ರಾಷ್ಟ್ರೀಯತೆ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ

⁠⁠⁠‘ಹಿಂದೂತ್ವ  ಮಲೆತು  ಹೋದ ಬೆನ್ನಲ್ಲೆ ಹುಸಿ ದೇಶಭಕ್ತಿಯ  ಸಮೂಹ ಸನ್ನಿ ಸೃಷ್ಟಿಸುವ ಹುನ್ನಾರಕ್ಕಿಳಿದಿರುವ ಶಕ್ತಿಗಳು,ವ್ಯಕ್ತಿಗಳು. ಸಾಮಾಜಿಕ ನ್ಯಾಯದ ಬೆನ್ನ ಹಿರಿಯುತ್ತಲೆ ಅದರ ಹರಿಕಾರ  ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹೊತ್ತು ಮೆರವಣಿಗೆ ಹೊರಟಿದ್ದಾರೆ.  ಇಂತಹ ಕುತ್ಸಿತ ರಾಷ್ಟ್ರೀಯತೆ, ಮಾರ್ಜಲ ನಿಷ್ಠೆಯನ್ನು ನಾಡಿನ ಪ್ರಖರ ಚಿಂತಕ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಮಾತಿನಲ್ಲಿ ಬಟಾಬಯುಲು ಮಾಡಿದ್ದಾರೆ. ಮೀಸಲಾತಿಯ ಕಾಲಘಟ್ಟದ ತುರ್ತುನ್ನು ತೆರದಿಟ್ಟಿದ್ದಾರೆ.  ಶಿವಮೊಗ್ಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ಪ್ರೋ.ಬಿ ಕೃಷ್ಣಪ್ಪ ಅವರ 78ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ “ರಾಷ್ಟ್ರೀಯತೆ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ” ಕಾರ್ಯಾಗಾರವನ್ನು ಉದ್ಘಾಟಿಸಿದ್ದ ದಿನೇಶ್ ಅಮೀನ್ ಮಟ್ಟು ಅವರ ಮಾತುಗಳು ಯಥಾವತ್ತಾಗಿ ಇಲ್ಲಿವೆ….

ರಾಷ್ಟ್ರೀಯತೆಯ ಮೂಲ ಕಲ್ಪನೆ ಈ ನೆಲದಲ್ಲಿ ಬಂದಿದೆ. ಅದು ನಮೆಗೆಲ್ಲರಿಗೂ ಗೊತ್ತಿದೆ. ಆದರೆ ಹೊಸದೊಂದು ರಾಷ್ಟ್ರೀಯತೆ ಕಲ್ಪನೆಯನ್ನು ಈ ದೇಶದಲ್ಲಿ ಮೊದಲು ಭಿತ್ತಿದವನು ವಿನಾಯಕ ದಾಮೋಧರ ಸಾವರ್ಕರ್. 1929 ರಲ್ಲಿ ಅವರು ಸಣ್ಣದೊಂದು ಶಬ್ದವನ್ನು  ಸೃಷ್ಟಿಸುತ್ತಾರೆ.ಆದರೆ ಹೆಸರು ‘ಹಿಂದೂತ್ವ’.  ಮೊದಲಬಾರಿಗೆ  ಧರ್ಮ ಮತ್ತು ಸಂಸ್ಕøತಿಯನ್ನು ಒಟ್ಟು ಸೇರಿಸಿ ‘ಹಿಂದೂತ್ವ’ ಎಂಬ ಶಬ್ದವನ್ನು ಬಳಸುತ್ತಾರೆ. ಹಿಂದೂತ್ವ ಎಂಬ ಶಬ್ದ ವೇದ,ಪುರಾಣಗಳಲಿಲ್ಲ. ಯಾರದಾರೂ ಬರಲಿ, ಚಾಲೆಂಜ್ Ambedkar-and-hindutva

ಮಾಡುತ್ತೇನೆ. ಧರ್ಮವನ್ನು ಮತ್ತು ಸಂಸ್ಕøತಿಯನ್ನು ಒಟ್ಟು ಮಾಡಿ ಹೊಸದೊಂದು ರಾಷ್ಟ್ರೀಯತೆಯನ್ನು cultural nationalism ಹುಟ್ಟು ಹಾಕಲಾಯಿತು. ಇವತ್ತು ಬಿಜೆಪಿಯವರು ಹೇಳುತ್ತಿರುವುದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳುತ್ತಿರುವುದು, ಇಡೀ ಸಂಘಪರಿವಾಹ ಹೇಳುತ್ತಿರುವುದು ಇದೇ ರಾಷ್ಟ್ರೀಯತೆಯನ್ನೆ . ಬಹಳ ಜನ ಕೇಳಬಹುದು !cultural nationalism
ಅಂತ ಕರೆದರೆ ತಪ್ಪೇನು?  ಅಂತ. ಇದನ್ನು ತಿಳಿದುಕೊಳ್ಳಬೇಕಾದರೆ  ಸಾವರ್ಕರ್ ಅವರು ಯಾವುದನ್ನು ಧರ್ಮ ಅಂತ ಹೇಳಿದ್ರೋ  ಆ ಹಿಂದೂ ಧರ್ಮದ ಬಗೆಗಿನ  ಕಲ್ಪನೆ ಏನು  ಅಂತ ಹೇಳ್ತಾರೆ ‘ದೇಶ, ಗಡಿ ಇದನ್ನೆಲ್ಲಾ ಮೀರಿದ್ದು, ಕೇವಲ ವಾಸದ ಸ್ಥಳದ ಕಾರಣಕ್ಕಾಗಿ ಹಿಂದೂ ಆಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಹಿಂದೂವಿಗೂ ಈ ಹಿಂದೂ ಸ್ಥಾನ ಮಾತ್ರ ಮಾತೃಭೂಮಿ.  ಇದು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗಲ್ಲ. ಏಕೆಂದರೆ ಭಾರತ ಅವರಿಗೆ ಪಿತೃ ಭೂಮಿ ಆಗಿದ್ದರೂ ಕೂಡ ಅವರ ಆಹರ, ಸಂಸ್ಕøತಿ, ಭಾಷೆ, ಜನಪದ  ಭಿನ್ನವಾಗಿದೆ. ಅದ್ದರಿಂದ  ಅವರ ಯಾವತ್ತೂ ಹಿಂದೂ ಆಗಲಾರರು . ಅವರ ಪುಣ್ಯಭೂಮಿ ಅರೇಬಿಯಾ, ಪ್ಯಾಲೇಸ್ತೇನ್ ನಲ್ಲಿದೆ.  ಇಲ್ಲಿ ಅಲ್ಲ.’  ಹೀಗೆಂದು ಸಾವರ್ಕರ್ ಹಿಂದೂತ್ವದ ವ್ಯಾಖ್ಯಾನವನ್ನು ಮಾಡುತ್ತಾರೆ.
ಸಾವರ್ಕರ್ ನಂತರ ಈ ಸಿದ್ದಾಂತವನ್ನು  ಮುಂದುವರೆಸಿಕೊಂಡು ಹೋದವರು ಗೋಳ್ವಾಲ್ಕರ್. ಅವರು ಹೇಳ್ತಾರೆ ‘ಈ ಭೂಮಿಯಲ್ಲಿ ಯಾರೂ ಕೂಡ ಹಿಂದೂವಾಗಿ , ಕ್ರಿಶ್ಚಿಯನ್ನಾಗಿ ,ಮುಸ್ಲೀಂ ಆಗಿ ಹುಟ್ಟುವುದಿಲ್ಲ. ಎಲ್ಲರೂ ಮನುಷ್ಯರಾಗಿ ಹುಟ್ಟುತ್ತಾರೆ. ಆದರೆ ಹಿಂದೂಗಳು ತಾಯಿಗರ್ಭದಿಂದ  ಚಿತೆಗೆ ಏರುವತನಕ 16 ಬಗೆಯ ಸಂಸ್ಕಾರಗಳನ್ನು ಮಡಬೇಕಾಗುತ್ತದೆ.  ಆ ಸಂಸ್ಕಾರಗಳಿಂದ ಹುಟ್ಟಿ ಬಂದ ನಂತರ ಅವರು ಹಿಂದೂಗಳಾಗುತ್ತಾರೆ. ಉಳಿದವರು ಕೇವಲ ಅನಾಮಿಕರಾಗಿ  ಜೀವನ ಮಾಡುತ್ತಾರೆ. ಆದ್ದರಿಂದ ಭಾರತದ ಮೂಲ ಸಂಸ್ಕøತಿ ಹಿಂದೂ ಸಂಸ್ಕøತಿ.’
ಈ ಹಿಂದೂ ಸಂಸ್ಕøತಿ ತಮ್ಮ ನೀತಿ ,ಧೋರಣೆಯಲ್ಲಿ ವ್ಯಕ್ತವಾಗಬೇಕು ಎಂದು ಹೇಳಿದವರು ಸಾವರ್ಕರ್, ಗೋಳ್ವಾಲ್ಕರ್ ಅವರಿಬ್ಬರೂ ಅಲ್ಲ. ಅದನ್ನು ಮೊದಲ ಬಾರಿಗೆ ಹೇಳಿದವರು ರಥಯಾತ್ರೆಗೆ ಹೊರಟ  ಲಾಲ್‍ಕೃಷ್ಣ ಅದ್ವಾನಿ ಅವರು. ಇವತ್ತು ಗಾಯಗೊಂಡು ನೆಕ್ಕುತ್ತಾ ಕುಳಿತ್ತಿದ್ದಾರೆ. ಸಾವರ್ಕರ್ ನಂತರ ಬಂದ ಗೋಳ್ವಾಲ್ಕರ್, ಹೆಗ್ಡೆವಾರ್ ಅವರುಗಳ ರಾಷ್ಟ್ರೀಯತೆ ಕಲ್ಪನೆ ಹೇಗಿದೆಯೆಂದರೆ ಅದರಲ್ಲಿ ಐದು ಘಟಕಗಳಿರಬೇಕಂತೆ. ಅದು 1.ದೇಶ, 2.ಜನಾಂಗ,3.ಧರ್ಮ, 4. ಸಂಸ್ಕøತಿ, 5.ಭಾಷೆ.  ಆಗಲೆ ಸಾವರ್ಕರ್ ಅವರು ಧರ್ಮ-ಸಂಸ್ಕøತಿಯ್ನನು ಒಟ್ಟು ಮಾಡಿದ್ದರು. ಯಾವುದು ಈ ಐದು ಘಟಕಗಳಿಗೆ ಫಿಟ್ ಆಗುತ್ತದೆಯೋ ಅದು ರಾಷ್ಟ್ರೀಯತೆ . ದೇಶ ಎಂದರೆ ಭಾರತ.ಆದರೆ,  ಭಾರತದಲ್ಲಿ ಹುಟ್ಟಿದ ಮಾತ್ರಕ್ಕೆ ಆತ ರಾಷ್ಟ್ರೀಯನಾಗಲಾರ.

