ಪ್ರತಿಭಟನೆಗಳಿಗೆ ಅನುಮತಿ ನೀಡದ ರಾಜ್ಯ ಬಿಜೆಪಿ ಸರ್ಕಾರ: ಖಂಡನೆ- ಭಾರಧ್ವಾಜ್

  ಗಂಗಾವತಿ: ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಆರೋಪಿಗಳನ್ನು ಶಿಕ್ಷಿಸಬೇಕೆಂದು ಏಕೈಕ ಒತ್ತಾಯದೊಂದಿಗೆ ಡಿಸೆಂಬರ್-೬ ರಂದು ನಡೆಸಲು ಉದ್ಧೇಶಿಸಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದ-ಲೆನಿನ್‌ವಾದ) ಆರೋಪಿಸಿದೆ. ಬೆಂಗಳೂರು ನಗರದ ಪುರಭವನದ ಬಳಿ ಶಾಂತಿಯುತವಾಗಿ ಪ್ರತಿಭಟಿಸಿ ಬಾಬ್ರಿ ಮಸೀದಿ ಧ್ವಂಸಗೊಳಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಲು ನಿರ್ಧಾರವಾಗಿತ್ತು. ಇದೇ ರೀತಿ ಭಾರತದಾಧ್ಯಂತ ಪ್ರತಿಭಟನೆ ನಡೆಸಲು ಲಿಬರೇಷನ್ ಪಕ್ಷ ನಿರ್ಧರಿಸಿತ್ತು. ಬೆಂಗಳೂರಿನ ಪೊಲೀಸರು ಪುರಭವನದ ಮುಂದೆ ಪ್ರತಿಭಟನೆ ಮಾಡಲು ಅನುಮತಿ ನೀಡದೆ ನಿರಾಕರಿಸಿದ್ದು, ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಕೇಂದ್ರದಲ್ಲಿ ಆಳುತ್ತಿರುವ ಬಿಜೆಪಿ ಸರ್ಕಾರ ತನ್ನ ಜನವಿರೋಧಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಕಾಶ್ಮೀರ ೧೩೦ ದಿನ ಕರ್ಫ್ಯೂ ಮುಂದುವರೆದು ಜನರ ಜೀವನ ದುಸ್ತರವಾಗಿದೆ. ಈ ಪ್ರಶ್ನೆ ಎತ್ತಿ ಯಾರೂ ಪ್ರತಿಭಟನೆ ಮಾಡಬಾರದೆಂದು ಕೇಂದ್ರ ಸರ್ಕಾರ ತನ್ನ ಫ್ಯಾಸಿಸ್ಟ್ ಹಿಡಿತದಿಂದ ಪ್ರತಿಭಟನೆಗಳನ್ನು…

Read More