ಯಾರು ಮಾಸ್ಕ್ ಧರಿಸಬೇಕು, ಯಾರು ಮಾಸ್ಕ್ ಧರಿಸಬೇಕಾಗಿಲ್ಲ?: ಇಲ್ಲಿದೆ ಮಾಹಿತಿ

ಬೆಂಗಳೂರು, ಎ.1: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ನಡುವೆಯೇ ಮಾಸ್ಕ್ ಧರಿಸುವ ಕುರಿತಂತೆ ಗೊಂದಲ ಮುಂದುವರಿದಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಯಾರು ಮಾಸ್ಕ್ ಧರಿಸಬೇಕು, ಯಾರು ಮಾಸ್ಕ್ ಧರಿಸಬೇಕಾಗಿಲ್ಲ ಎಂಬುದರ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಪ್ರಕಟನೆಯೊಂದನ್ನು ಹೊರಡಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಕೊರೋನ ವೈರಸ್ ಸೋಂಕು ಗುಣಲಕ್ಷಣ ಕಂಡುಬಂದವರು ಮಾತ್ರವೇ ಮಾಸ್ಕ್ ಧರಿಸಿದರೆ ಸಾಕು. ವಿನಾ ಉಳಿದವರಿಗೆ ಮಾಸ್ಕ್ ಧರಿಸುವಂತೆ ಕಡ್ಡಾಯ ಮಾಡುವಂತಿಲ್ಲ ಎಂದು ಆಯುಕ್ತಾಲಯ ಸ್ಪಷ್ಟಪಡಿಸಿದೆ. ಕೆಲವು ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಅಂಗಡಿಗಳು ಮತ್ತಿತರ ಕಡೆಗಳಲ್ಲಿ ಜನರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಹೇಳಲಾಗುತ್ತಿದೆ. ಈಗಾಗಲೇ ಮಾಸ್ಕ್ ಯಾರು ಧರಿಸವೇಕು ಎಂಬ ಕುರಿತು ಸರಕಾರ ತನ್ನ ಸುತ್ತೋಲೆ ಮತ್ತು ಸಂವಹನಗಳ ಮೂಲಕ ಸ್ಪಷ್ಟವಾದ ಸೂಚನೆಗಳನ್ನು ನೀಡಿದೆ. ಆದರೂ ಈ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಇಲಾಖೆ ಬಿಡುಗಡೆ ಮಾಡಿರುವ…

Read More