ಡಾ. ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಕ್ರೂರ ಕೊಲೆ ಖಂಡಿಸಿ ಎಐಡಿಎಸ್ಓ,ಎ ಐ ಡಿ ವೈ ಓ ಪ್ರತಿಭಟನೆ

Koppal : ಹೈದರಾಬಾದ್ ನ ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕ್ರೂರ ಕೊಲೆ ಮಾಡಿದವರನ್ನು ಉಗ್ರವಾಗಿ ನಿದರ್ಶನವಾಗಿ ಶಿಕ್ಷೆ ವಿಧಿಸಬೇಕೆಂದು ಕೊಪ್ಪಳದ ಅಶೋಕ ವೃತ್ತದಲ್ಲಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ(ಎಐಡಿಎಸ್ಓ ) ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎ ಐ ಡಿ ವೈ ಓ) ಕೊಪ್ಪಳ ಜಿಲ್ಲಾ ಸಮಿತಿ ಜಂಟಿಯಾಗಿ ಪ್ರತಿಭಟನೆ ನಡೆಸಿದವು. ಈ ಘಟನೆಯನ್ನು ಖಂಡಿಸಿ ಸಂಘಟನೆಯ ಪ್ರಮುಖರು ಮತ್ತು ವಿದ್ಯಾರ್ಥಿಗಳು ತೀವ್ರವಾಗಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಘೋಷಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೊಪ್ಪಳದ ಹಿರಿಯ ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡುತ್ತಾ ಯುವ ಪಶುವೈದ್ಯ ದಿನನಿತ್ಯದ ಕೆಲಸ ಮುಗಿಸಿ ಮನೆಗೆ ತೆರಳುವಾಗ ನಾಲ್ಕು ಜನ ದುಷ್ಕರ್ಮಿಗಳು ಸಹಾಯ ಮಾಡುವ ನೆಪವೊಡ್ಡಿ ದುಷ್ಕೃತ್ಯ ಎಸಗಿದ್ದಾರೆ. ಉಸಿರುಗಟ್ಟಿಸಿ ಸಾಯಿಸಿದ ಮೃತದೇಹವನ್ನು ಸುಟ್ಟಿರುವುದು ನಾಗರಿಕ…

Read More