ಸರಕಾರ ರಚನೆಗೆ ಎನ್ ಸಿಪಿಗೆ ಆಹ್ವಾನ ನೀಡಿದ ರಾಜ್ಯಪಾಲ

 ಮುಂಬೈ , ನ . 11 : ಮಹಾರಾಷ್ಟ್ರದ ರಾಜ್ಯಪಾಲರು ಎನ್ ಸಿಪಿಗೆ 24 ಗಂಟೆಗಳ ಕಾಲಾವಕಾಶ ನೀಡಿದ್ದು , ಸರಕಾರ ರಚನೆಗೆ ಪಕ್ಷವನ್ನು ಆಹ್ವಾನಿಸಿದ್ದಾರೆ . ರಾಜ್ಯದಲ್ಲಿ ಸರಕಾರ ರಚನೆಯ ಗೊಂದಲ ಮುಂದುವರಿದಿರುವಂತೆಯೇ ರಾಜ್ಯಪಾಲರು ಎನ್ ಸಿಪಿಗೆ ಈ ಕರೆ ನೀಡಿದ್ದಾರೆ . ಈಗಾಗಲೇ ಆದಿತ್ಯ ಠಾಕ್ರೆ ಸಹಿತ ಶಿವಸೇನೆಯ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿದ್ದು ,  48 ಗಂಟೆಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು . ಆದರೆ ರಾಜ್ಯಪಾಲರು ಈ ಮನವಿಯನ್ನು ತಿರಸ್ಕರಿಸಿದ್ದರು . ಇನ್ನೊಂದೆಡೆ ಶಿವಸೇನೆಗೆ ಬೆಂಬಲ ನೀಡುವ ನಿರ್ಧಾರದಿಂದ ಕಾಂಗ್ರೆಸ್ ಕೊನೆ ಕ್ಷಣದಲ್ಲಿ ಹಿಂದೆ ಸರಿದಿತ್ತು . ಈ ನಿಟ್ಟಿನಲ್ಲಿ ಎನ್ ಸಿಪಿ ಜೊತೆ ಹೆಚ್ಚಿನ ಮಾತುಕತೆಯ ಅವಶ್ಯಕತೆ ಇದೆ ಎಂದಿತ್ತು . ಇದೀಗ ರಾಜ್ಯಪಾಲರು ಎನ್ ಸಿಪಿಗೆ ಸರಕಾರ ರಚನೆಯ ಕರೆ ನೀಡಿದ್ದಾರೆ . ” ಇಂದು 8 : 30ಕ್ಕೆ…

Read More