ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ೩ ದಿನದಲ್ಲಿ ೬ ಲಕ್ಷ ಭಕ್ತರು ಪ್ರಸಾದ ಸ್ವೀಕಾರ

ಕೊಪ್ಪಳ- ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಪ್ರಸಾದವನ್ನು ಕಳೆದ ಮೂರು ದಿನಗಳಿಂದ ಸ್ವೀಕರಿಸುತಿದ್ದಾರೆ.ಮಹಾರಥೋತ್ಸವ ದಿನದಿಂದ ಪ್ರಾರಂಭವಾದ ಮಹಾದಾಸೋಹವು ಇಲ್ಲಿಯವರೆಗೆ ಮಹಾದಾಸೋಹದಲ್ಲಿ ಬಳಕೆಯಾದ ಧವಸ ಧಾನ್ಯಗಳು, ಕಾಯಿಪಲ್ಲೆಯ ವಿವರಗಳು ಇಂತಿವೆ. ಪ್ರಸಾದ ಸ್ವೀಕರಿಸಿದ ಒಟ್ಟು ಭಕ್ತರ ಸಂಖ್ಯೆ ೫-೬ ಲಕ್ಷ, ಸುಮಾರು ೫ ಲಕ್ಷ ರೊಟ್ಟಿಗಳು, ೧೦ ಕ್ವೀಂಟಲ್ ಸಿಹಿ ಬೂಂದಿ,೨೦೦ ಕ್ವೀಂಟಲ್ ಮಾದಲಿ, ೪ ಟನ್ ಕಾಯಿಪಲ್ಲೆ, ೭೫೦ ಕೆಜಿ ತುಪ್ಪ, ೬ ಕ್ವೀಂಟಲ್ ಕೆಂಪು ಚಟ್ನಿ, ೬ ಕ್ವೀಂಟಲ್ ಕಡ್ಲಿಪುಡಿ, ೨೦೦ ಕ್ವೀಂಟಲ್ ಅಕ್ಕಿ, ೧೨ ಕೊಪ್ಪರಿಕೆ ಸಾರು, ೮ ಕೊಪ್ಪರಿಕೆ ದಾಲ್, ೩ ಕೊಪ್ಪರಿಕೆ ಮಡಕಿಕಾಳು, ೩ ಸಾವಿರ ಲೀಟರ್ ಹಾಲು ಬಳಕೆಯಾಗಿದ್ದು ಸುಮಾರು ೫ ಸಾವಿರದಿಂದ ೬ ಸಾವಿರ ಬಾಣಸಿಗರು ಅಡುಗೆಯನ್ನು ತಯಾರಿಸಿದ್ದಾರೆ ಕೊಪ್ಪಳ ಜಿಲ್ಲೆಯ ಸ್ಕೌಟ್ಸ ಮತ್ತು ಗೈಡ್ಸ ವಿಭಾಗವಾದ ರೆಂಜರ್‍ಸ, ರೋವರ್‍ಸ ವಿಭಾಗದಿಂದ ಸ್ವಚ್ಚತಾ…

Read More