ಪರಸ್ಪರ ಪ್ರೀತಿಸೋಣ ಮತ್ತು ಪ್ರೀತಿಸುತ್ತಲೇ ಇರೋಣ.ಈಗ ನಮ್ಮ ಕೈಹಿಡಿಯಬಹುದಾದ ಶಕ್ತಿ ಅದೊಂದೇ-ಫರ್ಝಾನ ಅಶ್ರಫ್ ಯು.ಟಿ

ಪ್ರಿಯರೇ, ಭಾರತ ಕೊರೊನಾ ಸೋಂಕಿನ ಮೂರನೇ ಹಂತಕ್ಕೆ ತಲುಪುತಿರುವ ಈ ಹೊತ್ತಿನಲ್ಲಿ ನಾವೆಲ್ಲಾ ಎಷ್ಟು ಸ್ವಯಂನಿರ್ಬಂಧ ಮಾಡಿಕೊಂಡರೂ ಸಾಲದು.ಈ ನಿಟ್ಟಿನಲ್ಲಿ ಮನೆಯೊಳಗೆ ಕೂಡಿಹಾಕಲ್ಪಟ್ಟಾಗ ಮೂಡಿಬಂದ ಕೆಲವೊಂದು ವಿಚಾರಗಳು. ದಯವಿಟ್ಟು ನಿಮ್ಮ ನಿಮ್ಮ ಹೆಣ್ಣುಮಕ್ಕಳ ಮುಂಗುರಳನ್ನ ಕತ್ತರಿಸಿ ಬಿಡಿ.ಅದನ್ನು ಹಿಂದೆ ಸರಿಸುವ ಕಾರಣಕ್ಕಾಗಿ ಅವರು ಬಹಳಷ್ಟು ಬಾರಿ ಮುಖದ ಮೇಲೆ ಕೈಯಾಡಿಸುತ್ತಾರೆ.ಯಾವ ಬ್ಯೂಟಿಷಿಯನ್ ಅಗತ್ಯವೂ ಬೇಡ.ಕೊಂಚ ನೀರು ಚಿಮುಕಿಸಿ ನೀವೇ ನೀಟಾಗಿ ಕತ್ತರಿಸಿ.ಹೆಚ್ಚುಕಮ್ಮಿಯಾದರೂ ಚಿಂತಿಲ್ಲ. ಯಾವುದೇ ಕಾರಣಕ್ಕೂ ಮುಖಗಳನ್ನು ಮುಟ್ಟದಂತೆ ಮಕ್ಕಳನ್ನು ತರಬೇತಿಗೊಳಿಸಿ. ಮಹಿಳೆಯರೇ ಹಾಲು,ತರಕಾರಿ ಎಷ್ಟೆಲ್ಲಾ ತೊಳೆತೊಳೆದು ಬಳಸುತಿದ್ದರೂ,ನಮ್ದೇ ಕೈಗಳನ್ನು ಹತ್ತಾರು ಬಾರಿ ತೊಳೆದು ಕೇಡಿ ವೈರಸ್ ಅನ್ನು ಶುಚಿಗೊಳಿಸತೊಡಗಿದರೂ ಬೆರಳೊಳಗಿನ ಉಂಗುರದೆಡೆ ಶುಚಿಯಾಗುವುದು ಕಷ್ಟ.ಹಾಗಾಗಿ ಆ ಉಂಗುರಗಳನು ಕಳಚಿಬಿಡಿ. ಸ್ಯಾನಿಟೈಸರ್ ಜ್ವಲನಕಾರಿ ಅಂಶಗಳನ್ನು ಹೊಂದಿರುತ್ತದೆ.ಹಾಗಾಗಿ ಅವನ್ನು ಬಳಸಿರುವ ಹೊತ್ತು ಗ್ಯಾಸ್ ಒಲೆ ಉರಿಸುವುದು ಅಪಾಯಕಾರಿ.ಈ ಬಗ್ಗೆ ಜಾಗರೂಕರಾಗಿರಿ. ಮಕ್ಕಳಿಗೆ ಈ ಪರಿಸ್ಥಿತಿಯ ಗಂಭೀರತೆ ತಿಳಿದಿಲ್ಲ.ಗೆಳೆಯರಿಲ್ಲದೇ ಈ…

Read More