ಪತ್ರಕರ್ತರೋ? ಅಂಧಭಕ್ತರೋ? ದೇಶದ್ರೋಹಿಗಳೋ?

ಸಿಎಸ್ಕೆ- ಸಂಚಲನ ಅಂಕಣ (ಕೃಪೆ: ಆಂದೋಲನ ದಿನ ಪತ್ರಿಕೆ)….. “The newspaperman (Journalist) has become a walking plague (Corona). He (or She) spreads the contagion of lies and calumnies” ಹಲವಾರು ದಶಕಗಳ ಹಿಂದೆ ಮಹಾತ್ಮ ಗಾಂಧೀಜಿ ಹೇಳಿದ್ದ ಮೇಲಿನ ಮಾತುಗಳು ಈಗ ಕ್ಷಣ-ಕ್ಷಣದ ನಿತ್ಯಸತ್ಯವಾಗಿ ಕಣ್ಣಿಗೆ ಬೀಳುತ್ತಿದೆ. ಈವತ್ತು ಇಡೀ ಮನುಕುಲವೇ ಅನಿಶ್ಚಿತ ಮತ್ತು ಆತಂಕದ ಕಾಲಘಟ್ಟದಲ್ಲಿ ಕುಸಿದು ಹೋಗುತ್ತಿದೆ. ಒಂದು ಯಕಶ್ಚಿತ್ ಸೂಕ್ಷ್ಮ ಜೀವಿ ಕೊರೊನಾವು ಭೂಮಿಯ ಮೇಲಿನ ಮಹಾನ್ ಬುದ್ಧಿವಂತ ಮನುಷ್ಯ ಎಂಬ ಪ್ರಾಣಿ ತೃಣ ಸಮಾನವೂ ಅಲ್ಲ ಎಂದು ಈಗಾಗಲೇ ಸಾಬೀತು ಮಾಡಿದೆ. ಪ್ರಪಂಚದ ಎಲ್ಲೆಡೆ ರಾಶಿ-ರಾಶಿ ಹೆಣಗಳು ಬೀಳಲಾರಂಭಿಸಿವೆ. ಮುಂದಿನ ಕೆಲವು ವಾರಗಳು/ತಿಂಗಳುಗಳಲ್ಲಿ ಮನುಕುಲ ಎಲ್ಲಿ ಹೋಗಿ ನಿಲ್ಲುತ್ತದೆ ಎನ್ನುವುದು ಪ್ರಪಂಚದ ದೊಡ್ಡಣ್ಣ ಅಮೆರಿಕಾಕ್ಕೂ ಗೊತ್ತಿಲ್ಲ, ಸಣ್ಣಣ್ಣ ಭಾರತಕ್ಕೂ ಗೊತ್ತಿಲ್ಲ. ಒಟ್ಟಾರೆ ಇಡೀ ಜಗದ…

Read More