ಜಿಲ್ಲೆಯಲ್ಲಿ ಕೆಲ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯತಿ : ಜಿಲ್ಲಾಧಿಕಾರಿ

ಕೊಪ್ಪಳ ಏ. : ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದು ಸರ್ಕಾರದ ಆದೇಶದಂತೆ ಕೆಲ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು, ಅವುಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳು ಎಂದಿನAತೆ ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ. ಕ್ಷೌರಿಕ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರ್‌ಗಳು, ಹೋಟೆಲ್ ಮತ್ತು ಢಾಬಾಗಳು (ಪಾರ್ಸಲ್ ಸೇವೆ ಹೊರತು), ಸಿನಿಮಾ ಥಿಯೇಟರ್ ಮತ್ತು ಮನರಂಜನಾ ಸ್ಥಳಗಳು, ಅಂತರ್ ಜಿಲ್ಲಾ ಮಾನವ ಸಾಗಾಣಿಕೆ, ಬಸ್, ಆಟೋ, ಟ್ಯಾಕ್ಸಿ ಸೇವೆಗಳು, ಶೈಕ್ಷಣಿಕ ಸಂಸ್ಥೆಗಳು, ವ್ಯಾಯಾಮ ಶಾಲೆಗಳು, ಕ್ಲಬ್‌ಗಳು ಮತ್ತು ರೆಸಾರ್ಟ್ಗಳು, ಸ್ವಿಮ್ಮಿಂಗ್‌ಪೂಲ್, ಉದ್ಯಾನವನಗಳು, ಸಮುದಾಯ ಭವನಗಳು, ಸಂತೆ, ಜಾತ್ರೆ, ಧಾರ್ಮಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಮದುವೆ ಮತ್ತು ಸಾಮೂಹಿಕ ಸಮಾರಂಭಗಳು, ಗುಟ್ಕಾ, ತಂಬಾಕು ಅಂಗಡಿಗಳು, ಲಾಡ್ಜ್ಗಳು, ಬೀದಿ ಬದಿಯ ಚಾಟ್ಸ್ ಮತ್ತು ಟೀ ಅಂಗಡಿಗಳು, ದೇವಸ್ಥಾನ, ಮಸೀದಿ, ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರುವುದಿಲ್ಲ ಈ ಎಲ್ಲಾ…

Read More