ಸೂರ್ಯಗ್ರಹಣ ವೀಕ್ಷಣೆ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಪ್ರಕೃತಿಯ ಸಹಜ ವಿಸ್ಮಯ ತಪ್ಪಿಸಿಕೊಳ‍್ಳಬೇಡಿ ಬೆಂಗಳೂರು, ಡಿ. 25: ಸೂರ್ಯಗ್ರಹಣ ವೀಕ್ಷಣೆ ಒಂದು ಅಸ್ಮರಣೀಯ ಅನುಭವವಾಗಿದೆ ಮತ್ತು ಈ ದಶಕದ ಕೊನೆಯ ಸೂರ್ಯಗ್ರಹಣ ಡಿ.26ರಂದು ಸಂಭವಿಸಲಿದ್ದು, ಇದು ದಕ್ಷಿಣ ಭಾರತದ ಕೆಲ ಪ್ರದೇಶಗಳಲ್ಲಿ ಸ್ಪಷ್ಟವಾಗಿ ಕಾಣಿಸಲಿದೆ ಎಂದು ನೇತ್ರ ತಜ್ಞ ಡಾ.ಭುಜಂಗಶೆಟ್ಟಿ ತಿಳಿಸಿದ್ದಾರೆ. ಈ ಖಗೋಳ ಸೂರ್ಯಗ್ರಹಣ ವಾರ್ಷಿಕ ಸೂರ್ಯಗ್ರಹಣಕ್ಕಿಂತ ವಿಶೇಷವಾಗಿದ್ದು ಇಲ್ಲಿ ಚಂದ್ರನು ಸೂರ್ಯ ಹಾಗೂ ಭೂಮಿಯ ಮಾರ್ಗದ ನಡುವೆ ಬರುವ ಮೂಲಕ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚುತ್ತಾನೆ. ಇದರಿಂದ ಆಕಾಶದಲ್ಲಿ ಬೆಂಕಿಯ ಉಂಗುರ ನಿರ್ಮಾಣವಾಗುತ್ತದೆ. ಪಾರ್ಶ್ವ ಸೂರ್ಯಗ್ರಹಣ ಮೊದಲ ತಾಣದಲ್ಲಿ ಬೆಳಗ್ಗೆ 7:59ಕ್ಕೆ ಸಂಭವಿಸುತ್ತದೆ. ಪೂರ್ಣ ಸೂರ್ಯಗ್ರಹಣ ಬೆಳಗ್ಗೆ 9:04ಕ್ಕೆ ಕಾಣುತ್ತದೆ ಮತ್ತು ನಂತರ ಗರಿಷ್ಠ ಸೂರ್ಯಗ್ರಹಣದ ಸ್ಥಾನಕ್ಕೆ ಬೆಳಗ್ಗೆ 10:47ಕ್ಕೆ ಚಲಿಸುತ್ತದೆ. ಈ ಮಹತ್ತರ ಘಟನೆಯನ್ನು ಬರಿಗಣ್ಣಿನಲ್ಲಿ ಸೂಕ್ತವಾದ ನೇತ್ರರಕ್ಷಣೆಯ ಸಾಧನಗಳಿಲ್ಲದೆ ಕೊಂಚಕಾಲವೂ ವೀಕ್ಷಿಸಬಾರದು ಎಂದು ಡಾ.ಭುಜಂಗ ಶೆಟ್ಟಿ ಸಲಹೆ ಮಾಡಿದ್ದಾರೆ. ರಕ್ಷಣೆಯಿಲ್ಲದೆ ವೀಕ್ಷಣೆ…

Read More