ಮಹಾತ್ಮ ಗಾಂಧೀಜಿ  ಪ್ರತಿಪಾದಿಸಿದ್ದು ಭೌಗೋಳಿಕ ಆಧಾರಿತ ರಾಷ್ಟ್ರೀಯತೆ. ಇದರಂತೆ ಈ ದೇಶದ ಗಡಿಯೊಳಗೆ ಯಾರೆಲ್ಲಾ ಹುಟ್ಟುತ್ತಾರೆ ಅವರೆಲ್ಲಾ ಭಾರತೀಯರುsavarkar.

 

ನಾನ್ ಮುಸ್ಲೀಂ ಬಗೆ ಮೊದಲು ಪ್ರತಿಪಾದಿಸಿದವರು ಗ್ರೇಟ್ ಸಾವರ್ಕರ್. ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ ಅವು ಹಿಂದೂವಾಗಿದ್ದರೆ ಅವರು ಭಾರತೀಯನೆ ಎಂಬ ಅರ್ಥದಲ್ಲಿ ಹೇಳಿದ್ದರು. ಇವತ್ತು ಮುಸ್ಲೀಂರ ಮೇಲಿರುವ ಆರೋಪವೂ ಇದೇ.  ಇದರ ಮೊದಲ ಪ್ರತಿಪಾದಕರು ಆರ್.ಎಸ್ ಎಸ್ ನ ಅದೇ ಸಾವರ್ಕರ್, ಗೋಳ್ವಾಲ್ಕರ್. ಎಲ್ಲಿಯವರೆಗೂ ಹಿಂದೂ ಗಳಲ್ಲದವರು ಈ ಮೂಲ ಜನಾಂಗದವರೊಡನೆ ಸೇರಿ ಅಂದರೆ, ಕೇವಲ ರಾಜಕೀಯ.ಆರ್ಥಿಕ, ಸಾಮಾಜಿಕ ವಿಚಾರಗಳಿಗೆ ಸೇರಿ ಅವರ ಪಾಡಿಗೆ ಇದ್ದರೆ ಸರಿ, ಆದರೆ ಅವರು ಈ ದೇಶದ ಅಧಿಕಾರದಲ್ಲಿ ಪಾಲ್ಗೋಳ್ಳಬಾರದು, ಈ ದೇಶದ ನೀತಿ, ನಿರ್ಧಾರಗಳನ್ನು ನಿರ್ಣಯಿಸುವ ಘಟಕಗಳಲ್ಲಿ ಅವರು ಭಾಗವಹಿಸಬಾರದು. ಅವರಿಗೆ ಹಕ್ಕಿಲ್ಲ. ಸರಳವಾಗಿ ಹೇಳುವುದಾದರೆ ಅವರು ಎರಡನೇ ದರ್ಜೆಯ ನಾಗರೀಕರಾಗಿ ಬದುಕಬಹುದು. ಅದ್ದರಿಂದ ನಾವು   ಆ ರಾಷ್ಟ್ರೀಯತೆಯನ್ನು  ಒಪ್ಪಿಕೊಳ್ಳಬೇಕಾ?
ಈ ದೇಶವನ್ನು ಇವತ್ತು ಆಳುತ್ತಿರುವ ಬಹಳ ಮಂದಿಯ ಕಾರ್ಯವೈಖರಿ ನೋಡಿದರೆ ಹಿಟ್ಲರ್ ನ ನೆನಪಿಸಬಹುದು.   ಅಂತಹ ಅಭಿಪ್ರಾಯವಿದೆಯಲ್ಲಾ ಅದು ಅನ್ ಫೌಂಡೇಡ್.  ಏಕೆಂದರೆ ಗೋಳ್ವಾಲ್ಕರ್ ತನ್ನ ‘we are our nation ‘ ಎಂಬ ಪುಸ್ತಕದಲ್ಲಿ  ಹಾಡಿ ಕೊಂಡಾಡಿದ್ದು, ಹಿಟ್ಲರ್‍ನನ್ನು ಮತ್ತು ಮುಸ್ಲೀಂ ರನ್ನು . ಅವರು ಹೇಳ್ತಾರೆ,  ‘ಜರ್ಮನಿ ತನ್ನ ಸ್ವಂತ ಜನಾಂಗ, ಸಂಸ್ಕøತಿಯ ಪರಿಶುದ್ದತೆಯನ್ನು ಕಾಪಾಡಲಿಕ್ಕೆ ದೇಶದೊಳಗಿನ ಸೆಮಿಟಿಕ್ಸ್ ಜನಾಂಗಗಳಾದ ಯಹೋದಿಗಳನ್ನು ನಾಶ ಮಾಡಿ ಜಗತ್ತಿಗೆ ಏನು  ಆಘಾತವನ್ನು ನೀಡಿದ್ದರು. ಅಂತಹ ಆಘಾತವನ್ನು ನಾವೂ ಕೂಡ ನೀಡಬೇಕಾಗುತ್ತದೆ. ಮೂಲಭೂತ ವ್ಯತ್ಯಾಸಗಳನ್ನು ಹೊಂದಿರುವ  ಯಾವುದೇ ಜನಾಂಗ ಏಕ ಸಂಸ್ಕøತಿಯಾಗಿ ಒಗ್ಗೂಡಲಿಕ್ಕೆ  ಸಾಧ್ಯವಿಲ್ಲ. ಆದ್ದರಿಂದ ಜರ್ಮನಿಯ ಹಿಟ್ಲರ್ ನಿಂದ ಹಿಂದೂ ಸ್ಥಾನ ಪಾಠಕಲಿಯಬೇಕು.’ ಅಂತ ಹೇಳಿದ್ದಾನೆ. ಇದೆಲ್ಲವೂ ಲಿಖಿತ ರೂಪದಲ್ಲಿದೆ. ಸಾವರ್ಕರ್, ಗೋಳ್ವಾಲ್ಕರ್, ಹೆಗ್ಡೆವಾರ್ ಅವರುಗಳು ಹೇಳಿದ್ದನ್ನು ಒಪ್ಪುತ್ತಾರೂ ,ಬಿಡುತ್ತಾರೂ ಎಂಬುದನ್ನು ಅವರು ಹೇಳಬೇಕು(ಆರ್.ಎಸ್ ಎಸ್) ಅವರು ಒಪ್ಪದಿದ್ದರೆ ಬಹಿರಂಗವಾಗಲಿ. ನಮ್ಮದು ಮುಚ್ಚಿಡುವಂತಹುದ್ದು ಏನೂ ಇಲ್ಲ, ಎಲ್ಲವೂ ಬಿಚ್ಚಿಡುವಂತಹುದ್ದು, ನೇರಾ,ನೇರಾ ಮಾತು.ಆತ್ಮವಂಚನೆ ಇಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ. ಅವರ ಅಂತರಂಗದಲ್ಲಿ ಒಬ್ಬ ಗೋಳ್ವಾಲ್ಕರ್ ಇದ್ದಾನೆ ,ಸಾವರ್ಕರ್ ಇದ್ದಾನೆ. ಬಾಯಲ್ಲಿ ಅಂಬೇಡ್ಕರ್  ಪಠಣ ಮಾಡ್ತಾರೆ. ಇದು ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬಗೆಯುವ ಮಹಾನ್ ದ್ರೋಹ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

