ಮಂಗಳೂರಿನ ಡಿವೈಎಸ್‌ಪಿ ಗಣಪತಿ ಮಡಿಕೇರಿಯಲ್ಲಿ ಆತ್ಮಹತ್ಯೆ

dysp-suicide-mangalore-kodagu

: ಮಂಗಳೂರು ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿಯಾಗಿದ್ದ ಗಣಪತಿ (51) ಇಂದು ಮಡಿಕೇರಿಯ ಲಾಡ್ಜ್‌ವೊಂದರಲ್ಲಿ ಮಾಡಿಕೊಂಡಿದ್ದಾರೆ.

ಅವರು ಇತ್ತೀಚೆಗಷ್ಟೆ ಬೆಂಗಳೂರು ಸಿಸಿಆರ್‌ಬಿಯಿಂದ ಮಂಗಳೂರು ಐಜಿಪಿ ಕಚೇರಿಗೆ ವರ್ಗಾವಣೆಗೊಂಡಿದ್ದರು.

ಮೂಲತಃ ಕೊಡಗು ಜಿಲ್ಲೆಯವರಾಗಿರುವ ಗಣಪತಿ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅವರು ಕಳೆದ ಐದು ವರ್ಷಗಳಿಂದ ಸೂಕ್ತ ಹುದ್ದೆಯನ್ನು ನೀಡದಿರುವ, ಬಡ್ತಿ ವಿಚಾರದ ಬಗ್ಗೆಯೂ ನೊಂದಿದ್ದರೂ ಎಂದು ಹೇಳಲಾಗಿದೆ. ಅವರು ಇನ್ನು 9 ವರ್ಷದಲ್ಲಿ ನಿವೃತ್ತರಾಗುವವರಿದ್ದರು.

ಮಡಿಕೇರಿಯ ವಿನಾಯಕ ಲಾಡ್ಜ್‌ಗೆ ಇಂದು ಬೆಳಿಗ್ಗೆ 10.15ಕ್ಕೆ ಬಂದಿದ್ದ ಅವರು ರೂಮ್ ನಂಬರ್ 315ರಲ್ಲಿ ವಾಸ್ತವ್ಯ ಮಾಡಿದ್ದರು. ರೂಮ್‌ನಲ್ಲಿ ಆತ್ಮಹತ್ಯೆ ಪತ್ರವನ್ನು ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನ ಪುತ್ತೂರು, ಕದ್ರಿ ಮತ್ತು ಬಂಟ್ವಾಳದಲ್ಲಿ ಇನ್ಸ್‌ಪೆಕ್ಟರ್, ಉಳ್ಳಾಲದಲ್ಲಿ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಶಿಸ್ತಿಗೆ ಹೆಸರಾಗಿದ್ದರು.

ಬೆಂಗಳೂರಿನಲ್ಲಿಯೂ ಹಲವು ಠಾಣೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರು.

1991ರ ಬ್ಯಾಚ್ ನಲ್ಲಿ ಪೊಲೀಸ್ ಹುದ್ದೆಗೆ ಬಂದಿದ್ದ ಗಣಪತಿ ಅವರು ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. 2001 ರಲ್ಲಿ ಅವರಿಗೆ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಸಿಕ್ಕಿತ್ತು. 2016 ರಲ್ಲಿ ಅವರಿಗೆ ಡಿವೈಎಸ್‌ಪಿಯಾಗಿ ಬಡ್ತಿ ಸಿಕ್ಕಿತ್ತು.

 

Please follow and like us: