ಈ ಉಪಚುನಾವಣೆ ಯಾರಿಗೆ ಬೇಕಾಗಿದೆ?

ಈ ಆಪರೇಷನ್ ಕಮಲದಿಂದ ಬಿಜೆಪಿಗೆ ತಕ್ಷಣದ ಅಧಿಕಾರ ದೊರಕಿದರೂ ದೀರ್ಘಕಾಲೀನ ದುಷ್ಪರಿಣಾಮ ಅದಕ್ಕಿಂತ ಭಯಂಕರವಾಗಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಇಂಥ ನಿರ್ಲಜ್ಜತನ ಮಾಡಲು ಹೋಗಿ ಕಪಾಳ ಮೋಕ್ಷವಾಗಿದೆ. ಕರ್ನಾಟಕದ ಮತದಾರರು ಹದಿನೈದು ಮತಕ್ಷೇತ್ರಗಳಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ರಾಜ್ಯ ವಿಧಾನಸಭೆಗಾಗಲಿ, ಲೋಕಸಭೆಗಾಗಲಿ ಒಮ್ಮೆ ಚುನಾವಣೆ ನಡೆದರೆ ಐದು ವರ್ಷ ಮತ್ತೆ ಚುನಾವಣೆ ನಡೆಯುವದಿಲ್ಲ. ಆದರೆ ಗೆದ್ದ ಅಭ್ಯರ್ಥಿ ಸತ್ತರೆ, ಆತನ ಆಯ್ಕೆ ಅನೂರ್ಜಿತಗೊಂಡರೆ ಅಥವಾ ಅಕಸ್ಮಾತ್ ಆತ ರಾಜೀನಾಮೆ ನೀಡಿದರೆ ಮಾತ್ರ ಅಪರೂಪಕ್ಕೆ ಒಮ್ಮೆ ಜನ ಪ್ರತಿನಿಧಿಯನ್ನು ಚುನಾಯಿಸಲು ಉಪಚುನಾವಣೆ ನಡೆಯುತ್ತದೆ.ಆದರೆ ಕರ್ನಾಟಕ ವಿಧಾನಸಭೆಯ ಹದಿನೈದು ಕ್ಷೇತ್ರಗಳಲ್ಲಿ ಈಗ ನಡೆಯುತ್ತಿರುವ ಚುನಾವಣೆ ಯಾರೋ ಸತ್ತುದ್ದಕಲ್ಲ, ಒಂದೂವರೆ ವರ್ಷದ ಹಿಂದೆ ಚುನಾಯಿತರಾಗಿದ್ದ ಹದಿನೇಳು ಮಂದಿ ಶಾಸಕರು ರಾಜೀನಾಮೆ ನೀಡಿದ್ದರಿಂದ ಈ ಚುನಾವಣೆ ನಡೆಯುತ್ತಿದೆ. ತಾವು ಹಿಂದೆ ಚುನಾಯಿತರಾಗಿದ್ದ ಪಕ್ಷಕ್ಕೆ ರಾಜೀನಾಮೆ ನೀಡಿ ಈಗ ಬಿಜೆಪಿ ಪರವಾಗಿ…

Read More