ಉತ್ತರ ಕರ್ನಾಟಕದ ಕಾರ ಹುಣ್ಣಿಮೆ ಸಂಭ್ರಮ.

ಉತ್ತರ ಕರ್ನಾಟಕದ ರೈತರ ಪ್ರಮುಖ ಮುಂಗಾರು ಹಬ್ಬ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ , ರೈತರು ಬೆಳಿಗ್ಗೆಯಿಂದಲೆ ತಮ್ಮ ಎತ್ತುಗಳು,- ಹಸುಗಳನ್ನು ಹಳ್ಳ, ಬಾವಿಗಳ ಬಳಿಗೆ ತೆಗೆದುಕೊಂಡು ಹೋಗಿ ಸ್ವಚ್ಛವಾಗಿ ಮೈ ತೊಳೆಸಿ, ನಂತರ ರೈತರು ಎತ್ತುಗಳ ಮಗಡಾ, ಕುರಣಿ, ಗೊಂಡೆ, ಕತ್ತಿಗೆ ಗೆಜ್ಜೆಗಳನ್ನು ಕಟ್ಟಿ- ಕೊಂಬುಗಳಿಗೆ ಬಣ್ಣಗಳನ್ನು13KPL04

ಹಚ್ಚುವ ಮೂಲಕ ಸಿಂಗರಿಸಿ, ಕಾರ ಹುಣ್ಣಿಮೆಗೆ ಮುನ್ನಾ ದಿನ ರೈತರು ಹೊನ್ನುಗ್ಗಿ ಆಚರಿಸಿಯುವರು. ಹೊನ್ನುಗ್ಗಿ ದಿನ ರಾಸುಗಳಿಗೆ ಜೋಳ, ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಹುಗ್ಗಿಯನ್ನು ನೀಡುತ್ತಾರೆ. ಕಾರ ಹುಣ್ಣಿಮೆ ದಿನ ಎತ್ತುಗಳನ್ನು ಸಿಂಗರಿಸಿ ಮನೆಗಳಿಗೆ ಕರೆತಂದು ಅವುಗಳಿಗೆ ಹೋಳಿಗೆ, ಹುಗ್ಗಿ ನೀಡಿ ರೈತರ ಮನೆಗಳಲ್ಲಿ ಸಂಭ್ರಮ …. ವರ್ಷ ಪೂರ್ತಿ ರೈತರ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ಕಾರ ಹುಣ್ಣಿಮೆ ದಿನ ಎಲ್ಲಿಲ್ಲದ ಆತಿಥ್ಯವನ್ನು ರೈತರು ನೀಡುತ್ತಾರೆ.

Please follow and like us: