ಗೌಡ್ರ ಋಣ ಕಿರುಚಿತ್ರ ಕೇವಲ ಎರಡೇ ದಿನಗಳಲ್ಲಿ ಸುಮಾರು ೨ ಲಕ್ಷ ವೀಕ್ಷಣೆ

ಕೊಪ್ಪಳ ೧೫: ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಇವರ ಕಥೆಯಾಧಾರಿತ ‘ಗೌಡ್ರ ಋಣ’ ಕಿರುಚಿತ್ರವು ಬಿಡುಗಡೆಯಾದ ಎರಡೇ ದಿನಗಳಲ್ಲಿ ಯುಟ್ಯೂಬ್‌ನಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿಯೇ ಕಡಿಮೆ ಅವಧಿಯಲ್ಲಿ ಇಷ್ಟು ಜನ ಈ ಕಿರುಚಿತ್ರವನ್ನು ವೀಕ್ಷಣೆ ಮಾಡಿರುವುದು ಇದೇ ಮೊದಲು. ಈ ಕಿರುಚಿತ್ರವನ್ನು ಗಂಟೆಗೆ ಸರಾಸರಿ ಸುಮಾರು ಐದರಿಂದ ಆರು ಸಾವಿರ ಜನ ವೀಕ್ಷಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವಿನಾಶ ಚವ್ಹಾಣರವರು ನಿರ್ದೇಶನ ಮಾಡಿದ್ದಾರೆ. ಈ ಗೌಡ್ರ ಋಣ ಕಿರುಚಿತ್ರವು ಖ್ಯಾತ ಕಥೆಗಾರರಾದ ಡಾ. ಅಮರೇಶ ನುಗಡೋಣಿಯವರು ಡಿ. ೧೫-೧೨-೨೦೧೯ರಂದು ಬಿಡುಗಡೆಗೊಳಿಸಿದ್ದರು. ಈ ಕಥೆಯು ೨೦೧೬ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ದಿ. ಜಯತೀರ್ಥ ರಾಜಪುರೋಹಿತ ಸ್ಮರಣಾರ್ಥ ನೀಡುವ ದತ್ತಿ ಪ್ರಶಸ್ತಿಯಲ್ಲಿ ಎರಡನೇ ಬಹುಮಾನ ಬೆಳ್ಳಿ ಪದಕ ಪಡೆದಿಕೊಂಡಿತ್ತು. ಈ ಗೌಡ್ರ ಋಣ…

Read More