ಕೊರೋನ: ಧರ್ಮದ ನೆಪದಲ್ಲಿ ಕಾನೂನು ಉಲ್ಲಂಘನೆ ಸಲ್ಲ

ಕೊರೋನ ಹರಡುವಿಕೆಯನ್ನು ತಡೆಯುವಲ್ಲಿ ಸರಕಾರದ ವೈಫಲ್ಯ, ಲಾಕ್‌ಡೌನ್ ಸಂದರ್ಭದಲ್ಲಿ ಸರಕಾರದ ಪೂರ್ವ ತಯಾರಿ ಕೊರತೆ ಸಾಕಷ್ಟು ಚರ್ಚೆಗಳಿಗೆ ಒಳಗಾಗಿವೆ. ಬಹುಶಃ ಸರಕಾರ ಮಾರ್ಚ್ ಮೊದಲ ವಾರವೇ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅನಿವಾಸಿಗಳಿಗೆ ಕ್ವಾರಂಟೈನ್ ಏರ್ಪಡಿಸಿದ್ದರೆ, ಭಾರತ ಇಂದು ಈ ಮಟ್ಟಿಗೆ ಕಂಗಾಲಾಗಬೇಕಾಗಿರಲಿಲ್ಲ ಎನ್ನುವುದು ಬಹುಜನರ ವಾದವಾಗಿದೆ. ಹಾಗೆಯೇ ಲಾಕ್‌ಡೌನ್ ಘೋಷಿಸುವ ಮೊದಲು ವಲಸೆ ಕಾರ್ಮಿಕರ ಮೇಲೆ ಇದು ಬೀರುವ ಪರಿಣಾಮಗಳನ್ನು ಚರ್ಚಿಸಿ, ಮುಂಜಾಗ್ರತೆ ವಹಿಸಿದ್ದರೆ ಸಾವಿರಾರು ವಲಸೆ ಕಾರ್ಮಿಕರು ಏಕಾಏಕಿ ಊರಿಗೆ ಮರಳುವ ಸ್ಥಿತಿಯೂ ನಿರ್ಮಾಣವಾಗುತ್ತಿರಲಿಲ್ಲ, ಸರಕಾರದ ಲಾಕ್‌ಡೌನ್ ವಿಫಲವಾಗುತ್ತಿರಲಿಲ್ಲ ಎನ್ನುವ ಅಭಿಪ್ರಾಯಗಳಿವೆ. ಇದು ನಮ್ಮನ್ನಾಳುವವರ ಬೇಜವಾಬ್ದಾರಿಗೆ ಸಂಬಂಧಿಸಿದ ವಿಷಯವಾಯಿತು. ವೈಫಲ್ಯಗಳಿಗೆ ಸದಾ ಸರಕಾರವನ್ನು ಟೀಕಿಸುವ ಜನತೆಯೂ ಕೂಡ ಕೊರೋನ ವಿಷಯದಲ್ಲಿ ತಮ್ಮ ಹೊಣೆಗಾರಿಕೆಗಳನ್ನು ಮರೆತಿರುವ ಆಘಾತಕಾರಿ ಸುದ್ದಿಗಳು ಈಗಲೂ ದೇಶದ ಮೂಲೆ ಮೂಲೆಗಳಿಂದ ವರದಿಯಾಗುತ್ತಿವೆ. ಇಂದು ನಾವು ಎಲ್ಲಕ್ಕೂ ಸರಕಾರವನ್ನೇ ಹೊಣೆ ಮಾಡುವ ಮೊದಲು,…

Read More