ಕ್ವಾರಂಟೈನ್ ಕೇಂದ್ರದಿಂದ ಬಂದ ಪತ್ರ..ತಪ್ಪದೆ ಓದಿ

ಕ್ಷಮೆ ಇರಲಿ ಬಂಧುಗಳೇ,ಆಗಾಗ ನೀವು ಮುಟ್ಟಿಸಿಕೊಂಡರೆ ಗಂಟೇನು ಹೋಗುತ್ತದೆ’ ಎಂದು ಹೇಳುತ್ತಿದ್ದೀರಿ. ಆದರೆ ನಾನು ಕೇಳಿಸಿಕೊಳ್ಳಲಿಲ್ಲ. ಈಗ ಒಂದು ರೋಗದ ಕಾರಣದಿಂದಾಗಿ ನಿಮ್ಮ ನೋವಿನ ಸಂಕಟದ ಪರಿಚಯ ನನಗೆ ಆಗುತ್ತಿದೆ. ಕೋಟಿಗಟ್ಟಲೆ ಸಂಪತ್ತು ಇರುವ ಸಾಹುಕಾರ ನಾನು. ಕಾರು, ಬಂಗಲೆ, ಹೆಂಡತಿ-ಮಕ್ಕಳು ಬಂಧು-ಬಳಗ ಎಲ್ಲಾ ಇದ್ದಾರೆ. ಆದರೆ ನನ್ನನ್ನು ಯಾರೂ ಮುಟ್ಟುತ್ತಿಲ್ಲ ಮಾತನಾಡಿಸುತ್ತಿಲ್ಲ ನನ್ನನ್ನು ಅಸ್ಪೃಶ್ಯ ನನ್ನಾಗಿ ನೋಡುತ್ತಿದ್ದಾರೆ. ಬರೀ 15 ದಿನಗಳ ಕ್ವಾರಂಟೈನ್ ಕಾರಣದಿಂದಾಗಿ ಸಾವಿರಾರು ವರ್ಷಗಳಿಂದ ನಿಮ್ಮನ್ನು ಮುಟ್ಟಿಸಿಕೊಳ್ಳದವರನ್ನಾಗಿಸಿದ ಅಸ್ಪೃಶ್ಯತೆಯ ಸಂಕಟ ಏನೆಂದು ನನಗೀಗ ಅರ್ಥವಾಯಿತು… ಅದು ಹೇಗೆ ಸಹಿಸಿಕೊಂಡಿರಿ ಇಷ್ಟೊಂದು ಅಪಮಾನವನ್ನು. ಯಾರು ಮಾಡಿದರು ಈ ಅಸಹ್ಯವನ್ನು. ಭೂಮಿಯ ಮೇಲೆ ಹುಟ್ಟಿದ ನಮ್ಮನ್ನು ಹೆಚ್ಚುಕಮ್ಮಿ ಎಂದು ಮಾಡಿ, ಗಾಳಿ ನೀರು ನೆಲ ಸಂಪತ್ತನ್ನು ಸಮನಾಗಿ ಹಂಚಿಕೊಳ್ಳಬೇಕಾದ ನಮ್ಮ ಹುಟ್ಟಿಗೆ ಕಳಂಕ ಹಚ್ಚಿದವರು ಯಾರೆಂದು ನನಗೆ ತಿಳಿಯದು..ಮನುಷ್ಯನ ಜೊತೆ ಮನುಷ್ಯನು ಇಷ್ಟೊಂದು ನಿಕೃಷ್ಟವಾಗಿ ನಡೆದುಕೊಂಡಿದ್ದಾದರೂ…

Read More