ಶಿಕ್ಷಣ ಸಚಿವರಿಗೊಂದು ಬಹಿರಂಗ ಪತ್ರ

 

ಮಾನ್ಯ ಸಚಿವರೆ,

basavaraj-rayareddy

ನೂತನವಾಗಿ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿರುವ ನಿಮಗೆ ಶುಭಾಶಯಗಳು. ನಿಮ್ಮ ಹುಮ್ಮಸ್ಸು ಮತ್ತು ಉತ್ಸಾಹ ಶಿಕ್ಷಣ ಅಭಿವೃದ್ದಿಯ ವಿಚಾರದಲ್ಲೂ ಹೀಗೆ ಇರುತ್ತದೆ ಎಂದು ಭಾವಿಸಿ ಬಹಿರಂಗ ಪತ್ರ ಬರೆಯುತ್ತಿದ್ದೇನೆ.

ಹಿಂದೆ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆಯವರು ಸಜ್ಜನ ರಾಜಕಾರಣಿಯಾಗಿದ್ದರೂ ಶಿಕ್ಷಣ ಕ್ಷೇತ್ರವನ್ನು ಗೊಂದಲದಲ್ಲಿ ಮೂಡಿಸಿದವರು. ಹಲವಾರು ಅವಘಡಗಳ ಮೂಲಕ ಪಾಲಕರಲ್ಲಿ, ವಿದ್ಯಾರ್ಥಿಗಳಲ್ಲಿ ಆತಂಕದ ಮನೆ ಮಾಡಿದವರು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತರದೆ ಯೋಜನೆಗಳು ವಿಫಲರಾಗುವಂತೆ ಮಾಡಿದರು. ಸಾಫ್ಟ ಆಗಿದ್ದುಕೊಂಡೆ ಸರಕಾರಿ ಶಾಲೆಗಳ ಅಭಿವೃದ್ಧಿ ನಿರ್ಲಕ್ಷಿಸಿ, ಖಾಸಗಿ ಶಾಲೆಗಳಿಗೆ ರತ್ನಗಂಬಳಿ ಹಾಸಿದವರು. ಇದನ್ನೆಲ್ಲಾ ನಿಮಗ್ಯಾಕೆ ನೆನಪಿಸುತ್ತಿದ್ದೇನೆ ಎಂದರೆ ಶಿಕ್ಷಣ ಕ್ಷೇತ್ರಗಳಿಗೆ ಅಂಟಿದ ವಿವಾದವನ್ನು ನೀವು ಸ್ವಚ್ಚಗೊಳಿಸುತ್ತಿರಿ ಎಂಬ ಮಹತ್ವಾಕಾಂಕ್ಷೆಯಿಂದ ನೆನಪಿಸುತ್ತಿದ್ದೇನೆ.

ನೀವು ಅಧಿಕಾರ ವಹಿಸಿಕೊಂಡು 1ದಿನ ವಾಗಿದೆ. ಹಿಂದೆ ನಿಮ್ಮದೆ ಸರಕಾರ “11,523” ಶಾಲೆಗಳನ್ನು ವಿಲಿನದ ಹೆಸರಿನಲ್ಲಿ ಮುಚ್ಚಲು ಮುಂದಾಗಿತ್ತು. SFI ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಅದನ್ನು ನಿಲ್ಲಿಸಲಾಯಿತು. ಆದರೂ ಅದು ಬೂದಿ ಮುಚ್ಚಿದ ಕೆಂಡದಂತಿದ್ದು ಯಾವಾಗ ಬೇಕಿದ್ದರು ಸರಕಾರಿ ಶಾಲೆಗಳಿಗೆ ಆಪತ್ತಾಗಬಲ್ಲದು. ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಗಳ ಶಿಕ್ಷಕರನ್ನು ವರ್ಗಾವಣೆ ಮಾಡುವ ಮೂಲಕ ಶಾಲೆ ಮುಚ್ಚುವ ಯೋಜನೆಗೆ ಭದ್ರ ಅಡಿಪಾಯವನ್ನು ಕಿಮ್ಮನೆವರು ಹಾಕಿದ್ದಾರೆ. ಇದನ್ನು ತಿರಸ್ಕರಿಸಿ ಸರಕಾರಿ ಶಾಲೆ ಉಳಿಸುವ, ಬಲಗೊಳಿಸುವ ಕೆಲಸವನ್ನು ಮಾಡಿ. “ಸರಕಾರಿ ಶಾಲೆ ಉಳಿಸುವ, ಅಭಿವೃದ್ಧಿ ಪಡಿಸುವ ಕೆಲಸ” ನಿಮ್ಮ ಮೊದಲ ಆದ್ಯತೆಯಾಗಲಿ.

