ಅನರ್ಹ ಶಾಸಕ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದಾಗ ಚಪ್ಪಲಿ ತೂರಾಟ

ಮಂಡ್ಯ, ನ.18: ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಸೋಮವಾರ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರೆನ್ನಲಾದ ಕೆಲವರು ಚಪ್ಪಲಿ ಎಸೆದ ಘಟನೆ ನಡೆಯಿತು. ಸಚಿವ ಮಾಧುಸ್ವಾಮಿ, ಪತ್ನಿ ದೇವಕಿ ಮತ್ತು ಬಿಜೆಪಿ ಮುಖಂಡರ ಜತೆ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸಲು ನಾರಾಯಣಗೌಡ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ ಜೆಡಿಎಸ್‍ನ ಕೆಲವರು ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. ಆಕ್ರೋಶಗೊಂಡ ನಾರಾಯಣಗೌಡ ಜೆಡಿಎಸ್ ಕಾರ್ಯಕರ್ತರ ಬಳಿಗೆ ತೆರಳಲು ಯತ್ನಿಸಿದರು. ಆದರೆ, ಪೊಲೀಸರು ಅವರನ್ನು ತಡೆದು ತಾಲೂಕು ಕಚೇರಿ ಒಳಗೆ ಕರೆದೊಯ್ದರು. ನಾಮಪತ್ರ ಸಲ್ಲಿಸಿ ಹೊರಬಂದ ನಾರಾಯಣಗೌಡರನ್ನು ಪೊಲೀಸರು ಕಾರಿನಲ್ಲಿ ಕರೆದೊಯ್ದರು. ಈ ವೇಳೆಯೂ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ಮತ್ತು ಜೆಡಿಎಸ್ ಬಾವುಟಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಪರಿಣಾಮ ಎದುರಿಸಬೇಕಾಗುತ್ತದೆ: ನಾರಾಯಣಗೌಡ ನನಗೆ ಜೆಡಿಎಸ್ ಕಾರ್ಯಕರ್ತರು ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಸಚಿವ…

Read More