advani
ಸಂವಿಧಾನವನ್ನೆ  ನಮ್ಮ ಧರ್ಮ ಎಂದು ಈ ದೇಶದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೇರಿಕಾದಲ್ಲಿ ಹೇಳಿದ್ದಾರೆ. ಸಂವಿಧಾನ  ಸಾವರ್ಕರ್,ಗೋಳ್ವಾಲ್ಕರ್ ಅವರ ರಾಷ್ಟ್ರೀಯತೆಯನ್ನಾ ಒಪ್ಪುತ್ತಾ?, ಎಲ್ಲರೂ ಸಮಾನ ಎಂಬುದೇ ಅದರ ತಳಹದಿಯೇ ಅದು.  ಪಂಚಾಂಗ,ಬುನಾದಿ ಅದನ್ನು ಅವರು ಒಪ್ಪುತ್ತಾರೆ.  ಈ ದೇಶದ ಮುಸ್ಲೀಂರು, ಕ್ರಿಶ್ಚಿಯನ್ನರು ಎರಡನೇ ದರ್ಜೇಯ ನಾಗರೀಕರನ್ನಾಗಿ ಒಪ್ಪಲು ಸಾಧ್ಯವಾಗುತ್ತಾ? ಅದನ್ನು ಅವರು ಒಪ್ಪಿಕೊಂಡರೆ ಆಗ ಅವರ ಮುಖವಾಡ ಕಳಚುತ್ತದೆ. ಕಾಣಲು ಪ್ರಾರಂಭವಾಗುತ್ತದೆ.  ಗೋಳ್ವಾಲ್ಕರ್ ಎಲ್ಲಿಯವರೆಗೆ ಹೇಳಿದ್ದಾನೆಂದರೆ ಹಿಂದೂ ಜಾತಿಯ ದೋಷಗಳಾದ ವರ್ಣವ್ಯವಸ್ಥೆ ಯು  ನಮ್ಮ ಸಮಾಜದ ಅನ್ಯನ್ಯ ಕ್ರಮಗಳು  ಎನ್ನುತ್ತಾನೆ. ಆರ್.ಎಸ್ ಎಸ್ ನ ಸ್ವಯಂ ಸೇವಕರನ್ನು ಕೇಳಿದ್ರೆ ಅವರು ನಮ್ಮ ಗುರೂಜೀ ಎನ್ನುತ್ತಾರೆ. ಗೋಳ್ವಾಲ್ಕರ್ ಇದೆನ್ನೆಲ್ಲಾ ಹೇಳಿದ್ದಾರೆ ಎಂದು ಅಮಾಯಕರಾಗಿ ಲಾಠಿ ಹಿಡ್ಕೊಂಡು ಚೆಡ್ಡಿ ಹಾಕ್ಕೋಂಡು  ಬೆಳಗ್ಗೆ ಎದ್ದು ಹೋಗಿ ಸದಾವತ್ಸಲೆ ಮಾತೃಭೂಮಿ….. ಎಂದು ಹೇಳುವವರೆಗೆ ಇದ್ಯಾವುದು ಗೊತ್ತಿಲ್ಲ. ಅಂತರಂಗದ ಅಜೆಂಡಾ ಬೇರೆನೆ ಇದೆ.

 

ನನಗೆ ಆರ್.ಎಸ್.ಎಸ್ ನ ಸಿದ್ದಾಂತದ ಬಗ್ಗೆ ತಕರಾರಿಲ್ಲ. ಆ ಸಿದ್ದಾಂತವನ್ನು ಸಿದ್ದಾಂತದಿಂದಲೆ ಎದುರಿಸುವುದಕ್ಕೂ ತಕರಾರಿಲ್ಲ.  ಆದರೆ  ಆ ಸಿದ್ದಾಂತವನ್ನು ಅವರು ಬಹಿರಂಗಗೊಳಿಸಬೇಕು.  ಗುಪ್ತ ಅಜೆಂಡಾವನ್ನಾಗಿಟ್ಟುಕೊಂಡು ಜನರನ್ನು ತಪ್ಪು ದಾರಿಗೆಳೆಯಬಾರದು.  ಗೋಳ್ವಾಲ್ಕರ್ ಹೇಳ್ತಾರೆ  ಬ್ರಾಹ್ಮಣರು  ತಮ್ಮ ಜ್ಞಾನಕ್ಕಾಗಿ, ವೈಶ್ಯರು ವ್ಯಾಪಾರ-ವಹಿವಾಟಿಗಾಗಿ, ಕ್ಷತ್ರೀಯರು ಶತೃಸಂಹಾರಕ್ಕಾಗಿ, ಶೂದ್ರರು  ಶ್ರಮಕ್ಕಾಗಿ ಪ್ರಸಿದ್ದರು. ಮನು ಹೇಳಿದ್ದು ಮತ್ತು ಗೋಳ್ವಾಲ್ಕರ್ ಹೇಳಿದ್ದರಲ್ಲಿ ಯಾವುದೇ ವ್ಯತ್ಯಾಸವಿದೆಯಾ? ಹಾಗೆ ನೋಡಿದರೆ ಸಾವರ್ಕರ್ ಮೊದಲೆ ಹೇಳಿದ್ದು. ಇವತ್ತು ರಾಷ್ಟ್ರೀಯತೆ ಎಂತಹ ಏನು ಹೇಳುತ್ತಿದ್ದಾರೆ ಅದರ ಮೂಲ ಗುರುವೇ ‘ಮನು’ ಇಟ್ಟುಕೊಳ್ಳಬೇಕಾಗುತ್ತದೆ. ಅಲ್ಲಿಂದ  ಈ ಪರಂಪರೆ ಇಲ್ಲಿಗೆ ಬಂದು ನಿಂತಿದೆ.

