅತಿಥಿಗಳಾಗಿ ಗದುಗಿನ ಎಸ್.ಬಿ.ಸುಂಕದ, ಸಿದ್ದೇಶ ಕಾಟ್ರಳ್ಳಿ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಪಂಪಾಪತಿ ಹೊನ್ನಳ್ಳಿ, ಕಳಕಪ್ಪ ಬೆಲ್ಲದ, ವೀರಭದ್ರಪ್ಪ ನಂದ್ಯಾಳ, ದ್ಯಾಮಣ್ಣ ಹಡಪದ, ನಿಂಗಪ್ಪ ಹಡಪದ, ಶರಣಪ್ಪ ಹಡಪದ, ಶಿವಕುಮಾರ ಕುಕನೂರ, ಶರಣಬಸವನಗೌಡ, ಮಂಜುನಾಥ ಕರಡಕಲ್, ಗದಿಗೆಪ್ಪ ಅಮಾತಿ, ಮಹಾದೇವಿ ಜೋಳದ ಸುಮಂಗಲಾ ಅಕ್ಕಿ, ನಿರ್ಮಲಾ ಕೊಟ್ಟೂರ ಇನ್ನು ಮುಂತಾದವರು ಭಾಗವಹಿಸಿದ್ದರು. ಶರಣಪ್ಪ ಮಟ್ಟಿ ಸ್ವಾಗತಿಸಿದರು. ಗವಿಸಿದ್ದಪ್ಪ ಪಲ್ಲೆದ ನಿರುಪಿಸಿದರು. ರಾಜೇಶ ಸಸಿಮಠ ವಂದಿಸಿದರು.

Please follow and like us: