ಕ್ರೀಡೆ ಗೆಲ್ಲುವದಲ್ಲ ಆದರಲ್ಲಿ ಪಾಲ್ಗೊಳ್ಳುವದು- ಹಾಲೇಶ ಕಂದಾರಿ

ಕ್ರೀಡಾಪಟುತ್ವ ಚಟುವಟಿಕೆಯನ್ನು ಅದರ ಸಲುವಾಗಿಯೇ ಅನುಭವಿಸುವ ಆಕಾಂಕ್ಷೆಯನ್ನು ಮತ್ತು ‌ವಿಶಿಷ್ಟ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಶ್ರೇಷ್ಟ ಕ್ರೀಡಾ ತಜ್ಞರ ಪ್ರಕಾರ ‘ನೀವು ಆಟವನ್ನು ಗೆಲ್ಲುತ್ತೀರಿ ಅಥವಾ ಸೋಲುತ್ತೀರಾ ಎನ್ನುವದು ಮುಖ್ಯವಲ್ಲ ನೀವು ಆಟವನ್ನು ಹೇಗೆ ಆಡಿದೀರಿ ಎಂಬುದು ಮುಖ್ಯ ಎಂದಿದ್ದಾರೆ’ ಅದರಂತೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಗೆಲ್ಲುವ ಛಲದೊಂದಿಗೆ ಪಂದ್ಯಾವಳಿಗಳಲ್ಲಿ ಪಾಲ್ಗೋಳ್ಳುವದನ್ನು ಮೊದಲು ಮಾಡಬೇಕೆಂದು ಸಮರ್ಪಣಾ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಹಾಲೇಶ ಕಂದಾರಿ ಮಾತನಾಡಿದರು. ಅವರು ದಿ:25 ಮತ್ತು 26 ಜನವರಿಯಲ್ಲಿ ನಾಡಿನ ವಿಚಾರವಂತ ರಾಜಕಾರಣಿಗಳಲ್ಲಿ ಒಬ್ಬರಾದ , ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳರವರ ಜನ್ಮ ದಿನಾಚರಣೆಯ ಪ್ರಯುಕ್ತ ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ,ಗುಳದಳ್ಳಿ ಹಾಗೂ ಸಮರ್ಪಣಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ,ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.…

Read More