ಇನ್ನೂ ಮುಂದಕ್ಕೆ ಹೋದರೆ ಆರ್.ಎಸ್ ಎಸ್ ಹುಟ್ಟಿಕೊಂಡಿದ್ದು ಯಾಕೆ ಎಂದರೆ 1920 ರಿಂದ 1925 ರವರೆಗೆ  ಆಗಷ್ಟೆ ಅಂಬೇಡ್ಕರ್ ಬಂದಿದ್ದರು. ಬಹಳಷ್ಟು ದಲಿತ ಜಾಗೃತಿ, ಸಂಘಟನೆಗಳ ಕಾರ್ಯಕ್ರಮಗಳು ನಡೆಯುತ್ತಿದ್ದವು.  ಅದೇ ಕಾಲದಲ್ಲಿ ಆರ್.ಎಸ್ ಎಸ್ ಹುಟ್ಟಿಕೊಂಡಿದ್ದು 1925.  ನೀವು ಇಸವಿಯನ್ನು ಸರಿಯಾಗಿ ನೋಡಿದರೆ 1915 ರಿಂದ 1925 ರವರೆಗೆ 5-10 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಏನೆಲ್ಲಾ ನಡೆಯಿತು ಅಂತ ನೋಡಿದಾಗ  ಆರ್.ಎಸ್ ಎಸ್ ಯಾಕೆ ಹುಟ್ಟಿಕೊಂಡಿತು ಅಂತ ಗೊತ್ತಾಗುತ್ತದೆ.  ಅವರು ಬಹಿರಂಗವಾಗಿ ಹೇಳುತ್ತಿದ್ದದ್ದು ನಮ್ಮ ಆಂತರಿಕ ಶತೃಗಳಾದ ಕಮ್ಯೂನಿಷ್ಟರು , ಮುಸ್ಲೀಂರು, ಕ್ರೈಸ್ತರು ಅಂತ.  ದಲಿತರು ಅಂತ ಹೇಳೋದಿಲ್ಲ.  ಆದ್ರೆ, ಆರ್. ಎಸ್ ಎಸ್ ಹುಟ್ಟಿಕೊಂಡಿದೇ ಮುಖ್ಯವಾಗಿ ಈ ದಲಿತ ಸಮುದಾಯದಲ್ಲಿ ಹುಟ್ಟಿಕೊಂಡ ಜಾಗೃತಿ  ಏನಿದೆ  ಇದು ಎಲ್ಲೋ ಒಂದು ಕಡೆ ನಾವು ಪ್ರತಿಪಾದಿಸುವ ರಾಷ್ಟ್ರೀಯತೆಗೆ ಏಟು ಕೊಡುತ್ತದೆ ,ವ್ಯವಸ್ಥೆಯನ್ನು ಬದಲಾವಣೆ ಮಾಡಬಹುದು  ಎಂಬ ಆತಂಕದಿಂದ ಹುಟ್ಟಿಕೊಂಡದ್ದು.  ಈ ದೃಷ್ಟಿಯಲ್ಲಿ  ಇತಿಹಾಸವನ್ನು ನೋಡಿದರೆ  ಅದು ಗೊತ್ತಾಗುತ್ತದೆ.

ಆದ್ದರಿಂದ ನಾವು ಇವತ್ತು ತಿಳಿದುಕೊಳ್ಳಬೇಕಾದ್ದು ಏನೆಂದರೆ ಬಾಬಸಾಹೇಬ್ ಅಂಬೇಡ್ಕರ್  ಏನೂ ಸಂವಿಧಾನ ಕೊಟ್ಟಿದ್ದಾರೆ ಆ ಸಂವಿಧಾನ ಯಾವ ರಾಷ್ಟ್ರೀಯತೆ  ಹೇಳುತ್ತೇ, ಅದು ನಮ್ಮ ರಾಷ್ಟ್ರೀಯತೆ. ಏಕೆಂದರೆ ಅಂಬೇಡ್ಕೆರ್  ಅವರು ಸ್ಪಷ್ಟವಾಗಿ ಹೇಳಿದ್ದಾರೆ .
ಅಂಬೇಡ್ಕರ್ ಮತ್ತು ಗಾಂಧೀಜಿ ನಡುವಿನ ವ್ಯತ್ಯಾಸಗಳೇನು? ಸ್ವಾತಂತ್ರ್ಯ ಹೋರಾಟದ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯವಿತ್ತು. ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ಮುಖ್ಯ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು. ‘ಒಂದು ಮತ ಒಂದು ಮೌಲ್ಯ’ ಎಂದು ಹೇಳುತ್ತಿದ್ದರು. ಅದರೆ ಸಾವರ್ಕರ್, ಗೋಳ್ವಾಲ್ಕರ್  ಹೇಳುವ ರಾಷ್ಟ್ರೀಯತೆಯಲ್ಲಿ  ಇದು ಇಲ್ಲ.  ಒಂದು ಮತ ಒಂದು ಮೌಲ್ಯ ದಲ್ಲಿ ಅಂಬಾನಿ,ಅದಾನಿಯೂ ಒಂದೇ ,ನಾನು -ನೀವು ಒಂದೇ.  ಇಂತಹ ರಾಷ್ಟ್ರೀಯತೆಯನ್ನು ಸ್ವೀಕರಿಸಬೇಕೆನ್ನುವಾಗ ಅದನ್ನು ತಿಳಿದುಕೊಳ್ಳಲು ಮತ್ತ ಮತ್ತೆ ನಾವು ಅಂಬೇಡ್ಕರ್ ಅವರ ಬಳಿ ಹೋಗಬೇಕು.  ಸಂವಿಧಾನವನ್ನು ಓದಬೇಕು. ಎಲ್ಲವೂ ಸ್ಪಷ್ಟವಾಗಿರಬೇಕಾದ ಗೊಂದಲಗೊಳಗಾಗಬೇಕಾದ ಅವಶ್ಯಕತೆ ಇಲ್ಲ.
ಇನ್ನೂ ಎರಡನೇ ವಿಚಾರ ‘ಸಾಮಾಜಿಕ ನ್ಯಾಯದ ಪ್ರಶ್ನೆ’

ಸಾಮಾಜಿಕ ನ್ಯಾಯ ಇತ್ತೀಚೆಗೆ ಬಹಳ ಚರ್ಚೆ ಆಗುತ್ತಿದೆ.  ಈ ಮೂರು ವರ್ಷಗಳಲ್ಲಿ ಈ ವಿಷಯವನ್ನು ಗೇಲಿ ಮಾಡಲಾಗುತ್ತಿದೆ. ‘ಏನು ಸೋಷಿಯಲ್ ಜಸ್ಟೀಸ್ ಅಂತೆ,? ಏನು ಸಾಮಾಜಿಕ ನ್ಯಾಯ ಅಂತೆ? ಎಂಬ ಈ ರೀತಿಯ ಗೇಲಿ ಮಾಡುವ ಉಡಾಫೆತನಗಳಿಂದ ಅದಕ್ಕೆ ಪ್ರತಿಕ್ರೀಯಿಸುವ ಪ್ರವೃತ್ತಿ ಹೆಚ್ಚಾಗಿದೆ.  ಸಾಮಾಜಿಕ ನ್ಯಾಯದ ಪ್ರಶ್ನೆ ಬಂದಾಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದರ ರೆಡು ಪ್ರಮುಖ ಅಸ್ತ್ರಗಳು 1 ಮೀಸಲಾತಿ, 2 ಭೂಸುಧಾರಣೆ.  ಮೀಸಲಾತಿಯನ್ನು ಓಮ್ಮೆ ತಿರುಗಿ ನೋಡಿ, ಅದರ ಫಲ ಏನಾಗಿದೆ? ಯಶಸ್ಸು-ವೈಫಲ್ಯಗಳೇನು?ಫಲಾನುಭವಿಗಳು ಯಾರು?, ಎಷ್ಟು ಮಂದಿಗೆ ತಲುಪಿದೆ, ಎಷ್ಟು ಮಂದಿಗೆ ತಲುಪಿಲ್ಲ ಯಾಕೆ? ಇಂತಹ ಆತ್ಮಾವಲೋಕನ ನಮ್ಮಲ್ಲಿ ಆಗಬೇಕಾಗಿದೆ.

