ಕೊರೋನಾ ಸೋಂಕಿತ ಬ್ಯಾಂಕ್ ನೌಕರನ ಟ್ರಾವೆಲ್ ಹಿಸ್ಟರಿ

ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಕೊರೋನ ಸೋಂಕು ದೃಢ : ಪಿ.ಸುನೀಲ್ ಕುಮಾರ್ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಅಗ್ರಿಕಲ್ಚರ್ ಫಿಲ್ಡ್ ಆಫಿಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಮಾಹಿತಿ ನೀಡಿದರು.       ಕೋವಿಡ್-19ರ ಸೋಂಕು ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರದAದು (ಮೇ.26) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.         ಕೋವಿಡ್-19ರ ಸೋಂಕಿತ ವ್ಯಕ್ತಿ ಪಿ-2254 ವಯಸ್ಸು 27 ವರ್ಷದ ಪುರುಷನಾಗಿದ್ದು, ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೆಸರೂರ ಗ್ರಾಮದ ನಿವಾಸಿಯಾಗಿದ್ದಾರೆ.  ಇವರು ಮಸ್ಕಿ ಕೆನರಾ ಬ್ಯಾಂಕ್ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು.  ಮೇ. 17 ಮತ್ತು 18 ರಂದು ಮಸ್ಕಿಯಲ್ಲಿಯೇ ಇದ್ದು, ಮೇ. 20 ರಂದು ಕೆಸರೂರಿಗೆ…

Read More