ಹಂಪಿ ಉತ್ಸವದಲ್ಲಿ ಜಾನಪದ ಕಲಾವಿದರಿಗೆ ತಾರತಮ್ಯ ಸಲ್ಲದು -ಕಜಾಪ ಜಿಲ್ಲಾಧ್ಯಕ್ಷ ಸಿ. ಮಂಜುನಾಥ

ಬಳ್ಳಾರಿ, ನ. ೩೦: ಬರುವ ಹಂಪಿ ಉತ್ಸವದಲ್ಲಿ ಜಾನಪದ ಕಲಾವಿದರಿಗೆ ಪ್ರಮುಖ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದರ ಜತೆ ಸಮಾನ ಗೌರವ, ಸಂಭಾವನೆ ನೀಡಬೇಕು ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಮಂಜುನಾಥ ಒತ್ತಾಯಿಸಿದರು. ಜಿಲ್ಲೆಯ ಹಂಪಾಪಟ್ಟಣ ಗ್ರಾಮದಲ್ಲಿ ಶನಿವಾರ ಕನ್ನಡ ಜಾನಪದ ಪರಿಷತ್ ಹಗರಿಬೊಮ್ಮನಹಳ್ಳಿ ತಾಲೂಕು ಘಟಕ ಆಯೋಜಿಸಿದ್ದ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಜಾನಪದ ಪ್ರಾಕಾರಗಳ ರೇಖಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಶಿಷ್ಟ ಪ್ರದರ್ಶಕರಿಗೆ ನೀಡುವ ಸಂಭಾವನೆ, ವಸತಿ, ಊಟೋಪಾಚಾರವನ್ನು ಜಾನಪದ ಕಲಾವಿದರಿಗೆ ಒದಗಿಸಬೇಕು. ಬೆಂಗಳೂರು ಮೂಲದ ಭರತನಾಟ್ಯ, ಕೂಚುಪುಡಿ, ಗಾಯಕ ಗಾಯಕಿಯರಿಗೆ ದೊರೆಯುವ ಸೌಕರ್ಯಗಳು ಜಾನಪದ ಕಲಾವಿದರಿಗೆ ದೊರೆಯುವಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಜಾನಪದ ಕಲಾವಿದರಿಗೆ, ಕಲಾ ಪ್ರದರ್ಶಕರಿಗೆ ತಾರತಮ್ಯ ಮಾಡಿದರೆ ಕಜಾಪ ಸಹಿಸುವುದಿಲ್ಲ. ಸಮಾನ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಂಜುನಾಥ ಎಚ್ಚರಿಸಿದರು. ಜಾನಪದ ಕಲೆಗಳನ್ನು…

Read More