ಉಧೋ ಉಧೋ ಹರ್ಷೋದ್ಘಾರದ ನಡುವೆ ವೈಭವದಿ ಜರುಗಿದ ಹುಲಿಗೆಮ್ಮ ದೇವಿ ರಥೋತ್ಸವ

huligemma-jatre-huligedemma-devi-temple-huligemma (1)

huligemma-jatre-huligedemma-devi-temple-huligemma (2) huligemma-jatre-huligedemma-devi-temple-huligemma (3) huligemma-jatre-huligedemma-devi-temple-huligemma (4) huligemma-jatre-huligedemma-devi-temple-huligemma (5) huligemma-jatre-huligedemma-devi-temple-huligemma (6) ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕು ಹುಲಿಗಿಯಲ್ಲಿ ಸೋಮವಾರದಂದು ಭಕ್ತಾದಿಗಳ ಉಧೋ ಉಧೋ ಹರ್ಷೋದ್ಘಾರದ ನಡುವೆ ಹುಲಿಗೆಮ್ಮ ದೇವಿ ಮಹಾರಥೋತ್ಸವ ವೈಭವದಿಂದ ಜರುಗಿತು.
ಹುಲಿಗೆಮ್ಮ ದೇವಿ ಮಹಾರಥೋತ್ಸವ ವೀಕ್ಷಿಸಲು ಲಕ್ಷಾಂತರ ಭಕ್ತರು ರಾಜ್ಯದ ಹಲವು ಭಾಗಗಳಿಂದ ಹುಲಿಗಿಗೆ ಆಗಮಿಸಿದ್ದರು. ಸೋಮವಾರದಂದು ಸಂಜೆ ೫-೫೦ ಕ್ಕೆ ಸರಿಯಾಗಿ ಭಕ್ತಾದಿಗಳು ಉಧೋ ಉಧೋ ಹರ್ಷೋದ್ಘಾರದೊಂದಿಗೆ ರಥವನ್ನೆಳೆದು ದೇವಿಗೆ ಭಕ್ತಿ ನಮನ ಸಲ್ಲಿಸಿದರು. ರಥೋತ್ಸವಕ್ಕೆ ಸೇರಿದ್ದ ಲಕ್ಷಾಂತರ ಭಕ್ತರು ಬಾಳೆಹಣ್ಣು, ಉತ್ತತ್ತಿಯನ್ನು ತೇರಿಗೆ ಅರ್ಪಿಸಿ, ಭಕ್ತಿ ಭಾವ ಮೆರೆದರು.
ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿ.ಪಂ. ಸದಸ್ಯ ರಾಜಶೇಖರ ಹಿಟ್ನಾಳ್, ಹುಲಿಗೆಮ್ಮ ದೇವಿ ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us: