ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಪ್ರಭು ಹೆಬ್ಬಾಳ

 

ಕೊಪ್ಪಳ,ಏ. ೧೨  ಎಲ್ಲರ ಸಹಕಾರ ಮತ್ತು ಮಾರ್ಗದರ್ಶನದ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸುವುದಾಗಿ ಕೊಪ್ಪಳ ತಾಲೂಕು ರಡ್ಡಿ ಸಮಾಜದ ಪ್ರಭಾರಿ ನೂತನ ಅಧ್ಯಕ್ಷ hemareddy-mallamma

ಅವರು ಹೇಳಿದ್ದಾರೆ.
ಎಸ್. ಬಿ. ನಾಗರಳ್ಳಿ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಮಂಗಳವಾರ ಸಿ.ವಿ. ಚಂದ್ರಶೇಖರ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಭಾರಿಯಾಗಿ ಆಯ್ಕೆಯಾದ ಬಳಿಕ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನನಗೆ ಅಧ್ಯಕ್ಷನಾಗುವ ಬಯಕೇ ಇರಲಿಲ್ಲ. ಕೇವಲ ಸಮಾಜದಲ್ಲಿ ನಾನು ಒಬ್ಬ ಸೇವಕನಾಗಿ ಮಾತ್ರ ಇರಬೇಕು ಎಂದುಕೊಂಡಿದ್ದೆ. ಆದರೆ, ಹಿರಿಯರೆಲ್ಲರೂ ಜವಬ್ದಾರಿಯನ್ನು ನಿಭಾಯಿಸಲೇಬೇಕು ಎಂದಾಗ ಒಪ್ಪಿಕೊಂಡಿzನೆ ಎಂದರು.
ನಾನು ಅಧ್ಯಕ್ಷನಾಗಿದ್ದರು ನೆಪಮಾತ್ರ, ಉಳಿದಂತೆ ಎಲ್ಲರೂ ಇಲ್ಲಿ ಅಧ್ಯಕ್ಷರಾಗಿರುತ್ತಾರೆ. ಇದರಲ್ಲಿ
ಯಾವುದೇ ಭೇದಭಾವ ಇಲ್ಲದೆ ಸಮಾಜದ ಪ್ರಗತಿಗಾಗಿ ಶ್ರಮಿಸಲಾಗುವುದು. ಈಗಗಾಲೇ ಇಷ್ಟು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿರುವ ಎಸ್. ಬಿ. ನಾಗರಳ್ಳಿ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾನು ಸಹ ನಡೆಯುತ್ತೇನೆ. ವಿಶೇಷವಾಗಿ ನಗರದಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಇದಲ್ಲದೆ ದೇವಸ್ಥಾನದಲ್ಲಿ ನಿತ್ಯ ನಿರಂತರ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಕುರಿತು ಹಿರಿಯರ ಹಾಗು ಯುವಕರ ಸಹಕಾರದೊಂದಿಗೆ ಶ್ರಮಿಸಲಾಗುವುದು. ಈ ದಿಸೆಯಲ್ಲಿ ಎಲ್ಲರ ಸಹಕಾರ ಪಡೆದು, ಮುಂದುವರೆಯುತ್ತೇನೆ ಎಂದರು.
ರಡ್ಡಿ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಸ್. ಬಿ. ನಾಗರಳ್ಳಿ ಅವರು ಮಾತನಾಡಿ, ನಾನು ಇಷ್ಟು ದಿನ ಮಾಡಿಕೊಂಡು ಬಂದಿದ್ದು, ಈಗ ನಾನಾ ಕಾರಣಗಳಿಂದ ರಾಜೀನಾಮೆಯನ್ನು ನೀಡಿzನೆ. ಆದರೆ, ಸಮಾಜ ಕಟ್ಟುವ ಕೆಲಸದಲ್ಲಿ ನಾನು ನಿರಂತರವಾಗಿ ಎಲ್ಲರ ಜೊತೆಗೆ ಇz
ಇರುತ್ತೇನೆ ಎಂದರು.
ನಾನು ಅಧ್ಯಕ್ಷನಾಗಿದ್ದರೂ ಎಲ್ಲರೂ ಕೈಜೋಡಿಸಿದ್ದರಿಂದ ಇದೆಲ್ಲವನ್ನು ಮಾಡಲು ಸಾಧ್ಯವಾಯಿತು. ಪದಾಧಿಕಾರಿ ಎನ್ನುವುದು ಕೇವಲ ಹುದ್ದೆಗಾಗಿ ಮಾತ್ರವೇ ಹೊರತು. ಎಲ್ಲರೂ ಪದಾಧಿಕಾರಿಗಳಂತೆ ಕೆಲಸ ಮಾಡಿದ್ದಾರೆ ಎಂದರು.
ಉತ್ಸವ, ಮೆರವಣಿಗೆ ಮಾಡಿ ವೆಚ್ಚ ಮಾಡುವುದರಿಂದ ಪ್ರಯೋಜವಿಲ್ಲವೆಂದು ಕೇವಲ ಆಸ್ತಿ ಮಾಡುವುದಕ್ಕಾಗಿಯೇ ಹೆಚ್ಚು ಶ್ರಮವಹಿಸಲಾಗಿದೆ. ಇದಕ್ಕಾಗಿ ಎಲ್ಲರೂ ನಾನಾ ರೀತಿಯಿಂದ ಸಹಕಾರ ನೀಡಿದ್ದು, ಅವರೆಲ್ಲರಿಗೂ ನಾನು ಅಭಾರಿಯಾಗಿದ್ದಾನೆ ಎಂದರು.
ಮುಖಂಡರಾದ ಸುರೇಶ ಭೂಮರಡ್ಡಿ, ಸಿ.ವಿ. ಚಂದ್ರಶೇಖರ, ವೆಂಕರಡ್ಡಿ ವಕೀಲರು, ಕಾಶಿನಾಥರಡ್ಡಿ ಅವಾಜಿ, ಹೇಮರಡ್ಡಿ ಬಿಸರಳ್ಳಿ, ಶರಣಪ್ಪ ವಕೀಲರು, ಬಸವರಾಜ ಗೌರಾ, ಡಾ. ಶ್ರೀನಿವಾಸ ಸೇರಿದಂತೆ ಇತರರು ಇದ್ದರು.
೧೨ಕೆಪಿಎಲ್ ೨೨ ಕೊಪ್ಪಳ ರಡ್ಡಿ ಸಮಾಜದ ನೂತನ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಭು ಹೆಬ್ಬಾಳ ಅವರನ್ನು ಸನ್ಮಾನಿಸುತ್ತಿರುವುದು.

Please follow and like us: