ನೌಕರರ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕೊಪ್ಪಳ ತಂಡಕ್ಕೆ ದ್ವಿತೀಯ ಬಹುಮಾನ

ಕೊಪ್ಪಳ ,ಮಾರ್ಚ್ ೦೧: ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯ ನಾಟಕ ವಿಭಾಗ ಪ್ರತಿನಿಧಿಸಿದ್ದ ಶಿಕ್ಷಕರ ಕಲಾಸಂಘ ಅಭಿನಯಿಸಿದ ” ರಾವಿ ನದಿಯ ದಂಡೆಯಲ್ಲಿ ” ನಾಟಕಕ್ಕೆ ದ್ವಿತೀಯ ಬಹುಮಾನ ದೊರೆತಿದೆ. ಅಸಗರ್ ವಜಾಹತ್ ರಚಿತ ಡಾ.ತಿಪ್ಪೇಸ್ವಾಮಿ ಅನುವಾದಿಸಿರುವ ಈ ನಾಟಕವನ್ನು ಕೊಪ್ಪಳ ನೌಕರರು ಮನೋಜ್ಞವಾಗಿ ಅಭಿನಯಿಸಿದರು.ಲಕ್ಷ್ಮಣ ಪೀರಗಾರ ನಿರ್ದೇಶಿಸಿರುವ ನಾಟಕದಲ್ಲಿ ಪ್ರಾಣೇಶ ಪೂಜಾರ, ರಾಮಣ್ಣ ಶ್ಯಾವಿ, ನಾಗರಾಜನಾಯಕ ಡಿ.ಡೊಳ್ಳಿನ, ದಯಾನಂದ, ಯೋಗನರಸಿಂಹ, ಮಂಜುನಾಥ ಪೂಜಾರ, ಮುಕುಂದ ಅಮೀನಗಡ, ರಮೇಶ ಪೂಜಾರ, ಸುಮತಿ, ಭೂಮಿಕಾ ಶ್ಯಾವಿ, ಯಮನೂರಪ್ಪ, ಯೋಗಪ್ಪ, ಮತ್ತಿತರರು ಮನೋಜ್ಞ ಪ್ರದರ್ಶನ ನೀಡಿದರು. ಹಿನ್ನೆಲೆ ಸಂಗೀತ ಫಕೀರಪ್ಪ ಗುಳದಳ್ಳಿ ನೀಡಿದರು. ಧಾರವಾಡ ಆರ್ .ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬಹುಮಾನ…

Read More