ರಾಜ್ಯದಲ್ಲಿ 40%ಕ್ಕೂ ಹೆಚ್ಚು ಶಾಲೆಗಳು ಶೌಚಾಲಯವಿಲ್ಲದೆ ಸೊರಗುತ್ತಿವೆ. ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅನೇಕ ಸರಕಾರಿ ಶಾಲೆಗಳು ಕೊಠಡಿ ಕೊರತೆಯಲ್ಲಿವೆ. ಸರಕಾರಿ ಶಾಲೆಗಳಲ್ಲಿ 34 ಸಾವಿರ ಶಿಕ್ಷಕರ ಕೊರತೆಯಿಂದ ಮಕ್ಕಳು ಶಿಕ್ಷಣದಿಂದ ಹಿಂದೆ ಬಿದ್ದಿದ್ದಾರೆ. ಕುಡಿಯುವ ನೀರು, ಕ್ರೀಡಾಂಗಣ, ಪ್ರಯೋಗಾಲಯ, ಬೊಧಕೇತರ ಸಿಬ್ಬಂದಿ ಇಲ್ಲದೆ ಸರಕಾರಿ ಶಾಲೆಗಳು ಸೊರಗಿ ಹೋಗಿ. ಮಕ್ಕಳಲ್ಲಿನ ಸೃಜನ ಶೀಲತೆ ಬತ್ತುತ್ತಿದೆ.

ಬಿಸಿಯುಟದಲ್ಲಿ, ಕ್ಷೀರ ಭಾಗ್ಯದಲ್ಲಿ ಗುಣ ಮಟ್ಟ ಇನ್ನಷ್ಟು ಹೆಚ್ಚಾಗಿ ಮಕ್ಕಳ ಪೌಷ್ಟಿಕತೆ ಹೆಚ್ಚಾಗ ಬೇಕಿದೆ. ಬಿಸಿಯೂಟದ ಖಾಸಗೀಕರಣ ನಿಲ್ಲಬೇಕಿದೆ. ಶಿಷ್ಯವೇತನ ಸಮರ್ಪಕವಾಗಿ ಸಿಕ್ಕು ವಿದ್ಯಾರ್ಥಿಗಳ ಆಶಾಕಿರಣವನ್ನು ಹೆಚ್ಚಿಸಬೇಕಿದೆ.

