ಪೌರತ್ವ ತಿದ್ದುಪಡಿ ಕಾಯ್ದೆಯ ಮೊದಲ ಬಲಿಪಶುಗಳು ದೇಶದ ಮೂಲ ನಿವಾಸಿಗಳು: ನ್ಯಾ.ಎಚ್.ಎಸ್. ನಾಗ್‌ಮೋಹನ್‌ದಾಸ್

♦ ದೇಶದ ಸಂವಿಧಾನಕ್ಕೆ 70ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ತಮ್ಮ ಅಭಿಪ್ರಾಯ ವೇನು? ನ್ಯಾ.ನಾಗ್‌ಮೋಹನ್ ದಾಸ್:  ದೇಶದ ಸಂವಿಧಾನಕ್ಕೆ 70 ವರ್ಷಗಳಾಗಿವೆ. ಸಾಕಷ್ಟು ತಿದ್ದುಪಡಿಗಳು ಆಗಿವೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಾಂಗ, ಶಾಸಕಾಂಗ ಎರಡೂ ವಿಫಲವಾಗಿವೆ. ದೇಶದ ಆರ್ಥಿಕ ವ್ಯವಸ್ಥೆ ದಿವಾಳಿಯ ಅಂಚಿಗೆ ತಲುಪಿದೆ. ದೇಶದಲ್ಲಿ 60 ಲಕ್ಷ ಉದ್ಯೋಗ ಭರ್ತಿಯಾಗದೆ ಸರಕಾರಿ ಕ್ಷೇತ್ರದಲ್ಲಿ ಖಾಲಿ ಇದೆ. ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ, ಹೊರಗುತ್ತಿಗೆ ನೀಡುವ ತೀರ್ಮಾನ ತೆಗದುಕೊಳ್ಳಲಾಗುತ್ತಿದೆ. ನಮಗೆ ಇನ್ನೂ ಹಣ ಹೆಚ್ಚು ಕೊಟ್ಟರೆ ದಿನನಿತ್ಯದ ಸಾಮಗ್ರಿಗಳು, ಪೆಟ್ರೋಲ್ ದೊರೆಯುತ್ತದೆ ಎನ್ನುವುದು ಬಿಟ್ಟರೆ ಬೇರೆ ಆಶಾದಾಯಕ ಪರಿಸ್ಥಿತಿ ಇಲ್ಲ. ಸಂಸತ್ತಿನಲ್ಲಿ ಈ ವಿಚಾರಗಳ ಬಗ್ಗೆ ಧ್ವನಿ ಎತ್ತಬೇಕಾದವರು ವೌನವಹಿಸಿದ್ದಾರೆ. ಗಂಭೀರ ಚರ್ಚೆಗಳು ನಡೆಯುತ್ತಿಲ್ಲ. ಎನ್‌ಆರ್‌ಸಿ, ಪೌರತ್ವ ಕಾಯ್ದೆ ತಿದ್ದುಪಡಿ ಇತ್ಯಾದಿ ರೊಟ್ಟಿ ಕೇಳುವವರಿಗೆ ದಾರಿ ತಪ್ಪಿಸಲು ಸರ್ಕಸ್ ತೋರಿಸಿದಂತೆ ಎನ್ನುವಂತಾಗಿದೆ. ಈಗ ನಮ್ಮ ಪಾಲಿಗೆ…

Read More