ಕೊಪ್ಪಳ ಜಿಲ್ಲೆಯ ಕೃಷಿ ಸಮಗ್ರ ಚಿತ್ರಣವನ್ನೇ ಬದಲಾಯಿಸುತ್ತೇನೆ : ಬಿ.ಸಿ. ಪಾಟೀಲ್

ಕೊಪ್ಪಳ : ಕೊಪ್ಪಳ ಜಿಲ್ಲೆಯನ್ನು ಕೃಷಿಯಲ್ಲಿ ಇಡೀ ಭಾರತದಲ್ಲಿಯೇ ಮಾದರಿ ಕೃಷಿಯನ್ನಾಗಿ ಮಾಡುವುದರ ಮೂಲಕ ಈ ಜಿಲ್ಲೆಯ ಸಮಗ್ರ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ್ ಹೇಳಿದರು. ಕೊಪ್ಪಳ ಜಿಲ್ಲಾಡಳಿತ, ಸಹಕಾರ ಇಲಾಖೆ ಹಾಗೂ ಜಿಲ್ಲೆಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು (ಜೂನ್.19) ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಹಮ್ಮಿಕೊಳ್ಳಲಾದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊಪ್ಪಳಕ್ಕೆ ನಾನು ಕೃಷಿ ಸಚಿವರಾಗಿ ಬರುತ್ತೇನೆಂದು ಕನಸು-ಮನಸಿನಲ್ಲಿ ಅಂದುಕೊAಡಿರಲಿಲ್ಲ. ಈ ಜಿಲ್ಲೆಯ ಉಸ್ತುವಾರಿ ಹಾಗೂ ಕೃಷಿ ಸಚಿವನಾಗಿ ಬಂದಿರುವುದು ನನ್ನ ಸುದೈವವಾಗಿದ್ದು, ಈ ಜಿಲ್ಲೆಯು ಕೃಷಿಯಲ್ಲಿ ಭಾರತದಲ್ಲಿಯೇ ಮಾದರಿಯನ್ನಾಗಿ ಮಾಡಲು ಶ್ರಮೀಸುತ್ತೇವೆ. ರಾಜ್ಯದ ಕೃಷಿ ಸಚಿವನಾದ ಮೇಲೆ ಹೂ, ಹಣ್ಣು, ತರಕಾರಿಗಾಗಿ 165 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಮೆಕ್ಕೆಜೋಳ…

Read More