ಆಧಾರ್ ಸಂಖ್ಯೆಯನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡುವುದು ಹೇಗೆ?

ಆಧಾರ ಸಂಖ್ಯೆಯನ್ನು ಎಸ್.ಎಂ.ಎಸ್. ಮುಖಾಂತರ ಸಲ್ಲಿಸುವ ವಿಧಾನ

ಆಧಾರ್ ಸಂಖ್ಯೆಯನ್ನು  ರೇಷನ್ ಕಾರ್ಡ್ ಗೆ ಲಿಂಕ್ ಮಾಡುವುದು ಹೇಗೆ?   ಬಹುಪಾಲು  ಭಾರತೀಯರ ಜೀವನ ರೇಷನ್ ಕಾರ್ಡ್ , ಆಧಾರ್ ಕಾರ್ಡ್ , ವೋಟಿಂಗ್ ಕಾರ್ಡ್ ಪಡೆದುಕೊಳ್ಳುವುದರಲ್ಲಿಯೇ ಕಳೆದುಹೋಗುತ್ತೆ ಎನ್ನುವ ಮಾತಿದೆ. ಜನಸಾಮಾನ್ಯನ ದೊಡ್ಡ ಯಶಸ್ಸು ಎಂದರೆ ರೇಷನ್ ಕಾರ್ಡ್ ಪಡೆದುಕೊಳ್ಳುವುದು ಎನ್ನುವಂತಾಗಿದೆ.  ಇದೇ ತಿಂಗಳ 15ರೊಳಗೆ ರೇಷನ್ ಕಾರ್ಡ್ ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಎನ್ನುವ ಆದೇಶವಿತ್ತು. ಆದರೆ ಜನರ ಒತ್ತಾಯದ ಮೇರೆಗೆ ಅದನ್ನು ಮೇ 31ರ ತನಕ ಮುಂದೂಡಲಾಗಿದೆ. ಸರಳವಾಗಿ ಮೊಬೈಲ್ ಮೂಲಕ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.. ಬೇರೆಯವರಿಗೂ ಹೇಳಿಕೊಟ್ಟು ಸಹಾಯ ಮಾಡಿ. ಯಾಕೆಂದರೆ ಆನ್ ಲೈನ್ ನಲ್ಲಿ ಬಹಳ ದೊಡ್ಡ ಕ್ಯೂ ಇದೆ , ಮೊಬೈಲ್ ನಿಂದ ಕಳಿಸುವ ವಿಧಾನ ಬಹಳ ಜನಕ್ಕೆ ಗೊತ್ತಿಲ್ಲ..  ಅವಶ್ಯಕವಿರುವವರಿಗೆ ತಿಳಿಸಿ

ಮೊದಲು ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರ ಅಥವಾ ಸದಸ್ಯರ ಮೊಬೈಲ್ ಸಂಖ್ಯೆಯಿಂದ RCMOB ಎಂದು ಟೈಪ್ ಮಾಡಿ ಸ್ವಲ್ಪು ಸ್ಥಳ ಬಿಟ್ಟು ರೇಶನ್ ಕಾರ್ಡ ನಂಬರನ್ನು ration_card_how_to_link_Adhar_number_to_ration_card_how_to_apply_for_ration_Card

ಟೈಪ್ ಮಾಡಿ ಆಹಾರ ಇಲಾಖೆಯ ಮೊಬೈಲ್ ಸಂಖ್ಯೆ 9731979899 ಕ್ಕೆ ಎಸ್.ಎಂ.ಎಸ್. ಕಳುಹಿಸಬೇಕು. ಆಗ ಮೊಬೈಲ್ ಸಂಖ್ಯೆಯನ್ನು ನಿಮ್ಮ ಪಡಿತರ ಚೀಟಿಗೆ ನೊಂದಾಯಿಸಲಾಗಿದೆ. ಎಂದು ಸ್ಕ್ರೀನ್ ಮೇಲೆ ಉತ್ತರ ಗೋಚರಿಸುತ್ತದೆ. ನಂತರ ಪಡಿತರ ಚೀಟಿ ಕುಟುಂಬದ ಎಲ್ಲಾ ಸದಸ್ಯರ ೧೨ ಅಂಕಿಯ ಆಧಾರ ಸಂಖ್ಯೆಗಳನ್ನು ಒಂದೊಂದಾಗಿ ಟೈಪ್ ಮಾಡಿ ಎಸ್.ಎಂ.ಎಸ್. ಕಳಿಸಬೇಕು. ಆಧಾರ ಸಂಖ್ಯೆ ಕಳುಹಿಸಲು RCUID ಎಂದು ಟೈಪ್ ಮಾಡಿ ಸ್ವಲ್ಪು ಸ್ಥಳ (Space) ಬಿಟ್ಟು ಆಧಾರ ಸಂಖ್ಯೆಯನ್ನು ಟೈಪ್ ಮಾಡಿ ಆಹಾರ ಇಲಾಖೆಯ ಮೊಬೈಲ್ ಸಂಖ್ಯೆ 9731979899 ಕ್ಕೆ ಎಸ್.ಎಂ.ಎಸ್. ಕಳುಹಿಸತಕ್ಕದ್ದು. ಎಸ್.ಎಂ.ಎಸ್. ಮುಖಾಂತರವಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯತ ಕಛೇರಿ ಹೋಬಳಿ ಮಟ್ಟದಲ್ಲಿ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ತಾಲ್ಲೂಕು ಕೇಂದ್ರದ ನಗರ ಪ್ರದೇಶದಲ್ಲಿ ಖಾಸಗಿ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ತಂತ್ರಾಂಶದಲ್ಲಿ ಆಧಾರ ಸಂಖ್ಯೆಗಳನ್ನು ನೀಡಬಹುದಾಗಿರುತ್ತದೆ.ಆಧಾರ ಸಂಖ್ಯೆ ಪಡೆಯಲು ಈಗಾಗಲೆ ಅರ್ಜಿ ಸಲ್ಲಿಸಿದವರು,ಆಧಾರ ಸಂಖ್ಯೆ ದೊರೆತಿಲ್ಲವಾದಲ್ಲಿ, ೨೧ ಅಂಕಿಯ EID ಆಧಾರ್ ಎನ್ರೊಲ್‌ಮೆಂಟ್ ನಂಬರನ್ನು ಸಹ ನೀಡಬಹುದು. ನಿಮ್ಮ EID ಸಂಖ್ಯೆಗೆ ಯಶಸ್ವಿಯಾಗಿ ಆಧಾರ ಸಂಖ್ಯೆ ಸಿಕ್ಕಿದಲ್ಲಿ ಇಲಾಖೆವತಿಯಿಂದಲೇ ಅದನ್ನು ಪಡಿತರ ಚೀಟಿಗೆ ಜೋಡಿಸಲಾಗುವದು. ಆದ್ದರಿಂದ ಆಧಾರ ಸಂಖ್ಯೆಯನ್ನು ಸಲ್ಲಿಸದೇ ಇರುವ ಪಡಿತರ ಚೀಟಿ ಸದಸ್ಯರು ತಮ್ಮ ಆಧಾರ ಸಂಖ್ಯೆಯನ್ನು ತಪ್ಪದೇ ೨೦೧೬ ನೇ ಮೇ-31ನೇ ತಾರಿಖಿನ ಒಳಗಾಗಿ ಸಲ್ಲಿಸತಕ್ಕದ್ದು.

Please follow and like us: