ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾಗೃತಿ ಕಾರ್ಯಕ್ರಮಕ್ಕೆ ಸಂಸದರ ಚಾಲನೆ

ಕೊಪ್ಪಳ,:  ಕೊಪ್ಪಳ ಕೃಷಿ ಇಲಾಖೆ ವತಿಯಿಂದ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕರ್ನಾಟಕ ರೈತ ಸುರಾಕ್ಷ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಫ್ಯೂಚರ್ ನೆನೆರಾಲಿ ಇಂಡಿಯಾ ಇನ್ಸೂರೆನ್ಸ್ ಕಂಪನಿ ಪ್ರಸ್ತುತ ಪಡಿಸುತ್ತಿರುವ ಬೆಳೆಯ ಸುರಕ್ಷೆ, ನಿಮ್ಮ ಕ್ಷೇಮ ಕುರಿತು ಹಮ್ಮಿಕೊಂಡಿದ್ದ ಟಾಟಾ ಮ್ಯಾಜಿಕ್ ವಾಹನದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಂಸದ ಕರಡಿ ಸಂಗಣ್ಣ ಚಾಲನೆ ನೀಡಿದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಶಬಾನಾಶೇಖ್ ಮಾತನಾಡಿ, ಎರಡು ಟಾಟಾ ಮ್ಯಾಜಿಕ್ ವಾಹನದ ಮೂಲಕ 15 ದಿನಗಳ ಕಾಲ ಜಿಲ್ಲೆಯ ಎಲ್ಲಾ ಗ್ರಾಮೀಣ ಭಾಗಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತದೆ.  ಬೆಳೆಯ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿಯೇ ಫ್ಯೂಚರ್ ನೆನೆರಾಲಿ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ನಾಲ್ಕು ಜನ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಕುರಿತು ಎಲ್ಲಾ ರೈತರು ಪರಿಪೂರ್ಣ ಮಾಹಿತಿ ಪಡೆದುಕೊಂಡು ಫಸಲ್‌ಬಿಮಾ ಯೋಜನೆಯನ್ನು…

Read More