ನನ್ನ ಪ್ರಕಾರ ಈಗಿನ ಮೀಸಲಾತಿಯನ್ನು ಮೀರಿ ಆಚೆಗೆ ನೋಡಬೇಕಾದ ಕಾಲ ಬಂದಿದೆ.  ಏಕೆಂದರೆ, ಮೀಸಲಾತಿಯನ್ನು ಸರ್ಕಾರಿ ಉದ್ಯೋಗ, ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಇದೆ. ಇವತ್ತು ಸರ್ಕಾರಿ ಉದ್ಯೋಗಗಳ ಸಂಖ್ಯೆ ಕಡಿಮೆ ಯಾಗುತ್ತಿವೆ.  ಯಾವ ಸರ್ಕಾರಗಳು ಕೂಡ ತಡೆಯಲಿಕ್ಕಾಗದ ರೀತಿಯಲ್ಲಿ ಖಾಸಗೀಕರಣ ಭರದಿಂದ ಸಾಗಿದೆ. ಸರ್ಕಾರದ ಎಲ್ಲಾ ಸೇವೆಗಳು ಔಟ್ ಸೋರ್ಸ್ ಗೆ ಹೋಗುತ್ತಿವೆ. ಪೌರಕಾರ್ಮಿಕರಿಂದ ಹಿಡಿದು ಎಲ್ಲವೂ …… ಮತ್ತೆ ಔಟ್ ಸೋರ್ಸ್ ನಲ್ಲಿ ಇದೇ ಪೌರಕಾರ್ಮಿಕರೆ ಬರುತ್ತಾರೆ. ಹೀಗಿರುವಾಗ ನಾವು ಹಳೆ ಮೀಸಲಾತಿಯನ್ನೆ ಇಟ್ಟುಕೊಂಡು ಏನು ಮಾಡುವುದು? ಅದರ ಆಚೆಗೆ ಅಂದರೆ , ಖಾಸಗಿ ಕ್ಷೇತ್ರದ ಕಡೆಗೆ ನೋಡಬೇಕಾಗಿದೆ. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿಯನ್ನು ನೋಡಬೇಕಾಗಿದೆ. ಇವತ್ತು ಬಹಳ ದೊಡ್ಡ ಹೋರಾಟ ನಡೆಯಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಗೆ ನೋಡಬೇಕೆ ವಿನಃ, ಹಳೆಯದಕ್ಕೆ ಅಂಟಿಕೊಂಡು  ಜಗಳ ಮಾಡುತ್ತಾ ಕೂರಬಾರದು.

ಇದರ ಆಚೆಗೆ ಇನ್ನೂ ನೋಡಲಿಕ್ಕೆ ಸಾಧ್ಯವಿದೆ . ಏನೆಂದರೆ, ಅದು ಸೋಷಿಯಲ್ ಕ್ಯಾಪಿಟೆಲ್ ಅಂದರೆ ಸಾಮಾಜಿ ಕ ಬಂಡವಾಳ  ಹೂಡಿಕೆ ಕಡೆಗೆ ನೋಡಬೇಕು.  ಪ್ರಜಾವಾಣಿಯ  ಮಾಲೀಕರು ಮೂಲತಃ ಅಬಕಾರಿ ಗುತ್ತಿಗೆ ದಾರರು. ಅದರ ಅಜ್ಜ ಗುರುಸ್ವಾಮಿ ಅವರು ಅಬಕಾರಿ ಕಂಟ್ರ್ಯಾಕ್ಟ್ ಜೊತೆಗೆ ಒಂದು ಪತ್ರಿಕೆಯನ್ನು ಮಾಡಿದರು. ಪತ್ರಿಕೆ ಮಾಡುವ ಉದ್ಯಮ  ಆ ಕಾಲದಲ್ಲೆ ನಷ್ಟದ್ದು , ಲಾಭದಾಯಕವಲ್ಲವಾದರೂ ಗುರುಸ್ವಾಮಿ ಅವರು ಪತ್ರಿಕೆ ಮಾಡಿದರು. ಅವರ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು.  ಅದರೆ ಇವತ್ತು ಆ ಪತ್ರಿಕೆ ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ.  ಆ ರೀತಿಯ ಸಾಮಾಜಿ ಕ ಬಂಡವಾಳವನ್ನು ಇಂದು ಹೂಡಬೇಕಾಗಿದೆ. ಇವತ್ತು ಎಲ್ರೋ ಮೀಡಿಯಾವನ್ನು ಬೈಯ್ಯುತ್ತಿದ್ದಾರೆ.  ‘ಪತ್ರಿಕೆಗಳು  ಹೀಗೆ..ಚಾನಲ್ ಗಳು ಹೀಗೆ.., ಏನ್ ಸಾರ್ ಹೀಗೆ ನಿಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ……’ ನಾನೇ ಏನೂ ಎಲ್ಲಾ ಸಮಸ್ಯೆಗಳಿಗೂ ಮೂಲ ಪುರುಷನಾಗಿದ್ದಂತೆ ಕಾಣುತ್ತಿದ್ದೇನೆ ಎನ್ನುವಂತಾಗಿದೆ.  ಅದಿರಲಿ,

ಆದರೆ ದಲಿತರು,ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಲ್ಲಿ ದುಡ್ಡಿರುವವರು ಬಹಳ ಮಂದಿ ಇದ್ದಾರೆ. ನಾನು ಅಂತಹ ನೂರು ಹೆಸರು ಹೇಳಬಲ್ಲೆ. ಅವರು ಒಂದು ಪತ್ರಿಕೆ ಅಥವಾ ಚಾನಲ್ ನ್ನು ಮಾಡಬಹುದು. ಯಾಕೆ ಈ ಬಗ್ಗೆ ಯೋಚನೆ ಮಾಡುತ್ತಿಲ್ಲ? ಸಣ್ಣ,ಸಣ್ಣ ಪತ್ರಿಕೆಗಳು ಪಾಪ!  ಅವರವರ ಮಿತಿಗೆ ತಕ್ಕಂತೆ ಮಾಡುತ್ತಿವೆ. ಸಣ್ಣ ಪತ್ರಿಕೆಗಳೆ  ಇವತ್ತಿನ ಆಶಾಕಿರಣ. ಮೀಸಲಾತಿಯನ್ನು ನೆಚ್ಚಿಕೊಳ್ಳದೆ ಅದರ ಆಚೆ ನೋಡುವ ಪ್ರಯತ್ನ ಮಾಡದೆ ಇದ್ದರೆ, ನಾವು ಹಳೆಯದ ಬಗ್ಗೆ ಜಗಳ ಮಾಡುತ್ತಾ ಕೂತಿದ್ದರೆ,  ಆ ಕಡೆ ಇನ್ಪೋಸಿಸ್….. ಮತ್ತೊಂದು  ಆರಾಮಾಗಿ  ಉದ್ಯೋಗ ಭದ್ರತೆ ಮಾಡ್ಕೋಂಡು ಇದಾರೆ. ನಾವು ಇಲ್ಲಿ ಮೀಸಲಾತಿ ,ಒಳ ಮೀಸಲಾತಿ ಅಂತ ಕುಳಿತಿದ್ದೇವೆ.

ನೀವು ಶಿಕ್ಷಣ ಕ್ಷೇತ್ರದಲ್ಲಿ ನೋಡಿ, ಪ್ರೈವೇಟ್, ಡೀಮ್ಡ್  ಯೂನಿರ್ವಸಿಟಿಗಳು ತಲೆ ಎತ್ತಿವೆ. ಸಿಇಟಿ..ಮತ್ತೊಂದು ಮಣ್ಣಗಂಟಿ ಯಾವುದು ಇಲ್ಲ. ಮಣಿಪಾಲ ಪೈಗಳತ್ತ ಹೋಗಿ ನೀವು ಮೀಸಲಾತಿ ಕೇಳಿ, ಧರ್ಮಸ್ಥಳದ ವಿರೇಂದ್ರಹೆಗ್ಡೆ ಅವರನ್ನು ಕೇಳಿ ಒಬ್ಬರು ಲಿಂಗ್ವೇಸ್ಟ್ ಮೈನಾರಿಟಿ ಅಂತಾರೆ, ಮತ್ತೊಬ್ಬರು ಇನ್ ಜಸ್ಟ್ ಮೈನಾರಿಟಿ  ಅಂತಾರೆ.  ಇದರ ಬಗ್ಗೆ ಯೋಚಿಸಬೇಕು.

ಸಾಮಾಜಿಕ ನ್ಯಾಯದ ಎರಡನೇ ಅಸ್ತ್ರ ‘ಭೂಸುಧಾರಣೆ’. 1974 ರಲ್ಲಿ ಬಂದ ಈ ಕಾಯ್ದೆಗೆ ಇವತ್ತು ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ. ಭೂಸುಧಾರಣೆಯನ್ನು ತೆಗೆದು ನೋಡಿ  ಅಸ್ಥಿ ಪಂಜರದ ಹಾಗೆ ಕಾಣಿಸುತ್ತೆ. ಭೂಸುಧಾರಣೆಗೆ ಮೊದಲು ತಿದ್ದುಪಡಿ ತಂದವರು  ಈ ರಾಜ್ಯದ ಮಣ್ಣಿನ ಮಗ ಹೆಚ್.ಡಿ ದೇವೇಗೌಡರು.  ಉಳಿದವರು ಫಾಲೋ ದಿ ಮಾಸ್ಟರ್. ಈ ಸರ್ಕಾರದಲ್ಲೂ ಕೂಡ ಆಗಿದೆ. ಇವತ್ತು ಭೂಮಿ ಕೊಡುತ್ತೇನೆ ಅಂದ್ರೆ ತಗೋಳೋರು ಕಡಿಮೆ ಇದಾರೆ ಕೃಷಿ ಮಾಡಲಿಕ್ಕೆ .

ಭೂಸುಧಾರಣೆ ಕಾಯ್ದೆಯ ತಿದ್ದುಪಡಿ ಹಿಂದೆ ಹುನ್ನಾರ ಇದೆ. ನೀವು ಕೃಷಿಯನ್ನು ಎಲ್ಲಿಯತನಕ  ಲಾಭದಾಯಕ ವೃತ್ತಿಯನ್ನಾಗಿ ಮಾಡುವುದಿಲ್ಲವೂ ಅಲ್ಲಿಯವೆರಗೆ ಭೂಸುಧಾರಣೆ ಕಾಯ್ದೆಯಿಂದ ಆಗುವ ಲಾಭ ಅಷ್ಟಕ್ಕಷ್ಟೆ. ರೈತರು ಭೂಮಿಯನ್ನು ಕಾರ್ಖಾನೆಗೆ ಮಾಡಿ ಬರುವ ದುಡ್ಡಿನ್ನೆಲ್ಲಾ ಬೈಕು ,ಕಾರು ಖರೀದಿ ಮಾಡಿ, ಮಗಳ ಮದುವೆ ಮುಗಿಸಿ ಮತ್ತೆ ಅದೇ ಕಾರ್ಖಾನೆಗೆ ಸಕ್ಯೂರಿಟಿ ಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ಈ ದೇಶದಲ್ಲಿ ಏಕಕಾಲದಲ್ಲಿ ಎರಡು ಭೂತಗಳು ಪ್ರವೇಶ ಆಗ್ತಾವೆ. 1990 ರಲ್ಲಿ 1 ಕೋಮುವಾದದ ಭೂತ, 2. ಕ್ರೂನಿಬಂಡವಾಳ ದ ಭೂತ. ಒಂದು ಅದ್ವಾನಿ ತಂದಿದ್ದರೆ, ಮತ್ತೊಂದು ಮನಮೋಹನ್ ಸಿಂಗ್ ತಂದದ್ದು.  ಇವುಗಳ ನಡುವೆ ಯಾವುದೇ ವ್ಯತ್ಯಸವಿಲ್ಲ. ಇವುಗಳ ವಿರುದ್ದ ಯುದ್ದ ಮಾಡ ಬೇಕಾಗಿದೆ.  ಸಾಮಾಜಿಕ ನ್ಯಾಯದ ಎರಡು ಅಸ್ತ್ರಗಳಿವೆ ಅವು ಮೀಸಲಾತಿ, ಭೂ ಸುಧಾರಣೆ ಯ ಆಚೆಗೂ ಇನ್ನೋಂದು ಇದೆ. ಅದು ‘ರಾಜಕೀಯ ಪ್ರಾತಿನಿಧ್ಯ’  ಇದರ ಅಪಾಯವನ್ನು ಬಬಸಾಹೇಬ್ ಅಂಬೇಡ್ಕರ್ ಅವರು ಅವತ್ತಿಗೆ ಹೇಳೀದ್ರು. ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಇದೇ ಕಾರಣಕ್ಕೆ ಭಿನ್ನಾಭಿಪ್ರಾಯವಿತ್ತು. ದಲಿತರಿಗೆ  ಅವರೇ ಮತದಾರರಾಗಿ ಪ್ರತ್ಯೇಕ ಮತಕ್ಷೇತ್ರ ಮಾಡಬೇಕೆಂಬುದನ್ನು ಗಾಂಧೀಜಿ ಒಪ್ಪಲಿಲ್ಲ. ಇವತೇನಾಗಿದೆ? ಅಂಬೇಡ್ಕರ್  ಅವತ್ತು ಏನು ಅಪಾಯವನ್ನು ನೋಡಿದ್ರು,  ನಿರೀಕ್ಷೆ ಮಾಡಿದ್ರು  ಅದು ನಿಜವಾಗಿದೆ. ಇವತ್ತು ಮೀಸಲಾತಿ ಕ್ಷೇತ್ರದಲ್ಲಿ ಆರಿಸಿಬಂದವರು ಪ್ರಜ್ಞಾ ಪೂರ್ವಕವಾಗಿ ದಲಿತರ ಪರವಿದ್ದರೆ ಅಡ್ಡಿಯಿಲ್ಲ. ಅದರೆ ಆತ ಮೇಲ್ವರ್ಗದ ಮತದಾರರ ಪರವಾಗಿಯೇ ಇರುತ್ತಾನೆ. ಆದ್ದರಿಂದ ಇವತ್ತು ಸಾಮಾಜಿಕ ನ್ಯಾಯದ ಈ ಅಸ್ತ್ರಗಳೇನಿದಾವೆ ಮೀಸಲಾತಿ, ಭೂಸುಧಾರಣೆ, ರಾಜಕೀಯ ಪ್ರಾತಿನಿಧ್ಯ ಇವುಗಳ ಬಗ್ಗೆ ಯೋಚಿಸಬೇಕಿದೆ.

