ವೋಟರ್ ಐಡಿ ಕಾರ್ಡ ಬೇಕಾ? ಹೊಸ ವೋಟರ್ ಐಡಿ ಪಡೆಯುವುದು ಹೇಗೆ?

ವೋಟರ್ ಐಡಿ ಕಾರ್ಡ ದಿನನಿತ್ಯದ ಜೀವನದಲ್ಲಿ ಒಂದಿಲ್ಲೊಂದು ಕೆಲಸಕ್ಕೆ ಬೇಕೆ ಬೇಕು. ಅಂತಹ ಬಹು ಉಪಯುಕ್ತ ಕಾರ್ಡ ಏನಾದರು ಕಳೆದುಕೊಂಡು ಬಿಟ್ಟರೆ ಹೇಳತೀರದು ಪೇಚಾಟ.  ಈ ಕಾರ್ಡ ಪ್ರತಿಯೊಂದು ಕೆಲಸಕ್ಕೂ ಬೇಕೇ ಬೇಕು . ಕಳೆದುಕೊಂಢವರಿಗೆ ಮತ್ತೆ ಪಡೆಯುವುದು ಬಹಳ ಕಿರಿಕಿರಿಯ ಕೆಲಸ. ಎಲ್ಲಿ ಕಚೇರಿಗಳಿಗೆ ತಿರುಗಾಡಬೇಕು. ಎಷ್ಟು ಸಲ ಹೋದರೂ ನಾಳೆ ಬಾ ಎನ್ನುವ ಉತ್ತರವೇ ಸಿಗುತ್ತೆ. ಆದರೆ  ವೋಟಿಂಗ್ ಕಾರ್ಡ್ ಕಳೆದುಕೊಂಡವರಿಗೆ  ಪಡೆದುಕೊಳ್ಳಲು ಒಂದು ಸುವರ್ಣಾವಕಾಶ ಇದೆ ಹೇಗಂತೀರಾ ಸುಲಭ ತಹಶೀಲ್ ಕಚೇರಿಯಲ್ಲಿ ಒಂದು ಫಾರ್ಮ ಸಿಗುತ್ತೆ.. ಅದರಲ್ಲಿ ಕೇಳಿರುವ ವಿವರಗಳನ್ನು ಭರ್ತಿ ಮಾಡಬೇಕು. ಕ್ರಮ ಸಂಖ್ಯೆ ಮತ್ತು ಭಾಗ ಸಂಖ್ಯೆ ತಹಶೀಲ್ ಕಚೇರಿಯ ಚುನಾವಣಾ ವಿಭಾಗದಲ್ಲಿ ದೊರೆಯುತ್ತೆ. ನಿಮ್ಮಲ್ಲಿ ಹಳೆಯ ವೋಟಿಂಗ್ ಕಾರ್ಡ್ ಜೆರಾಕ್ಸ್ ಇದ್ರೆ ಕೆಲಸ ಸುಲಭ . ನಂತರ ಎಸ್ ಬಿ ಹೆಚ್ ಬ್ಯಾಂಕಿನಲ್ಲಿ 25ರೂ  ತುಂಬಿದ ನಂತರ ನಿಮಗೊಂದು ದಿನಾಂಕ ಹೇಳ್ತಾರೆ ಆ ದಿನ ಹೋದರೆ ಖಂಡಿತ ಸಿಗುತ್ತೆ.

ಆದ್ರೆ ನೆನಪಿರಲಿ ಈ ಸಲ ಈ ಅವಕಾಶ 14-5-2016ರ ವರೆಗೆ ಮಾತ್ರ  ಇದೆ.

ಬೇಗನೇ ಹೋಗಿ …..

 

facebook_1462946594618

facebook_1462946632272

Please follow and like us: