ಸಿಜಿಕೆ ರಂಗಭೂಮಿಗೆ ಮಾದರಿಯ ವ್ಯಕ್ತಿ-ಸಿ.ಬಿ.ಚಿಲ್ಕರಾಗಿ

ಕೊಪ್ಪಳ : ಸಿ.ಜಿ.ಕೆ. ಕವಿ,ಕಲಾವಿದ, ಬರಹಗಾರ, ಪ್ರೇಕ್ಷಕರನ್ನು ತಯಾರಿಸಿದ ವ್ಯಕ್ತಿ. ಕವಿ, ಕಲಾವಿದ. ನಾಟಕಗಳಿಗೆ ಹೊಸ ಆಯಾಮ ನೀಡಿದವರು. ನಾಟಕಕಾರ ಸಮಾಜದಲ್ಲಿ ಪ್ರಜ್ಞಾಂತಿಕೆ ಕಟ್ಟಿಕೊಡುತ್ತಾನೆ. ಕಾಸಿಂ ಅಲಿ ಮುದ್ದಾಬಳ್ಳಿ ಸಕಲಕಲಾವಲ್ಲಭ. ಸಂಗೀತಗಾರರಾಗಿ, ನಟನಾಗಿ, ಮೋಡಿಕಾರರಾಗಿ ಹಲವಾರು ಕಲೆಗಳಲ್ಲಿ ಪಾರಂಗತರು. ಅಂತವರಿಗೆ ಪ್ರಶಸ್ತಿ ನೀಡುತ್ತಿರುವುದು ಸಮಂಜಸವಾಗಿದೆ ಎಂದು ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಸಿ.ಬಿ.ಚಿಲ್ಕರಾಗಿ ಹೇಳಿದರು. ಅವರಿಂದು ಕೊಪ್ಪಳದ ಬಿ.ಟಿ.ಪಾಟೀಲ್ ನಗರದಲ್ಲಿ ಕನ್ನಡನೆಟ್.ಕಾಂ, ಕವಿಸಮೂಹ, ಬಹುತ್ವ ಭಾರತ ಬಳಗ ಕೊಪ್ಪಳ ಕರ್ನಾಟಕ ಬೀದಿನಾಟಕ ಅಕಾಡೆಮಿ ಬೆಂಗಳೂರು ಆರ್ಟ ಫೌಂಡೇಶನ್ ಸಹಯೋಗದಲ್ಲಿ ನಡೆದ ಸಿಜಿಕೆ ಬೀದಿ ರಂಗ ದಿನಾಚರಣೆ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಸಿಜಿಕೆ ರಂಗಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಂಜರ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪ್ರಜ್ಞಾವಂತ ಮನಸ್ಸುಗಳು ಪ್ರಜ್ಞೆಯ ಮಿತಿಯನ್ನು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅವಶ್ಯ. ಪ್ರಸ್ತುತ ಪ್ರಜ್ಞಾವಂತ ಮನಸ್ಸುಗಳು ಬದುಕುವುದಕ್ಕೆ, ಬರೆಯುವುದಕ್ಕೆ ಬಿಡದಿರುವ ಕೆಟ್ಟ ಸಂದರ್ಭದಲ್ಲಿದ್ದೇವೆ. ಬರಹಗಾರ,ಕವಿ…

Read More