ಇವತ್ತು ರಾಷ್ಟ್ರೀಯತೆ , ದೇಶಭಕ್ತಿ ಜಾಸ್ತಿ ಚರ್ಚೆಗೆ ಬರುತ್ತಿದೆ. ಇದು ನನ್ನ ಕಲ್ಪನೆಯೇನಲ್ಲ. ಸಂಘಪರಿವಾರಕ್ಕೆ ಬಹಳ ಸ್ಪಷ್ಟವಾಗಿ ಗೊತ್ತಿದೆ.  ಆ ಹಿಂದೂತ್ವ ದ ಡೇಟ್ ಎಕ್ಸ್ಫೈರ್ ಆಗಿದೆ. ಅಂದು ವಾಜಪೇಯಿ ನೇತೃತ್ವದ ಸರ್ಕಾರ ಬಂದಾಗ ಬಹಳ ಮುಖ್ಯವಾದ ಅಜೆಂಡಾಗಳಿದ್ದವು. 1 ರಾಮಮಂದಿರ, 2.ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ,3 ಸಮಾನನಾಗರೀಕ ಸಂಹಿತೆ.  ಆಗ ಹೇಳಿದ್ರು ನಮಗೆ ಮೆಜಾರಿಟಿ ಇಲ್ಲ. ಇವುಗಳನ್ನು ಜಾರಿಗೆ ತರಲು ಮಿತ್ರಪಕ್ಷಗಳು ಒಪ್ಪುವುದಿಲ್ಲ ಅಂತ ಹೇಳಿದ್ರು.  ಅದರೆ ಈಗ ದೈತ್ಯ ಮೆಜಾರಿಟಿ ಇದೆ. ನೀವು ನಿಜವಾದ ಹಿಂದೂಗಳೆ ಆಗಿದ್ದರೆ ಈ ಮೂರನ್ನು ಜಾರಿಗೆ ತನ್ನಿ. ನೀವು ಯಾಕೆ ಕಾಶ್ಮೀರದಲ್ಲಿ ಯಾರ ಜೊತೆ ಸರ್ಕಾರ ಮಾಡಿದ್ದೀರ?  ಅಂತ  ಕೇಳ್ತಾರೆ ಮುಂದಿನ ಬಾರಿ . ರಾಮಮಂದಿರ  ಯಾಕೆ ಕಟ್ಟುತ್ತಿಲ್ಲ? ಸಮಾನ ನಾಗರೀಕ ಸಂಹಿತೆಯನ್ನ ತಾಕತ್ತಿದ್ದರೆ ತನ್ನಿ. ಈ ಮೂರನ್ನೂ ಬಚ್ಚಿಟ್ಟುಕೊಂಡು ಹಿಂದೂತ್ವದದ ಬಗ್ಗೆ ಮಾತನಾಡಬೇಡಿ. ಆದ್ದರಿಂದ ಅವರಿಗೆ ಗೊತ್ತಾಗಿದೆ ಹಿಂದೂತ್ವದ ಅಜೆಂಡಾ ಈಗ ಆಗೋದಿಲ್ಲ.  ಹೊಸ ಅಜೆಂಡಾ ಮೇಲೆ ತಂದಿದ್ದಾರೆ. ಅದು ‘ದೇಶಭಕ್ತಿ.   ದೇಶಭಕ್ತಿ ಅಂದ ಕೂಡಲೆ ರೋಮಾಂಚನ. ಭಾರತ್ ಮಾತಾ ಕೀ ಜೈ ಅದನ್ನು ಹೇಳದಿದ್ದರೆ ದೇಶದ್ರೋಹಿ , ಅವನ ಮೇಲೆ ಪೊಲೀಸ್ ಕೇಸು. ಶಿವಮೊಗ್ಗದ ಮಲ್ಲಿಕಾರ್ಜುನ ಮೇಟಿ ಅವರ ಮೇಲೆ ಹಾಕಿದಂತೆ. ಈ ಕಾರಣಕ್ಕಾಗಿಯೆ ನಾನು ಈ ಕಾರ್ಯಕ್ರಮಕ್ಕೆ ಬರುವಂತಾಯಿತು. ಮೇಟಿ ಅವರನ್ನು ನಮ್ಮಂತವರು ಬೆಂಬಲಿಸಬೇಕಿದೆ.
ನೋಡಿ ಇತ್ತೀಚೆಗೆ  ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರ ಬಗ್ಗೆ ಬಹಳ ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ‘ಫಾಲ್ಸ್ ಗಾಡ್’ ಅಂತ ಅರುಣ್ ಶೌರಿ  ಹೇಳಿದಾಗ ನರೇಂದ್ರ ಮೋದಿ ಮಾತಾಡಿದ್ರಾ? ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪಠ್ಯದಲ್ಲಿ ಅಂಬೇಡ್ಕರ್  ಬಗ್ಗೆ ನಾನ್ ಡಿಟೇಲ್ ಇತ್ತು. ಅದರಲ್ಲಿ ಅಂಬೇಡ್ಕರ್ ಅವರು ಭೌದ್ದ ಧರ್ಮ ಸ್ವೀಕರಿಸಿದಾಗ  ಕೈಗೊಂಡ ಕೆಲವು ಪ್ರಮಾಣ ವಚನಗಳು ಅದರಲ್ಲಿತ್ತು. ಅದೆಲ್ಲವೂ ಹಿಂದೂ ಧರ್ಮಕ್ಕೆ ವಿರೋಧವಾಗಿದ್ದವು.  ನರೇಂದ್ರ ಮೋದಿ ಅವರು ಪ್ರಧಾನಿ ಯಾದಾಗಲೆ ಅದನ್ನೆ ಕಿತ್ತು ಹಾಕಲಾಯಿತು. ಇವತ್ತು ಅಂಬೇಡ್ಕರ್  ಬಗ್ಗೆ ಮಾತನಾಡುತ್ತಾರೆ.  ಇಲ್ಲಿಯೂ ಶಿವಮೊಗ್ಗದಲ್ಲಿ ತಲೆಕೆಟ್ಟ ಪ್ರೋಪೆಸರ್ ವೊಬ್ಬ ಅಂಬೇಡ್ಕರ್ ಅವರನ್ನು ಈಡಿಯಟ್ ಅಂತ ಹೇಳಿ ಹೋದ ಅಂತಹವರೆಲ್ಲಾ ಪರಿವಾರದ ಐಡಿಯಲ್ ಗಳು ಇದೆಲ್ಲಾ ಇಟ್ಟುಕೊಂಡೆ ಅಂಬೇಡ್ಕರ್ ಅವರ ಗುಣಗಾನ ಮಾಡುತ್ತಿದ್ದಾರೆ. ಏಕೆಂದರೆ, ಉತ್ತರ ಪ್ರದೇಶದಲ್ಲಿ 3 ಕೋಟಿ ದಲಿತರಿದ್ದಾರೆ. ಅಲ್ಲಿ ಸದ್ಯದಲ್ಲೆ ಚುನಾವಣೆ ನಡೆಯಲಿದೆ. ಪಂಜಾಬ್ ನಲ್ಲಿ ಶೇ.31 ರಷ್ಟು ದಲಿತರಿದ್ದಾರೆ. ಅಲ್ಲಿಯೂ ಸದ್ಯಕ್ಕೆ ಚುನಾವಣೆ ನಡೆಯಲಿದೆ. ಇದನ್ನು ಅರ್ಥಮಾಡಿಕೊಳ್ಳಬೇಕು.

