ಯುದ್ಧ ಸಿದ್ಧತೆಗಳನ್ನು ಹೆಚ್ಚಿಸಿ: ಸೇನೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶ

ಬೀಜಿಂಗ್, ಮೇ 27: ಯುದ್ಧ ಸಿದ್ಧತೆಯನ್ನು ಹೆಚ್ಚಿಸಿಕೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಸೇನೆಗೆ ಆದೇಶ ನೀಡಿದ್ದಾರೆ ಹಾಗೂ ದೇಶದ ಸಾರ್ವಭೌಮತೆಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವಂತೆ ಕರೆ ನೀಡಿದ್ದಾರೆ. ಅವರು ತನ್ನ ಆದೇಶದಲ್ಲಿ ಯಾವುದೇ ನಿರ್ದಿಷ್ಟ ಬೆದರಿಕೆಯನ್ನು ಉಲ್ಲೇಖಿಸದಿದ್ದರೂ, ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಏರ್ಪಟ್ಟಿರುವ ಸಂಘರ್ಷದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಮಹತ್ವ ಪಡೆದುಕೊಂಡಿದೆ. ರಾಜಧಾನಿ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಸಂಸದೀಯ ಅಧಿವೇಶನದ ವೇಳೆ ನಡೆದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮತ್ತು ಪೀಪಲ್ಸ್ ಆರ್ಮ್‌ಡ್ ಪೊಲೀಸ್ ಫೋರ್ಸ್‌ಗಳ ನಿಯೋಗದ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಚೀನಾ ಅಧ್ಯಕ್ಷರು ಈ ಮಾತುಗಳನ್ನು ಆಡಿದ್ದಾರೆ. 66 ವರ್ಷದ ಕ್ಸಿ ಜಿನ್‌ಪಿಂಗ್ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಹಾಗೂ 20 ಲಕ್ಷ ಸಂಖ್ಯಾ ಬಲದ ಸೇನೆಯ…

Read More