ವಿಮಾನಯಾನ ನಿಲ್ದಾಣಕ್ಕೆ ಟನಕನಕಲ್ ಬಳಿ ೫೦೦ ಎಕರೆ ಭೂಮಿ ಸ್ವಾಧೀನ..!

ಸಂಸದ ಸಂಗಣ್ಣ ಕರಡಿ ಅವರಿಂದ ಮುಖ್ಯ ಮಂತ್ರಿಗಳಿಗೆ ಪತ್ರ ಎರಡನೇ ಹಂತದಲ್ಲಿ ಘೋಷಣೆಯಾಗಿದ್ದ ಉಡಾನ್ ಯೋಜನೆ ಅನುಷ್ಠಾನಕ್ಕೆ ಮುಂದುವರೆದ ಪ್ರಯತ್ನ ಕೊಪ್ಪಳ : ಪ್ರಾದೇಶಿಕ ವಿಮಾನಯಾನ ಯೋಜನೆ ಆರಂಭಿಸಿರುವ ಕೇಂದ್ರ ಸರ್ಕಾರ, ಸಾಮಾನ್ಯರು ವಿಮಾನದಲ್ಲಿ ಪ್ರಯಾಣಕ್ಕೆ ಅನುಕೂಲವಾಗಲು ಕೊಪ್ಪಳ ಜಿಲ್ಲೆಗೆ ಮಂಜೂರಿಯಾಗಿದ್ದ ಎರಡನೇ ಹಂತದಲ್ಲಿ ಉಡಾನ್ ಯೋಜನೆಯ ಅನುಷ್ಠಾನಕ್ಕೆ ಮತ್ತೇ ಸಂಸದ ಸಂಗಣ್ಣ ಕರಡಿ ಅವರು ಪ್ರಯತ್ನವನ್ನು ಮುಂದುವರೆಸಿದ್ದಾರೆ. ವಿಮಾನ ನಿಲ್ದಾಣ ಕೊರತೆಯಿಂದ ಉಡಾನ ಯೋಜನೆ ಅಡಿಯಲ್ಲಿ ವಿಮಾನ ಯಾನ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಪರ್ಯಾಯ ಕ್ರಮಕ್ಕೆ ಮುಂದಾಗಿರುವ ಸಂಸದರು ಮುಖ್ಯ ಮಂತ್ರಿಗಳಿಗೆ ಪತ್ರವನ್ನು ಬರೆದಿರುವರು. ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಇದಕ್ಕಾಗಿ ಅಗತ್ಯ ಜಮೀನನ್ನು ಭೂಸ್ವಾಧೀನಕ್ಕಾಗಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚನೆಯನ್ನು ನೀಡಲಾಗಿದೆ. ಜಿಲ್ಲೆಗೆ ಉಡಾನ್ ಯೋಜನೆ ಘೋಷಣೆಯಾಗಿ ೨ ವರ್ಷ ಕಳೆದಿದ್ದು, ವಿಮಾನ ನಿಲ್ದಾಣ ನೀಡಲು ಎಂಎಸ್ಪಿಎಲ್(ಬಲ್ಡೋಟ್) ಕಂಪನಿ ಒಪ್ಪದ ಕಾರಣ…

Read More