ಸಿಪಿಐ ಮೌನೇಶ್ ಪಾಟೀಲ್ ಅಮಾನತಿಗೆ ಪ್ರಗತಿಪರ ಸಂಘಟನೆಗಳ ಆಗ್ರಹ

Koppal ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಹಿರಿಯ ಬರಹಗಾರರ ಮೇಲೆ ಜಾಮೀನುರಹಿತ ಪ್ರಕರಣ ದಾಖಲಿಸಿರುವ ಕೊಪ್ಪಳ ನಗರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೌನೇಶ್ ಪಾಟೀಲ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಜೆ.ಭಾರದ್ವಾಜ್ ಆಗ್ರಹಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಚಾರ ಸೇರಿದಂತೆ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಈಚೆಗೆ ಪ್ರತಿಭಟನೆಗೆ ಮುಂದಾಗಿದ್ದು, ಈ ವಿಷಯವನ್ನು ಪೊಲೀಸ್ ಇಲಾಖೆಗೆ ತಿಳಿಸಿದಾಗ್ಯೂ ಕೊರೊನಾ‌ ನಿರ್ಬಂಧಗಳ ಪಾಲನೆಯ ಜೊತೆಗೆ ಸಾಂಕೇತಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಪಿಐ ಮೌನೇಶ್ ಪಾಟೀಲ್, ಸಂಘಟನೆಯ ಮುಖಂಡರ ವಿರುದ್ಧ ರೇಗಾಡಿದ್ದಲ್ಲದೇ ಅಗೌರವದಿಂದ ವರ್ತಿಸಿದ್ದಾರೆ.‌ ಅವರ ಮಾತಿಗೆ ಬೆಲೆ‌ ನೀಡಿ ಹೋರಾಟ ಕೈಬಿಟ್ಟರೂ ಸಹ ಅನಗತ್ಯವಾಗಿ ಜಾಮೀನುರಹಿತ ಪ್ರಕರಣ ದಾಖಲಿಸಿದ್ದಾರೆ. ಅದೇ ದಿನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಎಲ್ಲೂ ಸಹ ಕೇಸ್ ದಾಖಲಾಗಿಲ್ಲ. ಆದರೆ ಕೊಪ್ಪಳದಲ್ಲಿ ಮಾತ್ರ…

Read More