ನಮ್ಮ ದಲಿತ ಕವಿ ಸಿದ್ದಲಿಂಗಯ್ಯ ಅವರು ರಾಷ್ಟ್ರೀಯ ಆಚರಣಾ ಸಮಿತಿಯಲ್ಲಿರುವ ಕರ್ನಾಟಕದ ಏಕೈಕ ಸದಸ್ಯರು. ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಯಾರು ಮಾಡಿದರೂ  ತಪ್ಪೇನು? ಬಿಜೆಪಿಯವರು ಮಾಡ್ಲಿ  ಅಂತಾರೆ. ನಿಜವಾಗಿಯೂ ನರೇಂದ್ರ ಮೋದಿ ಅವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ, ಅದನ್ನು ತೋರಿಸಲು ಒಂದು ಸಣ್ಣ ಅವಕಾಶವಿದೆ.   ಕರ್ನಾಟಕದಲ್ಲಿ  ಎಸ್ಸಿ/ಎಸ್ಟಿ ಟಿ.ಎಸ್ಪಿ ಉಪಯೋಇನೆ ಕಾರ್ಯಕ್ರಮದ ಶೇ,24 ರಷ್ಟು ಹಣವನ್ನು ದಲಿತ ಸಮುದಾಯಕ್ಕೆ ಕಡ್ಡಾಯವಾಗಿ ಖರ್ಚುಮಾಡುವಂತಹುದ್ದು. ಇದನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರೋಸಿಡಿಂಗ್ಸ್  ಮಾಡುವಂತಹುದು ಕಾಯ್ದೆಯನ್ನು ತಂದಿದೆ. ಈ ರಾಜ್ಯ ಸರ್ಕಾರ  ಬೇರೆ ಏನು ಮಾಡಿದಿಯೋ ನಂಗೆ ಗೊತ್ತಿಲ್ಲ. ದಲಿತ ಸಮುದಾಯಕ್ಕೆ ಸಂಬಂಧಿಸದಂತೆ  ಮೀಸಲಾತಿಯ ನಂತರ ಕೊಟ್ಟ ಮಹಾನ್ ಕೊಡುಗೆ ಇದು. ಏಕೆ ಹೇಳುತ್ತಿದ್ದೇನೆಂದರೆ ಇನ್ನೂ ಮುಂದೆ  ಬರುವ ಯಾವುದೇ ಸರ್ಕಾರಗಳು ಕೂಡ ಈ ಆಕ್ಟ್ ನ್ನು  ರದ್ದು ಮಾಡುವ ಧೈರ್ಯ ಮಾಡುವುದಿಲ್ಲ. ಇವತ್ತು ಸ್ವಲ್ಪ ದುರುಪಯೋಗ ವಾಗಿರಬಹುದು. ಖರ್ಚಾಗದೆ ಉಳಿದಿರಬಹುದು. ಎಲ್ಲವೂ ಆಗಬಹುದು .ಆರಂಭದಲ್ಲಿ ಇದೆಲ್ಲಾ ಸಹಜ. ಪರಿಶಿಷ್ಟ ಜಾತಿ/ವರ್ಗಗಳ ಒಳಿತಿಗಾಗಿ 8000 ಕೋ.ರೂ ಗಳಿಂದ 20.ಸಾವಿರ ಕೋ.ರೂ ಆಗಿದೆ. ನೀವು ಅಂಬೇಡ್ಕರ್ ಅವರಿಗೆ ಸ್ಮಾರಕಗಳನ್ನು ಕಟ್ಟುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂರ್ತಿಗಳನ್ನು ಮಾಡುವುದು ಇರಲಿ, ನಿಜವಾದ ಕಾಳಜಿ ಇದ್ದರೆ ನೀವು ಕೂಡ ಈ ಆಕ್ಟ್ ನ್ನು  ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತನ್ನಿ. ಇದರ ಅನ್ವಯ ನನ್ನ ಲೆಕ್ಕದ ಪ್ರಕಾರ ಈ ಸಾರಿ ಎಸ್ಸಿ/ಎಸ್ಟಿ ಸೌಲಭ್ಯಕ್ಕೆ ಕೇಂದ್ರ ಸರ್ಕಾರ  88000 ಕೋ.ರೂಗಳನ್ನು ಕೊಡಬೇಕಾಗುತ್ತದೆ. ಈಗ ಕೊಡುತ್ತಿರುವುದು ಕೇವಲ 33 ಸಾವಿರ ಕೋ. ರೂ ಮಾತ್ರ. ಕರ್ನಾಟಕದಂತಹ ಸಣ್ಣ ರಾಜ್ಯ 20 ಸಾವಿರ ಕೋ.ರೂ ಕೊಟ್ಟಿದೆ. ನಿಜವಾದ ಕಾಳಜಿ ಇಲ್ಲಿದೆ. ನೀವು ಅಂಬೇಡ್ಕರ್ ಅವರ ಗುಣಗಾನ ಮಾಡುವುದರಿಂದ ,ಸ್ಮಾರಕ ಮಾಡುವುದರಿಂದ ,ಪುಸ್ತಕಗಳನ್ನು ಪಬ್ಲಿಷ್ ಮಾಡುವುದಕ್ಕಿಂತ ಈ ಕೆಲಸ ವನ್ನು ಮಾಡಬೇಕು. ನಮ್ಮ ಸಚಿವರುಗಳು  ಹೋದಲ್ಲಿ ಬಂದಲ್ಲಿ ಇಂತಹ ಸವಾಲುಗಳನ್ನು ಹಾಗಬೇಕು. ಇವು ಯಥಾಪ್ರಕಾರ ಕೇಳೊದಿಲ್ಲ.
ಕೊನೆಯದಾಗಿ ಈ ಬಿಜೆಪಿ ಎಂಬುದು ಮುಖವಾಡ. ಬಿಜೆಪಿ ಸಂಘಪರಿವಾರದ ಸುಫಾರಿ ಕಿಲ್ಲರ್. ! ಯಡಿಯೂರಪ್ಪರನ್ನೆ ತೆಗೆದುಕೊಳ್ಳಿ, ಅವರಿಗೆ ಆರ್.ಎಸ್ ಎಸ್ ಐಡಿಯಾಲಜಿ ಎಷ್ಟು  ಗೊತ್ತಿದೆಯೋ? ಅವರು ಅದನ್ನು ಎಷ್ಟು ಫಾಲೋ ಮಾಡುತ್ತಿದ್ದಾರೂ  ನಂಗೆ ಗೊತ್ತಿಲ್ಲ. ಮೂಲಭೂತವಾಗಿ ಯಡಿಯೂರಪ್ಪ ಅವರು ಬಹಳ ಕೆಟ್ಟ ಮನುಷ್ಯರೇನಲ್ಲ.  ನಾನು ಶಿವಮೊಗ್ಗದಲ್ಲಿ ಇದ್ದೇನೆ ಎಂದು ಹೆದರಿ ಮಾತು ಹೇಳುತ್ತಿಲ್ಲ. ನಿಮಗೆ ಗೊತ್ತಿದೆ  ಅವರ ರಾಜಕೀಯ.  ಹಿಂದೆ ಗೋವಿಂದಾಚಾರ್ಯರು ಹೇಳಿದ್ದರು. ನಮಗೆ ವಾಜಪೇಯಿ ಮುಖವಾಡ ಅಂತ, ಇವರೂ (ಯಡಿಯೂರಪ್ಪ)ಕೂಡ ಹಾಗೆ . ಬಿಜೆಪಿ ಸುಫಾರಿ ಕಿಲ್ಲರ್ ಇದ್ದಂತೆ ಅದು ಹೋಗಿ ಬೀದಿಯಲ್ಲಿ ಬಡಿದಾಡುತ್ತೇ., ಓಟು ಕೇಳುತ್ತೇ, ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ, ಅಚಾನಕ್ಕಾಗಿ ಇನ್ನೋಬ್ಬರನ್ನು ತಂದು ಕೂರಿಸುತ್ತೇ ಅದರ ಹಿಂದುಗಡೆ ಒಂದು ಪರಿವಾರ ಇದೆ. ಅದು ನಿಯಂತ್ರಣ ಮಾಡುತ್ತೆ .

ಮಂಗಳೂರಿನಲ್ಲಿ ಏನೋ ಸಿಕ್ಕಿಬಿದ್ರು ಸುಫಾರಿ ಕಿಲ್ಲರ್ ಗಳು. ಆಗ ಗೊತ್ತಾಯಿತು. ನಿಜವಾದ ಸುಫಾರಿ ಕಿಲ್ಲರ್ . ಬಾಳಿಗರನ್ನು ಕೊಂದವರು ಅಥವಾ ಅದಕ್ಕೆ ಸುಫಾರಿ ಕೊಟ್ಟವರು .  ನಾನು ಪ್ರಮಾಣಿಕವಾಗಿ ಹೇಳುತ್ತೇನೆ. ಒಂದು ಪೊಲಿಟಿಕಲ್ ಪಾರ್ಟಿಯಾಗಿ ಬಿಜೆಪಿ ಬಗ್ಗೆ ನನಗೇನು  ಆತಂಕವಿಲ್ಲ. ಆಯ್ತು, ಅವರಿಗೆ ಒಂದು ಸಿದ್ದಾಂತವಿದೆ. ಆ  ಸಿದ್ದಾಂತವನ್ನು ನಾವು ಒಪ್ಪುವುದಿಲ್ಲ. ವಿರೋಧಿಸುತ್ತೇವೆ.  ಕನಿಷ್ಠ ಎಲೆಕ್ಷನ್ ಗೆ ಕಂಟೆಸ್ಟ್ ಮಾಡ್ತಾರೆ. ಪ್ರಜ್ಞಾವಂತರು ತೀರ್ಮಾನ ತಗೋಳ್ತಾರೆ. ಇದು ಪ್ರಜಾಪ್ರಭುತ್ವ. ಸಂವಿಧಾನದ ಹಕ್ಕು, ಬಾಬಾಸಾಹೇಬ್ ಕೊಟ್ಟ ಹಕ್ಕು ಇದನ್ನು ನಾವು ಚಲಾಯಿಸುತ್ತೇವೆ. ಆದರೆ ಎಲೆಕ್ಷನ್ ಗೆ ಕಂಟೆಸ್ಟ್ ಮಾಡದೆ ಪ್ರಭುತ್ವವನ್ನು  ಚಲಾಯಿಸಲು ಹೊರಟವರನ್ನು ಹೇಗೆ ನಿಯಂತ್ರಣ ಮಾಡುವುದು? ಸುಫಾರಿ ಕಿಲ್ಲರ್ ಗಳು ಸಿಕ್ಕಿ ಹಾಕಿಕೊಳ್ಳುತ್ತಾರೆ. ಆದರೆ ಸುಫಾರಿ ಕೊಟ್ಟವರು  ಯಾರು? ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಶೇ,31 ಮತದಾರರ ಸಂಖ್ಯೆ ಹೆಚ್ಚಾಗಲಿದೆ. ಅರ್ಥಮಾಡಿಕೊಂಡರೆ ಬಹುಶಃ  ಈ ಸಂಖ್ಯೆ ಕೆಳೆಗಿಳಿಯಬಹುದು. ಸದನ್ನು ಇಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಯುವಕರು ,ಹೊಸ ಮತದಾರರು ಈ ಕೆಲಸವನ್ನು ಎಲ್ಲರೂ ಕೂಡಿ ಮಾಡೋಣ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಲಿ ಎಂದು ಆಶಿಸುತ್ತಾ ನನ್ನ ಮಾತು ಮುಗಿಸುತ್ತೇನೆ.

ನಮಸ್ಕಾರ.
-ದಿನೇಶ್ ಅಮೀನ್ ಮಟ್ಟು

Please follow and like us: