ಸರಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

koppal-mla


ಕೊಪ್ಪಳ ೦೪, ಕ್ಷೇತ್ರದ ಹಿಟ್ನಾಳ ಗ್ರಾಮದಲ್ಲಿ ಹೆಚ್‌ಕೆಆರ್‌ಡಿಬಿ ಯೋಜನೆಯಡಿಯಲ್ಲಿ ರೂ.೧೪.೦೦ ಲಕ್ಷದ ಗ್ರಂಥಾಲಯ ಕಟ್ಟಡ, ರೂ.೨೦.೦೦ ಲಕ್ಷದ ವೈದ್ಯರ ವಸತಿ ಕಟ್ಟಡ ಉಧ್ಘಾಟನೆ ಹಾಗೂ ರೂ.೩೫.೦೦ ಲಕ್ಷದ ಸಿಸಿ ರಸ್ತೆ ರೂ.೫೦.೦೦ ಲಕ್ಷದ ಪದವಿ ಕಾಲೇಜಿನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕೊಪ್ಪಳದ ಜನಪ್ರೀಯ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಈ ೨೦ ವರ್ಷಗಳ ಅವಧಿಯಲ್ಲಿ ಕೊಪ್ಪಳ ಕ್ಷೇತ್ರದ ಅಭಿವೃದ್ದಿಯು ಕುಂಟುತ್ತಾ ಸಾಗಿತ್ತು. ನನ್ನ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳು ಹಂತ ಹಂತವಾಗಿ ಅಭಿವೃದ್ದಿಹೊಂದುತ್ತಿದ್ದು, ಕಾಂಗ್ರೆಸ್ ಸರ್ಕಾರದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೊಪ್ಪಳ ಕ್ಷೇತ್ರದ ಸರ್ವಾಂಗಿಣ ಅಭಿವೃದ್ದಿಗೆ ಅಂದಾಜು ಮೊತ್ತ ರೂ.೮೦೦.೦೦ಗಳನ್ನು ಅನುದಾನ ನೀಡಿದ್ದಾರೆ. ಇದರಿಂದ ಕ್ಷೇತ್ರದ ಅಭಿವೃದ್ದಿಗೆ ಪೂರಕವಾಗಿದೆ. ಶೀಘ್ರದಲ್ಲಿಯೇ ಕ್ಷೇತ್ರದ ಬಹುದಿನಗಳ ಬೇಡಿಕೆಯಾದ ಬೆಟಗೇರಿ, ಅಳವಂಡಿ ಏತನೀರಾವರಿ ಕಾಮಗಾರಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಅಭಿವೃದ್ದಿ ಕಾಮಗಾರಿಗಳಿಗೆ ಪ್ರತಿಯೊಬ್ಬರೂ ಕೈಜೊಡಿಸಿ ಗುಣಮಟ್ಟಮದ ಕಾಮಗಾರಿಗಳ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ: ಜಿ.ಪಂ.ಅಧ್ಯಕ್ಷರಾದ ಎಸ್.ಬಿ.ನಾಗರಹಳ್ಳಿ, ತಾ.ಪಂ.ಅಧ್ಯಕ್ಷರಾದ ಬಾಲಚಂದ್ರ, ಗ್ರಾ.ಪಂ.ಅಧ್ಯಕ್ಷರಾದ ಎ.ಧರ್ಮರಾಜ, ತಾ.ಪಂ.ಸದಸ್ಯರಾದ ಮೂರ್ತೆಪ್ಪ, ಕೆ.ರಮೇಶ, ಶಿವಲಿಂಗಪ್ಪ ತಿಪ್ಪವ್ವನವರ, ಕೆ.ಅಸ್ಕರಲಿ, ವಿಜಯಕುಮಾರ ಪಾಟೀಲ್, ಯಂಕಣ್ಣ ಹೊಸಹಳ್ಳಿ, ನಾಗರಾಜ ಪಟವಾರಿ, ಪ್ರಕಾಶ ಬಿಲಂಕರ್,ನಾರಾಯಣ ಬಿಲಂಕರ್, ಪಕಿರೇಶ ಮುದ್ದಿ, ಅಶೋಕ ಈಳಗೇರ, ವೀರಭದ್ರಯ್ಯಸ್ವಾಮಿ ಅಗಳಕೇರಾ, ನಿರ್ಮಿತ ಕೇಂದ್ರದ ಅಭಿಯಂತರರಾದ ಜಿ.ಸುರೇಶ, ಭೂಸೇನಾ ನಿಗಮದ ನಿರ್ವಾಹಕ ಪಂಪಾಪತಿ ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us: