ಜ. ೮ರಂದು ಪೌರತ್ವ ಕಾಯ್ದೆ ವಿರುದ್ಧ ಬಹುಜನ ಕ್ರಾಂತಿ ಮೋರ್ಚಾ ಪ್ರತಿಭಟನೆ

ವಿಜಯಪುರ ಜ. ೬-ವಾಮನ್ ಮೇಶ್ರಾಮ್ ನೇತೃತ್ವದ ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಪೌರತ್ವ ಕಾಯ್ದೆ ವಿರುದ್ಧ ಜನೆವರಿ ೮ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೋರ್ಚಾದ ಜಿಲ್ಲಾ ಸಂಚಾಲಕ ಮಹೇಶ್ ಕ್ಯಾತನ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ದೇಶದಾದ್ಯಂತ ದೋಷಪೂರಿತ ಎನ್‌ಆರ್‌ಸಿ ಮತ್ತು ಸಂವಿಧಾನ ವಿರೋಧಿ ಸಿಎಎ ವಿರುದ್ಧ ಮೂರು ಹಂತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಎರಡನೆ ಹಂತದ ಪ್ರತಿಭಟನೆಯನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಆನೆವರಿ ೮ರಂದು ಮುಂಜಾನೆ ೧೧-೦೦ ಗಂಟೆಗೆ ಡಾ. ಅಂಬೇಡ್ಕರ್ ಸರ್ಕಲ್‌ನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿದ್ದು, ಭೀಮ್ ಆರ್ಮಿ, ಪೀಪಲ್ ಫ್ರಂಟ್ ಆಫ್…

Read More