ಹಿರಿಯ ನಾಟಕಕಾರ,ಕತೆಗಾರ,ಕಾದಂಬರಿಕಾರ,ಕವಿ ಚಂದ್ರಕಾಂತ ಕುಸನೂರ (೮೯)ಇನ್ನಿಲ್ಲ.

ಹಿರಿಯನಾಟಕಕಾರ,ಕತೆಗಾರ,ಕಾದಂಬರಿಕಾರ,ಕವಿ, ಚಿತ್ರ ಕಲಾವಿದ,ಚಿತ್ರ ಕಲಾವಿಮರ್ಶಕ,ಅನುವಾದಕ #ಚಂದ್ರಕಾಂತ_ಕುಸನೂರ (೮೯)ಇನ್ನಿಲ್ಲ. ಕನ್ನಡಕ್ಕೆ ಮೊದಲ ಅಸಂಗತ ನಾಟಕಕೊಟ್ಟವರು.ಪ್ರಥಮ ದಲ್ಲಿ ಹೈಕುಪ್ರಕಾರ ನೀಡಿದ ಇವರ #ವಿದೂಷಕ, #ದಿಂಡಿ,#ಆನಿಬಂತ_ಆನಿ ಮುಖ್ಯ ನಾಟಕಗಳು.#ಕೆರೂರನಾಮಾ,#ಗೊಹರಜಾನ_ಮಾಲತಿ_ಮತ್ತು_ನಾನು ಕಾದಂಬರಿಗಳು. #ಬೆಕ್ಕು_ಮತ್ತು_ಇತರ_ಕತೆಗಳು ನಾನು ಮೆಚ್ಚಿದ ಕಥಾಗುಚ್ಛ. ಇವರ ಕಾದಂಬರಿ ಒಂದಕ್ಕೆ ನನ್ನಿಂದ ಮುನ್ನುಡಿ ಬರೆಸಿದ ದೊಡ್ಡಗುಣದ ವ್ಯಕ್ತಿತ್ವವು ಇವರದು. ೬೦ ನಾಟಕ,೬ ಕಾದಂಬರಿ, ೩ಕಥಾಸಂಕಲನ, ೪ ಚಿತ್ರಕಲಾಬರಹದ ಕೃತಿಗಳು. “#ಕಲೆ_ಅನುಭವ_ಮತ್ತು_ಅನುಭಾವ” ಕಲೆಯ ಕುರಿತ ಗಂಭೀರ ಚಿಂತನೆಯ ಕೃತಿ. ಚಿತ್ರಕಲಾವಿದರಾದ ಇವರ ಪ್ರದರ್ಶನ ಗಳು ದೇಶದ ಪ್ರಮುಖ ನಗರಗಳಲ್ಲಿ ನಡೆದಿವೆ. ಬೆಳಗಾವಿ ಸಾಂಸ್ಕೃತಿಕ ವಲಯದ ಕೇಂದ್ರ ವಾಗಿ ನಮ್ಮೆಲ್ಲರ ಸಂಗಡ ಒಡನಾಡಿದವರು. ಕರ್ನಾಟಕ ನಾಟಕ ಅಕಾಡೆಮಿ,ಕರ್ನಾಟಕ ಲಲಿತ ಕಲಾ ಅಕಾಡಮಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ- ಈ ಮೂರು ಅಕಾಡೆಮಿಗಳ ಗೌರವ ಪ್ರಶಸ್ತಿ ಪಡೆದವರು ಕುಸನೂರರು. ಬೆಳಗಾವಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಅಧಿಕಾರಿಯಾಗಿ ಬಂದು ಇಲ್ಲಿಯ ರಹವಾಸಿಗಳಾದರು. ನನಗೆ ವಯಕ್ತಿಕವಾಗಿ ಮನೆಯ ಹಿರಿಯರ ಹಾಗಿದ್ದವರು. ಅವರನ್ನು ಕಳಕೊಂಡ ದುಃಖ, ನೋವು ಎದೆಯಲಿ…

Read More