ಗುರುವಿನ ಗೋಳು ಸರಕಾರಕ್ಕೆ ಕೇಳುತ್ತಿಲ್ಲವೆ?.

sfi-koppal

ಮಗುವುನಲ್ಲಿರುವ ಅಜ್ಞಾನವನ್ನು ಹೊಡೆದೋಡಿಸಿ, ಜ್ಞಾನವೆಂಬ ಮರ ಬೆಳೆಸುವ “ಗುರು”ವಿನ ಬದಿಕೀಗ ಬೀದಿಗೆ ಬಿಳುತ್ತಿದೆ. ಅದರಲ್ಲೂ ಮಕ್ಕಳು ವಯಸ್ಕರಾಗುವ ಸಮಯದಲ್ಲಿ ಸರಿ ದಾರಿ ತೋರುತ್ತಿರುವ ಪಿ.ಯು ಉಪನ್ಯಾಸಕರು ವೇತನ ತಾರತಮ್ಯದಲ್ಲಿ ಬದುಕು ನೂಕುವಂತಾಗಿದೆ. ವೇತನ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಹಲವಾರು ವರ್ಷದಿಂದ ಪಿ.ಯು. ಉಪನ್ಯಾಸಕರು ಮಂತ್ರಿ, ಶಾಸಕರು, ಅಧಿಕಾರಿಗಳ ಬಳಿ ಹಲವಾರು ಬಾರಿ ಅವಲೊತ್ತುಕೊಂಡಿದ್ದಾರೆ. ನ್ಯಾಯಯುತವಾದ ಬೇಡಿಕೆಯ ಈಡೇರಿಕೆಗಾಗಿ ಶಾಂತಿ, ಸಮಾಧಾನದಿಂದಲೆ ವಿನಂತಿಸಿಕೊಂಡು ಬಂದಿದ್ದಾರೆ. ಪರಸ್ಥಿತಿ ಕೈ ಮೀರಿ ಹೋದ ಕಾರಣ, ಬೇರೆ ದಾರಿ ಇಲ್ಲದ.ಮೌಲ್ಯ ಮಾಪನ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದಾರೆ.

ಬೇಡಿಕೆಯ ಹಿನ್ನಲೆ: 1994 ರಲ್ಲಿ ವೇತನ ತಾರ್ಯತಮ್ಯದ ವಿರುದ್ಧ ಧ್ವನಿ ಎತ್ತಿದ ಉಪನ್ಯಾಸಕರು, 1996 ರಲ್ಲಿ ತೀವೃ ಸ್ವರೂಪವನ್ನು ಪಡೆದ ಕೊಂಡು 1996ರಲ್ಲಿ ಹೋರಾಟ ಕಾವು ಜೋರಾಗಿಯೇ ನಡೆಯಿತು. 1998, 2000 ರಲ್ಲಿ ಪಿ .ಯು. ಉಪನ್ಯಾಸಕರು ಮುಷ್ಕರ ನಡೆಸಿದಾಗ ಅವರ ಮೇಲೆ “ಎಸ್ಮಾ” ಎಂಬ ಸರ್ವಾಧಿಕಾರಿ ಕಾನೂನನ್ನು ಹೇರಲಾಯಿತು. ಅನೇಕ ಉಪನ್ಯಾಸಕರು ಜೈಲುವಾಸ ಅನುಭವಿಸಿದರು. SFI ಸಂಘಟನೆಯ ಬೆಂಬಲದೊಂದಿಗೆ ಚಳುವಳಿ ಬಲಗೊಂಡು ಉಪನ್ಯಾಸಕರ ಮೇಲೆ ಹಾಕಿದ್ದ ಕಾಯ್ದೆ ವಾಪಸ್ಸಾಯಿತು.
ನಂತರ ಅಲ್ಲಿಂದ ಇಲ್ಲಿಯವರೆಗೆ ಪಿ.ಯು ಉಪನ್ಯಾಸಕರು ಶಾಂತಯುತವಾಗಿ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡುತ್ತಾ ಬಂದಿದ್ದಾರೆ. ಮಾನವೀಯತೆ ಇಲ್ಲದ, ಅಕ್ಷರ ನೀಡುವ ಗುರುವನ್ನು ಗೌರವಿಸಿದ ದಪ್ಪನೆಯ ಚರ್ಮದ ಸರಕಾರಕ್ಕೆ ಉಪನ್ಯಾಸಕರ ಗೋಳು ಅರ್ಥವಾಗುತ್ತಿಲ್ಲ. ಅವರ ಬದುಕಿನೊಡನೆ ಸರಕಾರ ನಡೆದು ಕೊಳ್ಳುತ್ತಿರುವ ರೀತಿ ನಿಜಕ್ಕೂ ಖಂಡನೀಯ.

ಕುಮಾರ್ ನಾಯ್ಕ ವರದಿಯಲ್ಲೇನಿದೆ?:
‘ಪದವಿಪೂರ್ವ ಕಾಲೇಜು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ 2011ರಲ್ಲಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿದ್ದ ಜಿ. ಕುಮಾರ್‌ ನಾಯಕ್‌ ನೇತೃತ್ವದ ಸಮಿತಿ ವರದಿ ನೀಡಿದೆ. ಈ ವರದಿ
ಜಾರಿ ಮಾಡುವಂತೆ ಉಪನ್ಯಾಸಕರು ಕೇಳುತ್ತಿದ್ದರೂ, ಸರಕಾರ ಸ್ಪಂದಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ರಾಜ್ಯ ಪಿ.ಯು ಉಪನ್ಯಾಸಕರ ಸಂಘ ಹಾಗೂ ರಾಜ್ಯ ಪಿ.ಯು ಪ್ರಾಂಶಿಪಾಲರ ಸಂಘಗಳು ಮೂಲವೇತನವನ್ನು 28,100ರೂ ಗೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿವೆ. ಸರಕಾರದ ಜೊತೆ ಹಿಂದೆ ನಡೆಸಿದ ಮಾತು ಕತೆ ಪ್ರಕಾರ ಕುಮಾರ ನಾಯ್ಕ್ ವರದಿಯಂತೆ 26,000 ವೇತನ ನೀಡುವುದಾಗಿ ಒಪ್ಪಿಕೊಂಗುರುರಾಜ್-ದೇಸಾಯಿಡಿದ್ದವು. ಅದಕ್ಕೆ ಉಪನ್ಯಾಸಕರ ಸಹಮತವೂ ಸಿಕ್ಕಿತಗತು. ಆದರೆ ಸರಕಾರ ಜಾರಿ ಮಾಡದೆ “ಮೂಗಿಗೆ ತುಪ್ಪ ಸವರಿ” ಸಂಬಂಧವಿಲ್ಲದವರಂತೆ ಈಗ ವರ್ತಿಸುತ್ತಿದೆ. ಸದ್ಯ ಪಿ.ಯು ಉಪನ್ಯಾಸಕರು 22,800ರೂ ಮೂಲ ವೇತನ ಪಡೆಯುತ್ತಿದ್ದಾರೆ. ನಿಜಕ್ಕೂ ಇದು ಅನ್ಯಾಯವಲ್ಲದೆ ಮತ್ತೇನು?

‘ಬಹಿಷ್ಕಾರಕ್ಕೆ’ ಸರಕಾರವೇ ಕಾರಣ:
ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸದೆ ಬೇರೆ ಮಾರ್ಗಗಳೆ ಇಲ್ಲ. ಸರಕಾರ ಅದನ್ನು ಸರಿ ಮಾಡುವ ಮುತುವರ್ಜಿ ತೋರಬೇಕಿದೆ.ಮಕ್ಕಳ ಭವಿಷ್ಯದ ಜೊತೆ ಉಪನ್ಯಾಸಕರಾರು ಚಲ್ಲಾಟವಾಡುತ್ತಿಲ್ಲ. ಮೌಲ್ಯಮಾಪನ ಬಹಿಷ್ಕರಿಸಿರುವ ಉಪನ್ಯಾಸಕರಲ್ಲಿ ಬಹುತೇಕರ ಮಕ್ಕಳು ದ್ವಿತೀಯ ಪಿ.ಯು.ಪರೀಕ್ಷೆ ಬರೆಯುತ್ತಿದ್ದಾರೆ. ವೇತನ ತಾರತಮ್ಯ ನಿವಾರಿಸುವಂತೆ ಒತ್ತಾಯಿಸಿ ಕಳೆದ ವರ್ಷವೂ ಪಿ.ಯು. ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ಒಂದು ದಿನ ಬಹಿಷ್ಕರಿಸಲಾಗಿತ್ತು.

ಈ ಬಾರಿಯ ಶೈಕ್ಷಣಿಕ ಅವಧಿಯಲ್ಲಿ 2016ರ ಜನವರಿ 13ರಂದು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಕಪ್ಪುಪಟ್ಟಿ ಧರಿಸಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ಕರ್ತವ್ಯ ನಿಭಾಯಿಸುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ ಆದರೂ, ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗಲಿಲ್ಲ. ಈಗ ಅನಿವಾರ್ಯವಾಗಿ ಮೌಲ್ಯಮಾಪನ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿರುವುದಕ್ಕೆ ಸರಕಾರವೆ ಹೊಣೆಯಾಗಿದೆ.

ಇವರಷ್ಟೇ ಓದಿದ ಪದವಿ ಕಾಲೇಜಿನ ಉಪನ್ಯಾಸಕರು ಇವರಿಗಿಂತ 50 ಸಾವಿರ ರೂಪಾಯಿಯಷ್ಟು ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಅಕ್ಕಪಕ್ಕದ ರಾಜ್ಯಗಳ ಉಪನ್ಯಾಸಕರು ಇವರಿಗಿಂತ ಅತಿಹಚ್ಚು ಸಂಬಳ ಪಡೆಯುತ್ತಿದ್ದಾರೆ.
20 ವರ್ಷದಿಂದ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಲಾಗದ ಸರಕಾರಗಳು ಎಸ್ಮಾ ಎಂಬ ಅರಬಿ ಹಾವನ್ನು ಉಪನ್ಯಾಸಕರ ಮೇಲೆ ಬಿಡಲು ಹೊರಟಿದೆ.

ಅನುಭವಿ ಉಪನ್ಯಾಸಕರ ಅಭಿಪ್ರಾಯದ ಪ್ರಕಾರ “18 ದಿನಗಳಲ್ಲಿ ಮೌಲ್ಯ ಮಾಪನ ಕಾರ್ಯ ಮುಗಿಯುತ್ತದೆ. ಮಕ್ಕಳ ಭವಿಷ್ಯದ ಜೊತೆ ಚಲ್ಲಾಟ ವಾಡುವ ಕೀಳು ಮನಸ್ಸು ನಮ್ಮದಲ್ಲ. ಸರಕಾರದ ನಿರ್ಲಕ್ಷ್ಯ ಇಂದು ಬಹಿಷ್ಕಾರದ ಮಾರ್ಪಾಡಾಗಿ ನಿಂತಿದೆ. ಸರಕಾರ ಬೇಡಿಕೆ ಈಡೇರಿಸಿದರೆ ನಾಳೆಯೇ ಮೌಲ್ಯಮಾಪನಕ್ಕೆ ಹೋಗಲು ಸಿದ್ದ ಎನ್ನುತ್ತಾರೆ”
ಸರಕಾರ ನಿರ್ಲಕ್ಷ್ಯದ ನಿದ್ದೆಯಿಂದ ಏಳ ಬೇಕಿದೆ. ನಿಗದಿಯಂತೆ ಏಪ್ರಿಲ್ 3ರಿಂದ ಮೌಲ್ಯಮಾಪನ ಆರಂಭವಾಗಬೇಕಿತ್ತು. ಉಪನ್ಯಾಸಕರ ಬೇಡಿಕೆ ಈಡೇರದ ಕಾರಣ ಫಲಿತಾಂಶ ವಿಳಂಬವಾಗಿ ಪ್ರಕಟವಾಗುವ ಸಾಧ್ಯತೆ ಇದೆ. ಇದಕ್ಕೆ ಸರಕಾರವೇ ಕಾರಣ. ಉಪನ್ಯಾಸಕರನ್ನು ಹಣಿಯುವುದಕ್ಕಾಗಿ ಸರಕಾರ ಬದಲಿ ತಂತ್ರ ಅನುಸರಿಸದೆ ಅವರ ವೇತನ ತಾರತಮ್ಯವನ್ನು ನಿವಾರಿಸಲಿ. ಕನಿಷ್ಠ ಕುಮಾರ ನಾಯ್ಕ ವರದಿಯಂತೆ ವೇತನವನ್ನಾದರೂ ನೀಡಿ ವಿದ್ಯಾರ್ಥಿ-ಪೋಷಕರ ಆತಂಕವನ್ನು ದೂರ ಮಾಡಲು ಮುಂದಾಗಬೇಕಿದೆ.

ಗುರುರಾಜ್ ದೇಸಾಯಿ,

https://www.facebook.com/gurujana.desai

 

Please follow and like us: