ಭಾರತದಲ್ಲಿ 70 ವರ್ಷ ಜೀವಿಸಿರುವುದು ಪೌರತ್ವ ಸಾಬೀತಿಗೆ ಸಾಕಾಗುವುದಿಲ್ಲವೇ: ನಾಸೀರುದ್ದಿನ್ ಶಾ ಪ್ರಶ್ನೆ

ಹೊಸದಿಲ್ಲಿ, ಜ.23: ಪೌರತ್ವ ಕಾಯ್ದೆಯ ಬಗ್ಗೆ ತನಗೇನೂ ಆತಂಕವಿಲ್ಲ, ಆದರೆ ಸಿಟ್ಟು ಇದೆ. ಇತರ ಹಲವು ಭಾರತೀಯರಂತೆ ತಾನು ಕೂಡಾ ಜನನ ಪ್ರಮಾಣ ಪತ್ರ ತೋರಿಸುವುದಿಲ್ಲ. ಈ ದೇಶದಲ್ಲಿ 70 ವರ್ಷ ಜೀವಿಸಿರುವುದು ಪೌರತ್ವ ಸಾಬೀತಿಗೆ ಸಾಕಾಗುವುದಿಲ್ಲವೇ ಎಂದು ನಟ ನಾಸೀರುದ್ದಿನ್ ಶಾ ಪ್ರಶ್ನಿಸಿದ್ದಾರೆ. ಓರ್ವ ಮುಸ್ಲಿಮನಾಗಿ ಈ ಮಾತು ಹೇಳುತ್ತಿಲ್ಲ, ಓರ್ವ ನಾಗರಿಕನಾಗಿ ಹೇಳುತ್ತಿದ್ದೇನೆ. ನನ್ನ ವಂಶದ ಐದು ತಲೆಮಾರಿನವರನ್ನು ಈ ಭೂಮಿಯಲ್ಲೇ ದಫನ ಮಾಡಲಾಗಿದೆ. ನಾನು ಸಾಮಾಜಿಕ ಮತ್ತು ಶೈಕ್ಷಣಿಕ ರಂಗದ ಮೂಲಕ ದೇಶಕ್ಕೆ ಕೊಡುಗೆ ನೀಡಿದ್ದೇನೆ. ನನ್ನಲ್ಲಿ ಜನ್ಮ ಪ್ರಮಾಣ ಪತ್ರವಿಲ್ಲದ ಕಾರಣ ಅದನ್ನು ಒದಗಿಸಲು ಆಗದು. ಹಾಗೆಂದ ಮಾತ್ರಕ್ಕೆ ನಮ್ಮನ್ನೆಲ್ಲಾ ಪೌರತ್ವ ಪಟ್ಟಿಯಿಂದ ಕೈಬಿಡಲಾಗುವುದೇ ? ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ ಎಂಬ ಭರವಸೆಯ ಅಗತ್ಯ ನನಗಿಲ್ಲ. ನಾನು ಆತಂಕಿತನಾಗಿಲ್ಲ ಎಂದು ಶಾ ಹೇಳಿದರು. ದೇಶದಲ್ಲಿ 70 ವರ್ಷ ಜೀವಿಸಿರುವುದು ಪೌರತ್ವ…

Read More