ಹಾಸ್ಟಲ್ ವಿದ್ಯಾರ್ಥಿಗಳ ಪಾಡಂತು ಹೇಳ ತೀರದಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವರ, ಅಧಿಕಾರಗಳ ಜೊತೆ ಚರ್ಚಿಸಿ ಇವತ್ತಿನ ವಿದ್ಯಾರ್ಥಿಗಳ ಅನುಪಾತದ ಆಧಾರದಲ್ಲಿ ಹೆಚ್ಚುವರಿ ಹಾಸ್ಟಲ್ ತೆರೆಯುವ ಅಗತ್ಯವಿದೆ. ಇವತ್ತಿನ ಬೆಲೆ ಏರಿಕೆಯ ನಡುವೆ ನಿಮ್ಮ ಸರಕಾರ ಕೊಡುತ್ತಿರುವ 1100ರೂ ಆಹಾರ ಭತ್ಯೆ ಯಾವುದಕ್ಕೂ ಸಾಕಾಗುವುದಿಲ್ಲ. ವಿದ್ಯಾರ್ಥಿಗಳ ಆಹಾರ ಭತ್ಯೆ 3500ಗೆ ಹೆಚ್ಚಳ ಆಗಬೇಕಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೆಷನ್ ಹಾವಳಿಗೆ ಬ್ರೆಕ್ ಹಾಕುವ ಕೆಲಸವಾಗಲಿ. ಉನ್ನತ ಶಿಕ್ಷಣವನ್ನು ಖಾಸಗೀಕರಣ ಗೊಳಿಸಲು ತುದಿಗಾಲ ಮೇಲೆ ನಿಂತಿರುವ ನಿಮ್ಮ ಗೆಳೆಯ T.B ಜಯಚಂದ್ರರಿಗೆ ಆ ಯೋಜನೆಯಿಂದ ಹೊರ ಬಂದು ಸರಕಾರಿ ವಿ.ವಿ ಗಳನ್ನು ಬಲಪಡಿಸುವಂತೆ ಕ್ಯಾಬಿನೇಟ್ ನಲ್ಲಿ ಚರ್ಚೆ ನಡಿಸಿ ಜಾರಿಗೆ ತನ್ನಿ. ರಾಜ್ಯದ ಶಿಕ್ಷಣ ಉಳಿಸಿ ದಲಿತ ಹಿಂದುಳಿದ ವರ್ಗಗಳ ಹಿತ ಕಾಪಾಡುವುದಕ್ಕೆ ಹೆಚ್ಚು ಆಧ್ಯತೆ ನೀಡಿ.
ಪೋಷಕರ – ಶಿಕ್ಷಣ ತಜ್ಞರ – ವಿದ್ಯಾರ್ಥಿ ಸಂಘಟನೆಗಳ ಸಭೆ ಕರೆದು ಶಿಕ್ಷಣ ಉಳಿಸುವ ಕುರಿತು ಸಲಹೆ ಪಡೆದುಕೊಳ್ಳಿ.basavaraj rayareddy congress leader ex minister yelburga

ನಾನು ನಿಮ್ಮನ್ನು ತೀರಾ ಹತ್ತಿರದಿಂದ ನೋಡಿದ್ದರಿಂದ ಈ ಮಾತುಗಳನ್ನು ಹೇಳುತ್ತಿರುವೆ “ಸರಕಾರಿ ಶಾಲೆ-ಹಾಸ್ಟಲ್ ಗಳ ಬಗ್ಗೆ ನಿಮಗಿರುವ ಕಾಳಜಿ ಶ್ಲಾಘನೀಯವಾದದ್ದು.ನೀವು ಶಿಕ್ಷಣ ಸಚಿವರಾದ ಮೇಲೆ ಅದು ಇಮ್ಮಡಿಯಾಗಲಿ.

ಚಳುವಳಿಗಳನ್ನು ಗೌರವಿಸಿ ಅವರು ನೀಡುವ ಸಲಹೆಗಳನ್ನು ಆಲಿಸಿ.
ಬಹುಷಃ ನೆನಪಿರ ಬಹುದು 2006-07 ಸರಕಾರಿ ITI ಕಾಲೇಜ ವರ್ಗಾವಣೆಯಲ್ಲಿ ನೀವಾಡಿದ ರಾಜಕೀಯದಾಟ ಏನಾಯಿತೆಂದು. ಅಂದು SFI ನಡೆಸಿದ್ದ ವ್ಯಾಪಕ ಚಳುವಳಿ ಮುಂದೆ ನೀವು ಚುನಾವಣೆಯಲ್ಲಿ ಸೋಲುವಂತೆ ಮಾಡಿತು.

ಜಿಲ್ಲೆಯಲ್ಲಿ “ರಾಯಲ್ ರೆಡ್ಡಿ” ಎಂದು ಕರೆಯಿಸಿ ಕೊಳ್ಳುವ ನೀವು ರಾಜ್ಯದ ವಿದ್ಯಾರ್ಥಿಗಳ ಶಿಕ್ಷಣವನ್ನು ಕಲ್ಯಾಣಗೊಳಿಸುತ್ತಿರಿ ಎಂದು ನಂಬಿರುತ್ತೇನೆ.

ವಂದನೆಗಳೊಂದಿಗೆ.

gururaj-desai

ಗುರುರಾಜ್ ದೇಸಾಯಿ.

Please follow and like us: